ಡೊನಾಲ್ಡ್ ಟ್ರಂಪ್ 
ವಿದೇಶ

ಅಶಾಂತಿಯ ನಡುವೆ,'ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ'- ಡೊನಾಲ್ಡ್ ಟ್ರಂಪ್! Video

ಬೆಲೆ ಏರಿಕೆಯ ವಿರುದ್ಧ ವಾರಾಂತ್ಯದಲ್ಲಿ ಪ್ಯಾರಿಸ್ ಮತ್ತಿತರ ನಗರಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆದಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್ ಕಂಡ ಅತ್ಯಂತ ಭೀಕರ ಹಿಂಸಾಚಾರಕ್ಕೆ ಕಾರಣವಾಗಿದೆ.

ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಫ್ರಾನ್ಸ್‌ನಲ್ಲಿ ಹೆಚ್ಚುತ್ತಿರುವ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ವಲಸೆಯೇ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಆರೋಪಿಸಿದ್ದಾರೆ. ಅಲ್ಲದೆ, ಯುರೋಪ್ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ತಮ್ಮ ಗಡಿಗಳನ್ನು ಬಿಗಿಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಘಟನಾವಳಿಗಳಿಗೂ, ವಲಸೆಗೂ ಸಂಬಂಧವಿದೆಯೇ ಹೊರತು, ಶಾಲೆಗಳಿಗಾಗಲಿ ಅಥವಾ ಬೇರೆ ಯಾವುದಕ್ಕಾಗಲಿ ಸಂಬಂಧವಿಲ್ಲ ಎಂದರು. ಈ ಹಿಂದೆ ನೀಡಿದ ಹೇಳಿಕೆಯನ್ನೇ ಪುನರುಚ್ಚರಿಸಿದ ಟ್ರಂಪ್, ಇದು ವಲಸೆಗೆ ಸಂಬಂಧಿಸಿದ್ದು, ನಿಮ್ಮ ಗಡಿಗಳನ್ನು ಮುಚ್ಚಿ ಎಂದು ನಾನು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಹೇಳಿದ್ದೇನೆ ಎಂದು ಹೇಳಿದರು.

ಬೆಲೆ ಏರಿಕೆಯ ವಿರುದ್ಧ ವಾರಾಂತ್ಯದಲ್ಲಿ ಪ್ಯಾರಿಸ್ ಮತ್ತಿತರ ನಗರಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆದಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್ ಕಂಡ ಅತ್ಯಂತ ಭೀಕರ ಹಿಂಸಾಚಾರಕ್ಕೆ ಕಾರಣವಾಗಿದೆ.

ಮ್ಯಾಕ್ರನ್ ಜೊತೆಗಿನ ಮಾತುಕತೆಯನ್ನು ಉಲ್ಲೇಖಿಸಿದ ಟ್ರಂಪ್, ನಾನು ಬಹಳ ಹಿಂದೆಯೇ ಅವರಿಗೆ ಹೇಳಿದ್ದೆ, ನೀವು ಫ್ರಾನ್ಸ್‌ನಲ್ಲಿ ದೊಡ್ಡ ತಪ್ಪು ಮಾಡುತ್ತಿದ್ದೀರಿ. ಪ್ರಪಂಚದಾದ್ಯಂತದ ಜನರನ್ನು ನೀವು ಒಳಗೆ ಬಿಡುತ್ತಿದ್ದೀರಿ. ಇಡೀ ಜಗತ್ತೇ ಅಲ್ಲಿಗೆ ಬರುತ್ತಿದೆ. ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ ಎಂದು 80 ವರ್ಷದ ರಿಪಬ್ಲಿಕನ್ ನಾಯಕ ಹೇಳಿದರು.

ಯುರೋಪ್ ತನ್ನ ಗಡಿಗಳನ್ನು ಮುಚ್ಚದಿದ್ದರೆ ಮತ್ತು ಪ್ರತಿಭಟನೆಯಲ್ಲಿ ತೊಡಗಿರುವಂತಹ ಅಪರಾಧಿಗಳನ್ನು ಹೊರಹಾಕದಿದ್ದರೆ, ಯುರೋಪ್‌ನ ಕಥೆ ಮುಗಿದಂತೆಯೇ. ಅಕ್ರಮ ವಲಸೆಯನ್ನು ತಡೆಯುವುದನ್ನು ಟ್ರಂಪ್ ತಮ್ಮ 2024ರ ಚುನಾವಣಾ ಪ್ರಚಾರದ ಪ್ರಮುಖ ಭರವಸೆಯನ್ನಾಗಿ ಮಾಡಿಕೊಂಡಿದ್ದರು. ಈ ಪ್ರಕ್ರಿಯೆಯಲ್ಲಿ ಅವರು ಕೆಲವೊಮ್ಮೆ ಜನಾಂಗೀಯ ಭಯವನ್ನು ಹುಟ್ಟುಹಾಕುವಂತಹ ಸುಳ್ಳು ಹೇಳಿಕೆಗಳನ್ನೂ ಬಳಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಬ್ಬು ರೈತರ ‘ಹುಬ್ಬಳ್ಳಿ ಚಲೋ’ ಪ್ರತಿಭಟನಾ ಮೆರವಣಿಗೆ ತಾತ್ಕಾಲಿಕ ಸ್ಥಗಿತ: ಸರ್ಕಾರಕ್ಕೆ ನವೆಂಬರ್ 26 ಗಡುವು

ನನ್ನ ಪ್ರೀತಿಯ ಕನ್ನಡಿಗರೇ ಮನಸ್ಪೂರ್ತಿಯಾಗಿ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ: ಸೋನು ನಿಗಮ್

'ಅಮ್ಮಾ, ಅಮ್ಮಾ': ದುರ್ಗಾ ಪೂಜೆ ವೇಳೆ ಭಾವುಕರಾಗಿ ಕಣ್ಣೀರಿಟ್ಟ TMC ಸಂಸದ ಕಲ್ಯಾಣ್ ಬ್ಯಾನರ್ಜಿ; ವಿಡಿಯೋ ವೈರಲ್

Flydubai: ಒಬ್ಬ ಪ್ಲಂಬರ್‌ ವಿಮಾನ ಲ್ಯಾಂಡ್ ಮಾಡಲು ಸಾಧ್ಯವೇ?; ಮತ್ತಷ್ಟು ವಿವರ ಬಿಚ್ಚಿಟ್ಟ ಕ್ಯಾಪ್ಟನ್ ಸ್ಮಿತ್ ಮಚ್ಚಾರ್!

ಪ್ರಧಾನಿ ಮೋದಿ, ಸೀತಾರಾಮನ್ ಡೀಪ್‌ಫೇಕ್ ವೀಡಿಯೊ ಬಳಸಿ ನಕಲಿ ಕಲ್ಯಾಣ ಯೋಜನೆ ಜಾಹೀರಾತುಗಳ ಬಗ್ಗೆ ಎಚ್ಚರ- ಸೈಬರ್ ಅಪರಾಧ ವಿಭಾಗ