ಕ್ಯಾಪ್ಟನ್ ಸ್ಮಿತ್ ಮಚ್ಚರ್ ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು 
ವಿದೇಶ

ಕಾಕ್‌ಪಿಟ್ ಬಾಗಿಲು ತೆರೆಯುವುದಷ್ಟೇ ನನ್ನ ಅಂತಿಮ ಅವಕಾಶವಾಗಿತ್ತು, ಹಾಗಾಗಿ ನನ್ನಲ್ಲಿದ್ದ ಎಲ್ಲಾ ಶಕ್ತಿ ಬಳಸಿದೆ: ಕೊನೆಯ ಕ್ಷಣ ಸ್ಮರಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚರ್..!

ಬಳಿಕ ಕಾಕ್‌ಪಿಟ್‌ನ ನೆಲದ ಮೇಲೆ ಬಿದ್ದಿದ್ದಾಗ ವಿಮಾನ ಕೆಳಮುಖವಾಗಿ ಇಳಿಯುತ್ತಿರುವುದು ಗಮನಕ್ಕೆ ಬಂದಿತ್ತು. ಗಾಯಗಳಿಂದಾಗಿ ತೀವ್ರ ಗೊಂದಲಕ್ಕೊಳಗಾಗಿದ್ದೆ. ಹೀಗಾಗಿ ಸರಿಯಾಗಿ ನೋಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದೆ. ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ.

ಕಾಕ್‌ಪಿಟ್ ಬಾಗಿಲು ತೆರೆದುದಷ್ಟೇ ನನ್ನ ಕೊನೆಯ ಅವಕಾಶವಾಗಿತ್ತು, ಹಾಗಾಗಿ ಕೊನೆಯ ಹೋರಾಟ ನಡೆಸಿದೆ ಎಂದು ಫ್ಲೈದುಬೈ ವಿಮಾನದಲ್ಲಿ ಸಹಪೈಲಟ್ ದಾಳಿ ನಡೆಸಿದ ಭೀಕರ ಕ್ಷಣಗಳನ್ನು ಕ್ಯಾಪ್ಟನ್ ಸ್ಮಿತ್ ಮಚ್ಚರ್ ಇದೀಗ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಶನಿವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಭಾರತೀಯ ಪೈಲಟ್, ದಾಳಿ ಆರಂಭಕ್ಕೂ ಮುನ್ನ ಸಹಪೈಲಟ್ ಪ್ರಾರ್ಥನೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಅವರ ಖಾಸಗಿ ಕ್ಷಣಕ್ಕೆ ಗೌರವ ಸೂಚಿಸುವ ಉದ್ದೇಶದಿಂದ ತಾನು ಉದ್ದೇಶಪೂರ್ವಕವಾಗಿ ಬೇರೆಡೆ ನೋಡುತ್ತಿದ್ದೆ ಎಂದು ಮಚ್ಚರ್ ತಿಳಿಸಿದ್ದಾರೆ.

ಆದರೆ, ಕೆಲ ನಿಮಿಷಗಳ ಬಳಿಕ ನನ್ನ ತಲೆಯ ಹಿಂಭಾಗಕ್ಕೆ ಬಲವಾದ ಹೊಡೆತ ಬಿದ್ದಿತ್ತು. ಈ ವೇಳೆ “ವಿಮಾನಕ್ಕೆ ಏನೋ ಆಗಿದೆ ಎಂದು ನಾನು ಭಾವಿಸಿದೆ. ಆದರೆ, ಹೊಡೆತಗಳು ಮುಂದುವರಿದಾಗ, ಅಪಾಯ ವಿಮಾನದಿಂದಲ್ಲ, ಕಾಕ್‌ಪಿಟ್‌ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ದಾಳಿ ನಡೆಸುತ್ತಿದ್ದಾನೆಂಬುದು ಅರ್ಥವಾಯಿತು.

ಬಳಿಕ ಕಾಕ್‌ಪಿಟ್‌ನ ನೆಲದ ಮೇಲೆ ಬಿದ್ದಿದ್ದಾಗ ವಿಮಾನ ಕೆಳಮುಖವಾಗಿ ಇಳಿಯುತ್ತಿರುವುದು ಗಮನಕ್ಕೆ ಬಂದಿತ್ತು. ಗಾಯಗಳಿಂದಾಗಿ ತೀವ್ರ ಗೊಂದಲಕ್ಕೊಳಗಾಗಿದ್ದೆ. ಹೀಗಾಗಿ ಸರಿಯಾಗಿ ನೋಡಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದೆ. ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಈ ವೇಳೆ ಕಾಕ್‌ಪಿಟ್ ಬಾಗಿಲು ಸಮೀಪದಲ್ಲೇ ಇದೆ ಎಂಬುದು ಅವರಿಗೆ ಬಂದಿತು. ಗಾಯಗಳ ನಡುವೆಯೂ ಅಲ್ಲಿಗೆ ತಲುಪಿ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದೆ. ಆದರೆ, ಸಹ ಪೈಲಟ್ ಮತ್ತೆ ಬಾಗಿಲು ಮುಚ್ಚಿದ. ನಂತರ ಹೋರಾಟ ಮುಂದುವರೆಸಿ, ನನ್ನಲ್ಲಿದ್ದ ಎಲ್ಲಾ ಶಕ್ತಿಯನ್ನು ಬಳಸಿ ಮತ್ತೆ ಬಾಗಿಲು ತೆಗೆದೆ. ಈ ವೇಳೆ ಹೊರಗಿದ್ದವರು ಕಾಕ್‌ಪಿಟ್‌ಗೆ ಪ್ರವೇಶಿಸಿ ಸಹಪೈಲಟ್‌ನನ್ನು ನಿಯಂತ್ರಿಸಲು ನೆರವಾದರು.

“ನನ್ನೊಳಗೆ ಉಳಿದಿದ್ದ ಕೊನೆಯ ಹೋರಾಟವನ್ನೂ ನಡೆಸಿದೆ. ನಾನು ಹಾಗೆ ಮಾಡದಿದ್ದರೆ ಸಾಯುತ್ತಿದ್ದೆ” ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 30ರಂದು ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ FZ1073 ವಿಮಾನದಲ್ಲಿ ಈ ಘಟನೆ ನಡೆದಿತ್ತು. ವಿಮಾನದಲ್ಲಿ 174 ಮಂದಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದರು. ಘಟನೆಯ ಬಳಿಕ ಬೋಯಿಂಗ್ 737-8 ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನ ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲಅಜೀಜ್ ವಿಮಾನ ನಿಲ್ದಾಣಕ್ಕೆ ತುರ್ತು ಮಾರ್ಗ ಬದಲಾವಣೆ ಮಾಡಲಾಗಿತ್ತು.

ಸುದ್ದಿಸಂಸ್ಥೆ ರಾಯಿಟರ್ಸ್ ಉಲ್ಲೇಖಿಸಿರುವ ವಿಮಾನ ಟ್ರ್ಯಾಕಿಂಗ್ ಮಾಹಿತಿಯ ಪ್ರಕಾರ, ಸೌದಿ ಅರೇಬಿಯಾದ ಮೇಲೆ ಹಾರುತ್ತಿದ್ದ ವೇಳೆ ವಿಮಾನವು ಕೇವಲ 30ಕ್ಕೂ ಹೆಚ್ಚು ಸೆಕೆಂಡ್‌ಗಳಲ್ಲಿ ಸುಮಾರು 16,625 ಅಡಿ ಎತ್ತರವನ್ನು ಕಳೆದುಕೊಂಡಿತ್ತು. ಘಟನೆ ಕುರಿತು ಯುಎಇ ಕೂಡ ತನ್ನದೇ ಆದ ವಿವರಗಳನ್ನು ನೀಡಿದೆ.

ಯುಎಇ ಅಟಾರ್ನಿ ಜನರಲ್ ಹಮದ್ ಸೈಫ್ ಅಲ್ ಶಮ್ಸಿ ಅವರ ಪ್ರಕಾರ, ತನಿಖೆಯಲ್ಲಿ ಸಹಪೈಲಟ್ ಕ್ರ್ಯಾಶ್ ಆಕ್ಸ್‌ನಿಂದ ಮಚ್ಚರ್ ಮೇಲೆ ದಾಳಿ ನಡೆಸಿ ವಿಮಾನದ ಹಾರಾಟ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆಯಲು ಯತ್ನಿಸಿದ್ದಾನೆ ಎಂಬುದು ಪತ್ತೆಯಾಗಿದೆ. ಯುಎಇ ಈ ಘಟನೆಯನ್ನು ‘ಭಯೋತ್ಪಾದಕ ಕೃತ್ಯದ ಯತ್ನ’ ಎಂದು ಬಣ್ಣಿಸಿದೆ.

ಆದಾಗ್ಯೂ, ತನಿಖೆ ಇನ್ನೂ ಮುಂದುವರಿದಿದ್ದು, ಘಟನೆಯ ಹಿನ್ನೆಲೆ, ದಾಳಿಯ ಉದ್ದೇಶ ಹಾಗೂ ಇದರಲ್ಲಿ ಬೇರೆಯವರ ಸಂಪರ್ಕವಿತ್ತೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ತಾಂತ್ರಿಕ ಪರೀಕ್ಷೆಗಳು ಹಾಗೂ ಭೌತಿಕ ಮತ್ತು ಡಿಜಿಟಲ್ ಸಾಕ್ಷ್ಯಗಳ ವಿಶ್ಲೇಷಣೆಯೂ ಮುಂದುವರಿದಿದೆ ಎಂದು ಯುಎಇ ತಿಳಿಸಿದೆ.

ಹಲವು ಮಾಧ್ಯಮ ವರದಿಗಳಲ್ಲಿ ಸಹಪೈಲಟ್‌ನನ್ನು ಓಮನ್ ಪ್ರಜೆ ಹಮಾಮ್ ಅಲ್-ಹಮ್ಮಾಮಿ ಎಂದು ಗುರುತಿಸಲಾಗಿದೆ.

ಈ ಹೆಸರು ಪ್ರಕರಣದ ಬಗ್ಗೆ ನೇರ ಮಾಹಿತಿ ಹೊಂದಿರುವ ವ್ಯಕ್ತಿ ಹಾಗೂ ತನಿಖೆಯ ಕುರಿತು ಮಾಹಿತಿ ಪಡೆದ ಮತ್ತೊಬ್ಬ ಮೂಲದಿಂದ ದೊರೆತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆದರೆ, ಯುಎಇ ಅಧಿಕಾರಿಗಳು ಈ ಗುರುತನ್ನು ಅಧಿಕೃತವಾಗಿ ದೃಢಪಡಿಸಿಲ್ಲ.

ಸಹಪೈಲಟ್‌ನ ಹಿಂದಿನ ವಿಮಾನಯಾನ ವೃತ್ತಿಜೀವನದ ಬಗ್ಗೆಯೂ ವರದಿಗಳು ಹೊರಬಂದಿವೆ. ಸೈದ್ಧಾಂತಿಕ ವಿಚಾರಗಳ ಕುರಿತ ಆತಂಕದ ಹಿನ್ನೆಲೆಯಲ್ಲಿ ಈ ಹಿಂದೆ ಓಮನ್‌ನಲ್ಲಿ ಆತನಿಗೆ ವಿಮಾನ ಹಾರಾಟದಿಂದ ನಿರ್ಬಂಧ ಹೇರಲಾಗಿತ್ತು ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ. ಆತನ ಅಭಿಪ್ರಾಯಗಳ ಬಗ್ಗೆ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಮಾನ ತರಬೇತಿಯಿಂದಲೂ ಆತನನ್ನು ತೆಗೆದುಹಾಕಲಾಗಿತ್ತು ಎಂದು ಸಿಎನ್‌ಎನ್ ವರದಿ ಮಾಡಿದೆ. ಆದರೆ ಈ ಆರೋಪಗಳು ಯುಎಇ ತನಿಖೆಯಲ್ಲಿ ದೃಢಪಟ್ಟಿಲ್ಲ. ಹೀಗಾಗಿ ಅವುಗಳನ್ನು ಅಧಿಕೃತವಾಗಿ ಖಚಿತಗೊಂಡ ವಿಚಾರಗಳೆಂದು ಪರಿಗಣಿಸಲಾಗುವುದಿಲ್ಲ.

ಈ ನಡುವೆ ದಾಳಿಯ ಉದ್ದೇಶದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಸಹಪೈಲಟ್‌ನ ಹಿನ್ನೆಲೆಯ ಕುರಿತ ಪ್ರಶ್ನೆಗಳೂ ಎದ್ದಿವೆ. ಆತನ ದಾಳಿಗೆ ಕಾರಣವೇನು ಅಥವಾ ಆತ ಏಕಾಂಗಿಯಾಗಿಯೇ ಈ ಕೃತ್ಯ ಎಸಗಿದ್ದಾನೆಯೇ ಎಂಬುದನ್ನು ಯುಎಇ ಇನ್ನೂ ಬಹಿರಂಗಪಡಿಸಿಲ್ಲ.

ಮಚ್ಚರ್ ಅವರು ನೀಡಿರುವ ಈ ವಿವರಗಳು, ಅಬುಧಾಬಿಯ ಆಸ್ಪತ್ರೆಯ ಹಾಸಿಗೆಯಿಂದ ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ ಒಂದು ದಿನದ ಬಳಿಕ ಹೊರಬಂದಿವೆ.

ಆ ಸಂದರ್ಭದಲ್ಲಿ ವಿಮಾನ ಕೆಳಗೆ ಇಳಿಯುತ್ತಿರುವುದನ್ನು ಅರಿತುಕೊಂಡದ್ದು, ತಾವು ಗಾಯಗೊಂಡಿದ್ದು ಹಾಗೂ ಕೊನೆಗೆ ಕಾಕ್‌ಪಿಟ್ ಬಾಗಿಲು ತೆರೆದು ಇತರರು ಮಧ್ಯಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದನ್ನು ಅವರು ಪ್ರಧಾನಿಗೆ ವಿವರಿಸಿದ್ದರು.

ಮಚ್ಚರ್ ಅವರು ಸದ್ಯ ಯುಎಇಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಶನಿವಾರ ಭಾರತೀಯ ರಾಯಭಾರ ಕಚೇರಿ ಅವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದು, “ಚೇತರಿಸಿಕೊಳ್ಳುತ್ತಿದ್ದಾರೆ” ಎಂದು ತಿಳಿಸಿದೆ. FZ1073 ವಿಮಾನದಲ್ಲಿನ ಈ ಘಟನೆಯ ಕುರಿತು ಯುಎಇ ನೇತೃತ್ವದ ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಯೋತ್ಪಾದಕ ದಾಳಿ ವಿಫಲಗೊಳಿಸಿದ ಭಾರತೀಯ ಪೈಲಟ್‌ಗೆ Israel ಅತ್ಯುನ್ನತ ಗೌರವ: ಸ್ವಾತಂತ್ರ್ಯ ದಿನಾಚರಣೆಗೆ ಪ್ರಧಾನಿ ಮೋದಿ, ಕ್ಯಾಪ್ಟನ್ ಸ್ಮಿತ್‌ಗೆ ಆಹ್ವಾನ..!

5 IAS ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ; ಯಾರಿಗೆಲ್ಲಾ ಬದಲಾವಣೆ

ಆಧಾರ ರಹಿತ ಆರೋಪ ಸರಿಯಲ್ಲ, ‘ದಾಖಲೆ ತೋರಿಸಿ, ಜಮೀನನ್ನೇ ನಿಮ್ಮ ಕುಟುಂಬಕ್ಕೆ ಕೊಡ್ತೀನಿ; HDK NICE ಆರೋಪಕ್ಕೆ ಸಚಿವ ಬಾಲಕೃಷ್ಣ ತಿರುಗೇಟು

SIR ಅಕ್ರಮಗಳ ಕುರಿತು ರಾಜ್ಯದಿಂದ ಪ್ರತ್ಯೇಕ ತನಿಖೆ ಇಲ್ಲ: CM ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಿಗೆ ಭಾರತದ ಸಮನ್ಸ್; ಗಡಿಯಾಚೆಗಿನ ಒಳನುಸುಳುವಿಕೆಯ ವಿರುದ್ಧ ಪ್ರತಿಭಟನೆ