ಫೆಬ್ರವರಿ 13, 2025ರಂದು ವಾಷಿಂಗ್ಟನ್‌ನ ಶ್ವೇತಭವನದ ಈಸ್ಟ್ ರೂಮ್‌ನಲ್ಲಿ ನಡೆದ ಸುದ್ದಿಗೋಷ್ಠಿಯ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಹಸ್ತಲಾಘವ ಮಾಡಿದರು. 
ವಿದೇಶ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಶೀಘ್ರ ಅಂತಿಮ ಸಂಶಯ: ಮೋದಿ-ಟ್ರಂಪ್ ಸದ್ಯ ಮಾತುಕತೆ ಸಾಧ್ಯ; ಜಾಮಿಸನ್ ಗ್ರೀರ್

ಎರಡೂ ದೇಶಗಳು ಇನ್ನೂ ಬಗೆಹರಿಯಬೇಕಿರುವ ಪ್ರಮುಖ ವಿಷಯಗಳ ಸಂಪೂರ್ಣ ಪಟ್ಟಿಯನ್ನು ಗುರುತಿಸಿದ್ದು, ಅವುಗಳನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತಿವೆ ಎಂದು ಗ್ರೀರ್ ಹೇಳಿದರು.

ಅಮೆರಿಕದ ವಾಣಿಜ್ಯ ಪ್ರತಿನಿಧಿ ಜಾಮಿಸನ್ ಗ್ರೀರ್ ನಿನ್ನೆ ಗುರುವಾರ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಸದ್ಯಕ್ಕೆ ಯಾವುದೇ ತಕ್ಷಣದ ಬೆಳವಣಿಗೆ ಇಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ, ಮಾತುಕತೆಯ ಪ್ರಗತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೀಘ್ರದಲ್ಲೇ ಮತ್ತೊಮ್ಮೆ ದೂರವಾಣಿ ಮೂಲಕ ಮಾತುಕತೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಮಿಲ್ವಾಕಿಯಲ್ಲಿ ನಡೆದ ಜಿ20 ವಾಣಿಜ್ಯ ಸಚಿವರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರೀರ್, ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಅಮೆರಿಕದಲ್ಲಿ ನಾವು ಹೇಳುವಂತೆ, ಇದೀಗ ನಾವು ಅಂತಿಮ ಹಂತದಲ್ಲಿದ್ದೇವೆ. ಹೀಗಾಗಿ, ಒಪ್ಪಂದದ ಕೊನೆಯ ಹಂತಕ್ಕೆ ನಾವು ತಲುಪಿದ್ದೇವೆ ಎಂದು ನಾನು ಹೇಳುತ್ತೇನೆ ಎಂದರು.

ಎರಡೂ ದೇಶಗಳು ಇನ್ನೂ ಬಗೆಹರಿಯಬೇಕಿರುವ ಪ್ರಮುಖ ವಿಷಯಗಳ ಸಂಪೂರ್ಣ ಪಟ್ಟಿಯನ್ನು ಗುರುತಿಸಿದ್ದು, ಅವುಗಳನ್ನು ಪರಿಹರಿಸಲು ಕಾರ್ಯನಿರ್ವಹಿಸುತ್ತಿವೆ ಎಂದು ಗ್ರೀರ್ ಹೇಳಿದರು.

ಸದ್ಯಕ್ಕೆ ಯಾವುದೇ ತಕ್ಷಣದ ಬೆಳವಣಿಗೆ ಇದೆ ಎಂದು ಅನಿಸುತ್ತಿಲ್ಲ. ಆದರೆ, ಯಾವೆಲ್ಲ ವಿಷಯಗಳು ಇನ್ನೂ ಅಡ್ಡಿಯಾಗಿವೆ ಎಂಬುದನ್ನು ನಾವು ಸಂಪೂರ್ಣವಾಗಿ ಗುರುತಿಸಿದ್ದೇವೆ. ಅವುಗಳನ್ನು ಪರಿಹರಿಸಲು ನಾವು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ಬುಧವಾರ ಜಿ20 ಸಭೆಯ ನೇಪಥ್ಯದಲ್ಲಿ ಗ್ರೀರ್ ಅವರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ನಡೆದ ಚರ್ಚೆಗಳು ಬಹಳ ರಚನಾತ್ಮಕವಾಗಿದ್ದವು ಎಂದು ಅವರು ಬಣ್ಣಿಸಿದರು.

ಅವರು ಭಾರತದಲ್ಲಿರುವುದರಿಂದ ಮತ್ತು ನಾವು ಇಲ್ಲಿರುವುದರಿಂದ, ನಮ್ಮ ಅಧಿಕಾರಿಗಳು ಸದ್ಯದಲ್ಲೇ ಸಭೆ ನಡೆಸುತ್ತಿದ್ದಾರೆ ಎಂದು ನಡೆಯುತ್ತಿರುವ ಮಾತುಕತೆಗಳನ್ನು ಉಲ್ಲೇಖಿಸಿ ಗ್ರೀರ್ ಹೇಳಿದರು.

ಮೊನ್ನೆ ಬುಧವಾರ ಬೆಳಗ್ಗೆ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ನಡೆದ ದೂರವಾಣಿ ಮಾತುಕತೆ ಬಹಳ ರಚನಾತ್ಮಕವಾಗಿತ್ತು ಎಂದು ಗ್ರೀರ್ ತಿಳಿಸಿದರು. ಮಾತುಕತೆಯ ಪ್ರಗತಿಯನ್ನು ಪರಿಶೀಲಿಸಲು ಇಬ್ಬರೂ ನಾಯಕರು ಶೀಘ್ರದಲ್ಲೇ ಮತ್ತೊಮ್ಮೆ ಮಾತನಾಡುವ ಸಾಧ್ಯತೆಯಿದೆ ಎಂದರು.

ಈ ವಿಷಯದಲ್ಲಿ ಪ್ರಗತಿ ಎಷ್ಟಾಗಿದೆ ಮತ್ತು ನಾವು ಎಲ್ಲಿದ್ದೇವೆ ಎಂಬುದನ್ನು ಪರಿಶೀಲಿಸಲು ಅಧ್ಯಕ್ಷರು ಮತ್ತು ಪ್ರಧಾನಮಂತ್ರಿ ಅವರು ಶೀಘ್ರದಲ್ಲೇ ಮತ್ತೊಂದು ದೂರವಾಣಿ ಮಾತುಕತೆ ನಡೆಸಬಹುದು ಎಂಬುದು ನನ್ನ ಅನಿಸಿಕೆ ಎಂದು ಹೇಳಿದರು.

ಬುಧವಾರ ಪ್ರಧಾನಿ ಮೋದಿ ಮತ್ತು ಟ್ರಂಪ್ ಅವರು ವ್ಯಾಪಾರ, ರಕ್ಷಣಾ ಕ್ಷೇತ್ರ, ಇಂಧನ, ನಿರ್ಣಾಯಕ ತಂತ್ರಜ್ಞಾನಗಳು ಸೇರಿದಂತೆ ಪರಸ್ಪರ ಹಿತಾಸಕ್ತಿಯ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದ ಪ್ರಗತಿಯನ್ನು ಪರಿಶೀಲಿಸಿದರು.

ಭಾರತ ಮತ್ತು ಅಮೆರಿಕ ಫೆಬ್ರವರಿಯಲ್ಲಿ ತಮ್ಮ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮೊದಲ ಹಂತಕ್ಕೆ ಸಂಬಂಧಿಸಿದ ಚೌಕಟ್ಟನ್ನು ಅಂತಿಮಗೊಳಿಸಿರುವುದಾಗಿ ಘೋಷಿಸಿದ್ದವು. ಆದರೆ, ಅಮೆರಿಕದ ಸುಂಕ ನೀತಿಯಲ್ಲಿ ಆಗಿರುವ ಬದಲಾವಣೆಗಳಿಂದಾಗಿ ಮತ್ತಷ್ಟು ಮಾತುಕತೆಗಳು ನಡೆಯುವಂತಾಗಿದೆ.

ಸೆಪ್ಟೆಂಬರ್ 24ರಂದು ಪಿಯೂಷ್ ಗೋಯಲ್ ಅವರು ವ್ಯಾಪಾರ ಒಪ್ಪಂದ “ಪೂರ್ಣಗೊಂಡಿದೆ” ಎಂದು ಹೇಳಿದ್ದರು. ಅಮೆರಿಕದ ಮಾರುಕಟ್ಟೆಯಲ್ಲಿ ಭಾರತದ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಭಾರತಕ್ಕೆ ಸೂಕ್ತ ಸ್ಪರ್ಧಾತ್ಮಕ ಅವಕಾಶವನ್ನು ಅಮೆರಿಕ ಒದಗಿಸಿದ ಬಳಿಕ ಒಪ್ಪಂದವನ್ನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದರು.

ಅಮೆರಿಕದ ಮಾರುಕಟ್ಟೆಯಲ್ಲಿ ಭಾರತದ ಪ್ರಮುಖ ಪ್ರತಿಸ್ಪರ್ಧಿಗಳಲ್ಲಿ ಆಸಿಯಾನ್ ರಾಷ್ಟ್ರಗಳು, ಚೀನಾ ಮತ್ತು ಬಾಂಗ್ಲಾದೇಶ ಸೇರಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ವಿರುದ್ಧ ಪ್ರತಿಭಟನೆಗೆ ಬ್ರೇಕ್: ನವದೆಹಲಿಯಲ್ಲಿ ಬಿಎನ್‌ಎಸ್‌ಎಸ್ ಸೆಕ್ಷನ್ 163 ಜಾರಿ, ಎಲ್ಲೆಡೆ ಭದ್ರತೆ ಹೆಚ್ಚಳ..!

ಗಾಂಧಿ ಜಯಂತಿ: ರಾಜಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ, ವಿಜಯ್ ಘಾಟ್‌ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿಗೆ ಪ್ರಧಾನಿ ಮೋದಿ ನಮನ..!

FlyDubai ವಿಮಾನ ಪತನ ಯತ್ನದ ಹಿಂದೆ ಇರಾನ್ ಕೈವಾಡ..? ತುಂಬಾ ಕಠಿಣ ಹೊಡೆತ ಬೀಳಲಿದೆ; ಟ್ರಂಪ್ ಕಠಿಣ ಎಚ್ಚರಿಕೆ

ಫಾರಂ-7 ದುರ್ಬಳಕೆ ಆರೋಪ: ಕ್ರಮಕ್ಕೆ ಚು.ಆಯೋಗ ಸೂಚನೆ, ಐತಿಹಾಸಿಕ ದಿನ ಎಂದ ಸಿಎಂ ಡಿಕೆಶಿ

‘ನಿಮ್ಮ ಪ್ರಾರ್ಥನೆಗೆ ಧನ್ಯವಾದ’: ಭಾರತದ ಹೀರೋ ಪೈಲಟ್ ಸ್ಮಿತ್ ಮಚ್ಚರ್ ಅಪಾಯದಿಂದ ಪಾರು!