ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ online desk
ವಿದೇಶ

ಗಲ್ಫ್ ಆಫ್ ಮೆಕ್ಸಿಕೋ, ಒಂಟಾರಿಯೊ ಲೇಕ್ ಬಳಿಕ Strait of Hormuz ಗೆ ನನ್ನ ಹೆಸರು ಮರುನಾಮಕರಣ ಮಾಡಿ- ಅಮೆರಿಕ ಅಧ್ಯಕ್ಷ Trump ವಿಚಿತ್ರ ಬೇಡಿಕೆ!

ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, Strait of Hormuz ನ್ನು "Trump Strait" ಎಂದು ಮರುನಾಮಕರಣ ಮಾಡಬಹುದೆಂದು ಹೇಳಿದ್ದಾರೆ.

ವಾಷಿಂಗ್ ಟನ್: ಅಮೆರಿಕ- ಇರಾನ್ ಯುದ್ಧದ ನಡುವೆ ಆಗಾಗ್ಗೆ ಡೊನಾಲ್ಡ್ ಟ್ರಂಪ್ ತಮಾಷೆಯ ವಿಷಯಗಳಿಗೆ ಸುದ್ದಿಯಾಗುತ್ತಿರುತ್ತಾರೆ.

ವಿದೇಶಿ ನಾಯಕರನ್ನು ಟೀಕಿಸಿ, ಇರಾನ್ ನ್ನು ಟೀಕಿಸಿ ಸುದ್ದಿಯಾಗುತ್ತಿದ್ದ ಟ್ರಂಪ್, ಈ ಬಾರಿ ತಮ್ಮ ಮನ್ನಣೆಯ ದಾಹಕ್ಕೆ ಸುದ್ದಿಯಾಗುತ್ತಿದ್ದಾರೆ. ಆಗಿದ್ದಿಷ್ಟು. ಎಲ್ಲಾ ರಾಜಕಾರಣಿಗಳಂತೆಯೆ ಟ್ರಂಪ್ ಕೂಡಾ ತಮ್ಮ ಹೆಸರಿನಲ್ಲಿ ಗುರುತಿಸಬಹುದಾದ ಪ್ರಸಿದ್ಧ ಸ್ಥಳಗಳಿರಬೇಕು ಎಂದು ಬಯಸುತ್ತಿದ್ದಾರೆ. ಇದಕ್ಕೆ ಅವರು Strait of Hormuz ನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಡೊನಾಲ್ಡ್ ಟ್ರಂಪ್, Strait of Hormuz ನ್ನು "Trump Strait" ಎಂದು ಮರುನಾಮಕರಣ ಮಾಡಬಹುದೆಂದು ಹೇಳಿದ್ದಾರೆ. ಇದಕ್ಕಾಗಿ ಅವರು ಕೊಟ್ಟಿರುವ ಕಾರಣವೂ ವಿಚಿತ್ರವಾಗಿಯೇ ಇದೆ. ಟ್ರಂಪ್ ಪ್ರಕಾರ ಒಂದು ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದೇ ಇದ್ದಲ್ಲಿ, ಕನಿಷ್ಠ ಅದನ್ನು ಮರುನಾಮಕರಣವನ್ನಾದ್ರೂ ಮಾಡ್ಬೇಕು ಎಂಬುದು ಅಮೆರಿಕ ಅಧ್ಯಕ್ಷರ ತರ್ಕವಾಗಿದೆ.

ಟ್ರಂಪ್ ಮರುನಾಮಕರಣದ ಗೀಳು ಹೊಸದೇನು ಅಲ್ಲ. 2025 ರ ಜನವರಿಯಲ್ಲಿ ಗಲ್ಫ್ ಆಫ್ ಮೆಕ್ಸಿಕೋ ಎಂಬ ಪ್ರದೇಶವನ್ನು ಗಲ್ಫ್ ಆಫ್ ಅಮೆರಿಕ ಎಂದು ಮರುನಾಮಕರಣ ಮಾಡಿ ಟ್ರಂಪ್ ಆದೇಶ ಪ್ರಕಟಿಸಿದ್ದರು. ಇಷ್ಟೇ ಅಲ್ಲದೆ. ಕೆನಡಾದವರು ನಮ್ಮನ್ನು ಸರಿಯಾಗಿ ನಡೆಸಿಕೊಳ್ತಿಲ್ಲ ಎಂದು ಮುನಿಸಿಕೊಂಡು ಲೇಕ್ ಒಂಟಾರಿಯೊವನ್ನು ಲೇಕ್ ಅಮೆರಿಕ ಎಂದು ಮರುನಾಮಕರಣ ಮಾಡಿದ್ದರು. ವಿಚಿತ್ರವೆಂಬಂತೆ ಅಮೆರಿಕ ಅಧ್ಯಕ್ಷರ ತಾಳಕ್ಕೆ ಕುಣಿದಿದ್ದ ಟೆಕ್ ಕಂಪನಿಗಳಾದ ಗೂಗಲ್ ಹಾಗೂ ಆಪಲ್ ಸಂಸ್ಥೆಗಳೂ ತಮ್ಮ ಮ್ಯಾಪ್ ಗಳಲ್ಲಿ ಹೆಸರು ಮರುನಾಮಕರಣ ಮಾಡಿದ್ದವು. ಇದಕ್ಕೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಕ್ಷಣಾ ಸಾಮರ್ಥ್ಯ ಇನ್ನಷ್ಟು ಬಲಿಷ್ಠ: ದೇಶೀಯ ನಿರ್ಮಿತ ಗ್ಲೈಡ್ ಬಾಂಬ್ ಖಗಂಟಕ್ -243 ಪರೀಕ್ಷೆ ಯಶಸ್ವಿ

ಭಾರೀ ಮಳೆ: ಉಕ್ಕಿ ಹರಿಯುತ್ತಿರುವ ಪ್ರಮುಖ ನದಿಗಳು, ಬಿಹಾರದಲ್ಲಿ ಹೈ ಅಲರ್ಟ್

AEE ನೇಮಕಾತಿಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆಗೆ HDK ಸಾಲು ಸಾಲು ಪ್ರಶ್ನೆ; ಇದೇನಾ 'ದೇಶವೇ ಅಲ್ಲೋಲ ಕಲ್ಲೋಲ ಆಗೋ' ವಿಷಯ? Video

'aashiq banaya': 'ಅಕ್ಷರಶಃ ನಮ್ಮಿಬ್ಬರ ಕೆಮಿಸ್ಟ್ರಿ ಅಣ್ಣ-ತಂಗಿಯಂತಿತ್ತು': ನಟ ಇಮ್ರಾನ್ ಹಶ್ಮಿ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ನಟಿ Tanushree Dutta

ರಾಮ ಮಂದಿರ ಟ್ರಸ್ಟ್‌ಗೆ ಮೊದಲ CEO ನೇಮಕ; 'ಆಪರೇಷನ್ ಸಿಂಧೂರ್'​​ನಲ್ಲಿ ಭಾಗಿಯಾಗಿದ್ದ ಜಿತೇಂದ್ರ ಮಿಶ್ರಾ ಹೆಸರು ಘೋಷಣೆ!