ಇಮ್ಯಾನುಯೆಲ್ ಮ್ಯಾಕ್ರಾನ್, ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ 
ವಿದೇಶ

'ಫ್ರಾನ್ಸ್‌ನಲ್ಲಿನ ಗಲಭೆಗಳಿಗೆ ಮುಸ್ಲಿಂ ವಲಸಿಗರೇ ಕಾರಣ': ಮೂರ್ಖತನದ ಹೇಳಿಕೆ; ಟ್ರಂಪ್ ಮತ್ತಿತರರ ವಿರುದ್ಧ ಮ್ಯಾಕ್ರಾನ್ ಕಿಡಿ!

"ನಿಮ್ಮ ಗಡಿಗಳನ್ನು ಮುಚ್ಚಿ ಮತ್ತು ಪರಿಸ್ಥಿತಿ ಕೈಮೀರುವ ಮೊದಲೇ ನಿಯಂತ್ರಣಕ್ಕೆ ತೆಗೆದುಕೊಳ್ಳಿ!" ಎಂದು ಟ್ರಂಪ್ ಮ್ಯಾಕ್ರಾನ್ ಅವರಿಗೆ ಸಲಹೆ ನೀಡಿದ್ದಾರೆ.

ಪ್ಯಾರಿಸ್: ಫ್ರಾನ್ಸ್‌ನ ಉದ್ವಿಗ್ನ ಸಾಮಾಜಿಕ ವಾತಾವರಣವನ್ನು ತಮ್ಮ ಸ್ವಾರ್ಥ ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿದೇಶಿ ನಾಯಕರ ವಿರುದ್ಧ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಜೀವನ ವೆಚ್ಚ ಏರಿಕೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ವ್ಯಾಪಕ ಗಲಭೆ ಮತ್ತು ಲೂಟಿಗೆ ದಾರಿ ಮಾಡಿಕೊಟ್ಟಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂಸಾಚಾರವನ್ನು ತಮ್ಮ ರಾಜಕೀಯ ಬೆಂಬಲಿಗರನ್ನು ಒಗ್ಗೂಡಿಸಲು ಬಳಸಿಕೊಂಡಿದ್ದು, ಈ ಅಶಾಂತಿಗೆ ಮುಸ್ಲಿಂ ವಲಸಿಗರೇ ಕಾರಣ ಎಂಬ ಹೇಳಿಕೆಗಳನ್ನು ನೀಡಿದ್ದಾರೆ.

"ನಿಮ್ಮ ಗಡಿಗಳನ್ನು ಮುಚ್ಚಿ ಮತ್ತು ಪರಿಸ್ಥಿತಿ ಕೈಮೀರುವ ಮೊದಲೇ ನಿಯಂತ್ರಣಕ್ಕೆ ತೆಗೆದುಕೊಳ್ಳಿ!" ಎಂದು ಟ್ರಂಪ್ ಮ್ಯಾಕ್ರಾನ್ ಅವರಿಗೆ ಸಲಹೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮ್ಯಾಕ್ರಾನ್, ಕಳೆದ ವಾರಾಂತ್ಯದಲ್ಲಿ ಪ್ಯಾರಿಸ್ ಮತ್ತು ಫ್ರಾನ್ಸ್‌ನ ಇತರ ನಗರಗಳಲ್ಲಿ ನಡೆದ ಲೂಟಿಯ ನಂತರ, ವಿದೇಶಿಗರಿಂದ ಮಾಹಿತಿಯನ್ನು ತಿರುಚುವ ಪ್ರಯತ್ನಗಳು ನಡೆದಿವೆ. ಇದರ ಪರಿಣಾಮವಾಗಿ, ವಿದೇಶಿ ನಾಯಕರು ಸೇರಿದಂತೆ ಅನೇಕರು ಸ್ವೀಕಾರಾರ್ಹವಲ್ಲದ ಮತ್ತು ಮೂರ್ಖತನದಿಂದ ಕೂಡಿದ ಹೇಳಿಕೆಗಳನ್ನು ನೀಡಿದ್ದಾರೆ" ಎಂದು ಕಿಡಿಕಾರಿದರು.

ಟ್ರಂಪ್ ಕುರಿತು ಈ ಮಾತುಗಳನ್ನಾಡುತ್ತಿದ್ದೀರಾ? ಎಂದು ಪತ್ರಕರ್ತರು ಕೇಳಿದಾಗ, ಅವರೂ ಸೇರಿದಂತೆ ಇತರರು" ಎಂದು ಮ್ಯಾಕ್ರಾನ್ ಉತ್ತರಿಸಿದರು.

ಮಾತು ಮುಂದುವರೆಸಿದ ಮ್ಯಾಕ್ರಾನ್, "ಫ್ರಾನ್ಸ್‌ನಲ್ಲಿ ಎಂದಿಗೂ ನಡೆಯದ ಘಟನೆಗಳನ್ನು ಚಿತ್ರಿಸುವ, ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ಫೋಟೋಗಳನ್ನು ನಾವು ನೋಡಿದ್ದೇವೆ. ವಲಸಿಗರು ಮತ್ತು ಇಸ್ಲಾಮಿಸ್ಟ್‌ಗಳ ಗುಂಪುಗಳು ನಮ್ಮ ದೇಶದ ಮೇಲೆ ದಾಳಿ ನಡೆಸಿವೆ ಎಂದು ಕೆಲವರು ಹೇಳುತ್ತಿದ್ದಾರೆ, ಆದರೆ ಇದು ಸಂಪೂರ್ಣ ಸುಳ್ಳು ಎಂದು ಹೇಳಿದರು. ಆದರೆ, ಯಾವ AI-ಸೃಷ್ಟಿತ ಫೋಟೋಗಳ ಬಗ್ಗೆ ಮಾತನಾಡುತ್ತಿದ್ದಾರೆ ಅಥವಾ ಆ ವಿಷಯ ಸುಳ್ಳು ಎಂದು ಅವರಿಗೆ ಹೇಗೆ ತಿಳಿಯಿತು ಎಂಬುದರ ಕುರಿತು ಮ್ಯಾಕ್ರಾನ್ ಯಾವುದೇ ವಿವರ ನೀಡಲಿಲ್ಲ.

ಒಂದು ಕಾಲದಲ್ಲಿ ಮ್ಯಾಕ್ರಾನ್ ಮತ್ತು ಟ್ರಂಪ್ ಉತ್ತಮ ಸಂಬಂಧವನ್ನು ಹೊಂದಿದ್ದರು, ಆದರೆ ಈಗ ಟ್ರಂಪ್ ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಆಗಾಗ್ಗೆ ಫ್ರೆಂಚ್ ಅಧ್ಯಕ್ಷರನ್ನು ಅಪಹಾಸ್ಯ ಮಾಡುತ್ತಾರೆ. "ವಾಸ್ತವವೇನೆಂದರೆ, ಈಗ ನಮ್ಮ ದೇಶದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿರುವವರೆಲ್ಲರೂ ನಮ್ಮ ದೇಶವನ್ನು ಪ್ರೀತಿಸದವರೇ ಆಗಿದ್ದಾರೆ. ಅಂತಹ ಜನರು ನನಗೆ ನಿಜವಾಗಿಯೂ ಕಿರಿಕಿರಿ ಉಂಟುಮಾಡುತ್ತಾರೆ" ಎಂದು ಮ್ಯಾಕ್ರಾನ್ ಹೇಳಿದರು.

ಚುನಾವಣಾ ಪ್ರಚಾರದಲ್ಲಿ ತೊಡಗಿರುವ ನಾಯಕರು, ಅದು ನಮ್ಮ ಈ ಪ್ರದೇಶದಲ್ಲಿರಲಿ ಅಥವಾ ವಿದೇಶಿಗರಾಗಲಿ ಅವರು, ಕೆಲವೊಮ್ಮೆ ಮುಗ್ಧತೆಯಿಂದ ಕೃತಕ ಬುದ್ಧಿಮತ್ತೆ (AI) ಸೃಷ್ಟಿಸಿದ ವಿಷಯಗಳನ್ನು ಪದೇ ಪದೇ ಹೇಳುತ್ತಿದ್ದಾರೆ. ಅಥವಾ ಫ್ರಾನ್ಸ್‌ನಲ್ಲಿ ನಡೆದ ಘಟನೆಗಳ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾರೆ. ಇವರು ನಮ್ಮ ದೇಶವನ್ನು ತಮ್ಮ ಸ್ವಂತ ರಾಜಕೀಯ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ನಮಗೆ ಇದರ ಅಗತ್ಯವಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾ: ವೈಭವದ ಜಂಬೂ ಸವಾರಿ ಮೆರವಣಿಗೆ; ಮೊದಲ ಬಾರಿಗೆ ಅಂಬಾರಿ ಹೊತ್ತು ಸಾಗಿದ ಪ್ರಶಾಂತ ಆನೆ, ಲಕ್ಷಾಂತರ ಜನರಿಂದ ವೀಕ್ಷಣೆ! Video

ದರ್ಶನ್ ಬಗ್ಗೆ ವಿಜಯಲಕ್ಷ್ಮೀ ಪೋಸ್ಟ್‌ ಬೆನ್ನಲ್ಲೇ 'ಶಕುನಿ' ಅಂತ ಪೋಸ್ಟ್ ಹಾಕಿದ ನಟ ಧನ್ವೀರ್ ಗೌಡ, ಯಾರಿಗೆ ಟಾಂಗ್?

CJPಗೆ ಬಿಗ್ ರಿಲೀಫ್: ಅಶುತೋಷ್ ರಾಂಕಾ, ಸೌರವ್ ದಾಸ್ ಬಿಡುಗಡೆ ಮಾಡುವಂತೆ SEM ಆದೇಶ

'ಹರ್ ಗಲಿ ಮೇ ಜಂತರ್ ಮಂತರ್': SIR ವಿರುದ್ಧದ ಪ್ರತಿಭಟನೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಭಾಗಿ!

ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ಪ್ರಕರಣ: ಇಬ್ಬರು ಯುವತಿಯರು ಸೇರಿದಂತೆ ಮತ್ತೆ ಐವರ ಬಂಧನ!