ಡೊನಾಲ್ಡ್ ಟ್ರಂಪ್‌ - ಕ್ಸಿ ಜಿನ್‌ಪಿಂಗ್ 
ವಿದೇಶ

ಅಮೆರಿಕ-ಚೀನಾ ಶೃಂಗಸಭೆ ಆರಂಭವಾಗುತ್ತಿದ್ದಂತೆ ಟ್ರಂಪ್‌ಗೆ 'ಖಡಕ್' ವಾರ್ನಿಂಗ್‌ ಕೊಟ್ಟ ಕ್ಸಿ ಜಿನ್‌ಪಿಂಗ್‌!

ಇಂದು ಬೀಜಿಂಗ್‌ನಲ್ಲಿ ಹಲವಾರು ಕಠಿಣ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಾಗಿರುವ ಸೂಪರ್‌ಪವರ್ ಶೃಂಗಸಭೆ ಆರಂಭವಾಗುತ್ತಿದ್ದಂತೆ ಚೀನಾ ಅಧ್ಯಕ್ಷರು, ಟ್ರಂಪ್‌ ಸಮ್ಮುಖದಲ್ಲೇ ನೇರ ಎಚ್ಚರಿಕೆ ನೀಡಿದ್ದಾರೆ.

ಬೀಜಿಂಗ್: ತೈವಾನ್ ಸಮಸ್ಯೆಯನ್ನು ಸರಿಯಾಗಿ ನಿರ್ವಹಿಸದಿದ್ದರೆ ಉಭಯ ದೇಶಗಳ ನಡುವೆ ನೇರ "ಸಂಘರ್ಷ"ಕ್ಕೆ ಕಾರಣವಾಗಬಹುದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಗುರುವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಖಡಕ್ ಎಚ್ಚರಿಕೆ ನೀಡಿದರು.

ಇಂದು ಬೀಜಿಂಗ್‌ನಲ್ಲಿ ಹಲವಾರು ಕಠಿಣ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಾಗಿರುವ ಸೂಪರ್‌ಪವರ್ ಶೃಂಗಸಭೆ ಆರಂಭವಾಗುತ್ತಿದ್ದಂತೆ ಚೀನಾ ಅಧ್ಯಕ್ಷರು, ಟ್ರಂಪ್‌ ಸಮ್ಮುಖದಲ್ಲೇ ನೇರ ಎಚ್ಚರಿಕೆ ನೀಡಿದ್ದಾರೆ.

ಚೀನಾಗೆ ಆಗಮಿಸಿದ ಡೊನಾಲ್ಡ್ ಟ್ರಂಪ್, ಕ್ಸಿ ಅವರನ್ನು "ಮಹಾನ್ ನಾಯಕ" ಮತ್ತು "ಸ್ನೇಹಿತ" ಎಂದು ಹಾಡಿ ಹೊಗಳಿದರು. ಆದರೆ ಟ್ರಂಪ್ ಅವರನ್ನು ಸ್ವಾಗತಿಸುವಾಗ ಆಡಂಬರವನ್ನು ಮೀರಿ, ಕ್ಸಿ ಕಡಿಮೆ ಉತ್ಸಾಹಭರಿತ ಮಾತುಗಳನ್ನು ಬಳಸಿದರು. ಎರಡೂ ಕಡೆಯವರು "ಪ್ರತಿಸ್ಪರ್ಧಿಗಳಲ್ಲ, ಪಾಲುದಾರರಾಗಿರಬೇಕು" ಎಂದು ಹೇಳಿದರು. ಅಲ್ಲದೆ ತನ್ನ ಪ್ರದೇಶವೆಂದು ಹೇಳಿಕೊಳ್ಳುವ ಸ್ವಯಂ ಆಡಳಿತದ ಪ್ರಜಾಪ್ರಭುತ್ವ ತೈವಾನ್ ಸಮಸ್ಯೆಯನ್ನು ನೇರವಾಗಿ ಎತ್ತಿ ತೋರಿಸಿದರು.

ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ನಡೆದ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಮಾತನಾಡಿದ ಕ್ಸಿ, ತೈವಾನ್ ವಿಷಯವು ಅಮೆರಿಕ-ಚೀನಾ ಸಂಬಂಧಗಳಲ್ಲೇ ಅತ್ಯಂತ ಸೂಕ್ಷ್ಮ ಮತ್ತು ಪ್ರಮುಖವಾದದ್ದು ಎಂದಿದ್ದಾರೆ.

"ತಪ್ಪಾಗಿ ನಿರ್ವಹಿಸಿದರೆ, ಎರಡು ರಾಷ್ಟ್ರಗಳ ನಡುವೆ ಸಂಘರ್ಷಕ್ಕೆ ಕಾರಣವಾಗಬಹುದು ಅಥವಾ ಸಂಘರ್ಷಕ್ಕೆ ಬರಬಹುದು. ಇಡೀ ಚೀನಾ-ಅಮೆರಿಕ ಸಂಬಂಧವನ್ನು ಅತ್ಯಂತ ಅಪಾಯಕಾರಿ ಪರಿಸ್ಥಿತಿಗೆ ತಳ್ಳಬಹುದು" ಎಂದು ಕ್ಸಿ ಎಚ್ಚರಿಸಿದರು ಎಂದು ಸರ್ಕಾರಿ ಪ್ರಸಾರಕ ಸಿಸಿಟಿವಿ ವರದಿ ಮಾಡಿದೆ.

ತೈವಾನ್‌ನ ಸ್ವಾತಂತ್ರ್ಯ ಮತ್ತು ತೈವಾನ್ ಜಲಸಂಧಿಯಲ್ಲಿನ ಶಾಂತಿ ಇವೆರಡೂ ‘ಬೆಂಕಿ ಮತ್ತು ನೀರು’ ಇದ್ದಂತೆ, ಎಂದಿಗೂ ಜೊತೆಯಾಗಿರಲು ಸಾಧ್ಯವಿಲ್ಲ. ಅಮೆರಿಕವು ತೈವಾನ್‌ಗೆ ನೀಡುತ್ತಿರುವ ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಒಪ್ಪಂದಗಳನ್ನು ನಿಲ್ಲಿಸಬೇಕು ಮತ್ತು ಚೀನಾದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಖಡಕ್‌ ಆಗಿ ಹೇಳಿದ್ದಾರೆ.

ಒಂದು ವೇಳೆ ತೈವಾನ್ ವಿಷಯವನ್ನು ಸರಿಯಾಗಿ ನಿಭಾಯಿಸಿದರೆ ಮಾತ್ರ ಉಭಯ ದೇಶಗಳ ಸಂಬಂಧ ಸ್ಥಿರವಾಗಿರಲು ಸಾಧ್ಯ. ಚೀನಾ ಮತ್ತು ಅಮೆರಿಕ ಸ್ಪರ್ಧಿಗಳಾಗುವ ಬದಲು ಪಾಲುದಾರರಾಗಬೇಕು ಎಂದು ಕ್ಸಿ ಜಿನ್‌ಪಿಂಗ್ ಪ್ರತಿಪಾದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಅಲ್ಲಿ ಪ್ರತಿ ಮತದಾರನಿಗೂ photo ID’ಯಿದೆ: ಭಾರತದ ಚುನಾವಣಾ ವ್ಯವಸ್ಥೆ ಕೊಂಡಾಡಿದ ಟ್ರಂಪ್, ಅಮೆರಿಕಾ ಮತದಾನ ವ್ಯವಸ್ಥೆ ಬದಲಾವಣೆಗೆ ಪಟ್ಟು, SAVE America Act ಜಾರಿಗೆ ಆಗ್ರಹ..!

ಜಿಲ್ಲಾವಾರು ಕಾಂಗ್ರೆಸ್ ಶಾಸಕರೊಂದಿಗೆ ನಿಯಮಿತ ಸಭೆಗೆ ಸಿಎಂ ಡಿಕೆ. ಶಿವಕುಮಾರ್‌ ನಿರ್ಧಾರ..!

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!