ಟೆಹ್ರಾನ್‌ನ ಡೌನ್‌ಟೌನ್‌ನ ರಸ್ತೆಯೊಂದರಲ್ಲಿ ಇರಾನ್‌ನ ಹತ್ಯೆಗೀಡಾದ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಭಿತ್ತಿಚಿತ್ರದ ಪಕ್ಕವಾಗಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿರುವ ದೃಶ್ಯ. 
ವಿದೇಶ

ಇರಾನ್ ವಿರುದ್ಧ ಇತ್ತೀಚಿನ ದಾಳಿ ಪೂರ್ಣಗೊಳಿಸಿದ್ದೇವೆ; ಪ್ರತೀಕಾರಕ್ಕೆ ಮುಂದಾದರೆ ಮತ್ತಷ್ಟು ದಾಳಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಅಮೆರಿಕದ ಸೆಂಟ್ರಲ್ ಕಮಾಂಡ್ ನಿನ್ನೆ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ವಾಯು ರಕ್ಷಣಾ ತಾಣಗಳು, ರಾಡಾರ್ ವ್ಯವಸ್ಥೆಗಳು ಮತ್ತು ಸಮುದ್ರ ಸಂಬಂಧಿತ ಸೇನಾ ಸೌಲಭ್ಯಗಳು ಸೇರಿದಂತೆ ಇರಾನ್‌ನ ಸೇನಾ ಗುರಿಗಳ ವಿರುದ್ಧದ ಇತ್ತೀಚಿನ ದಾಳಿಯನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ.

ವಾಷಿಂಗ್ಟನ್: ಆರು ತಿಂಗಳಿಗೂ ಹೆಚ್ಚು ಕಾಲದಿಂದ ಮುಂದುವರಿದಿರುವ ಇರಾನ್ ವಿರುದ್ಧ ಯುದ್ಧದಲ್ಲಿ ಮತ್ತೆ ಉದ್ವಿಗ್ನತೆ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ, ಅಮೆರಿಕ ಸೇನೆ ಇರಾನ್‌ನ ಹಲವು ಗುರಿಗಳ ಮೇಲೆ ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಅಮೆರಿಕಾದ ವಿವಿಧ ಸ್ಥಳಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹಾರಿಸಿತು. ಅಮೆರಿಕ ನಡೆಸಿದ ದಾಳಿಯೊಂದರಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ಮನೆಯೊಂದು ಗುರಿಯಾಗಿದ್ದು, ಐವರು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಸೆಂಟ್ರಲ್ ಕಮಾಂಡ್ ನಿನ್ನೆ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ವಾಯು ರಕ್ಷಣಾ ತಾಣಗಳು, ರಾಡಾರ್ ವ್ಯವಸ್ಥೆಗಳು ಮತ್ತು ಸಮುದ್ರ ಸಂಬಂಧಿತ ಸೇನಾ ಸೌಲಭ್ಯಗಳು ಸೇರಿದಂತೆ ಇರಾನ್‌ನ ಸೇನಾ ಗುರಿಗಳ ವಿರುದ್ಧದ ಇತ್ತೀಚಿನ ದಾಳಿಯನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದೆ.

ಭಾನುವಾರವೂ ಅಮೆರಿಕ ದಾಳಿ

ಒಂದು ತಿಂಗಳ ಕಾಲ ಯಾವುದೇ ಸೇನಾ ಕಾರ್ಯಾಚರಣೆ ಇಲ್ಲದಿದ್ದ ಅವಧಿಯನ್ನು ಆ ದಾಳಿಗಳು ಏಕಾಏಕಿ ಅಂತ್ಯಗೊಳಿಸಿದ್ದವು. ಇದರಿಂದ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಆತಂಕ ಎದುರಾಗಿದೆ. ಈಗಾಗಲೇ ಈ ಸಂಘರ್ಷ ಜಾಗತಿಕ ತೈಲ ಬೆಲೆಗಳನ್ನು ಏರಿಸಿದ್ದು, ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತರ ಕಾಂಗ್ರೆಸ್ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷಕ್ಕೂ ರಾಜಕೀಯ ಸಮಸ್ಯೆಗಳನ್ನು ತಂದೊಡ್ಡಿದೆ.

ನಿನ್ನೆ ತಡರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ನ್ನು ಮಾತುಕತೆಗೆ ಕರೆತರಲು ತಾವು ಒತ್ತಡ ಹೇರುವುದಿಲ್ಲ ಎಂದು ಹೇಳಿದರು.

ಇರಾನ್ ನಿಷ್ಪ್ರಯೋಜಕವೆಂದು ಭಾವಿಸುವ ಒಪ್ಪಂದಕ್ಕೆ ಸಹಿ ಹಾಕುತ್ತಾರೆಯೇ ಇಲ್ಲವೇ ಎಂಬುದರ ಬಗ್ಗೆ ನನಗೆ ಯಾವುದೇ ಕಾಳಜಿ ಇಲ್ಲ. ಈಗಿನ ನಮ್ಮ ಸ್ಥಿತಿ ನನಗೆ ಹೆಚ್ಚು ಇಷ್ಟವಾಗಿದೆ. ಹಾರ್ಮುಜ್ ಜಲಸಂಧಿಯ ಮೇಲೆ ಬಹುತೇಕ ಸಂಪೂರ್ಣ ನಿಯಂತ್ರಣ ನಮ್ಮದಾಗಿದೆ. ಅವರ ಆರ್ಥಿಕತೆ ಸಂಪೂರ್ಣವಾಗಿ ಕುಸಿಯುತ್ತಿದೆ. ಅವರು ತಪ್ಪಿಸಲಾಗದ ಅಂತ್ಯವನ್ನು ಎದುರು ನೋಡುತ್ತಿದ್ದಾರೆ. ಇರಾನ್ ಜನರು ಯಾವಾಗ ಎದ್ದು ಹೋರಾಡಲಿದ್ದಾರೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

ಇದಕ್ಕೂ ಮುನ್ನ ಟ್ರಂಪ್ ಆರ್ಥಿಕ ನಿರ್ಬಂಧಗಳ ಮೂಲಕ ಇರಾನ್ ನ್ನು ತಮ್ಮ ಬೇಡಿಕೆಗಳಿಗೆ ಮಣಿಸುವ ಪ್ರಯತ್ನದತ್ತ ಗಮನ ಹರಿಸಿದಂತೆ ಕಂಡುಬಂದಿದ್ದರು. ಹೊಸ ದಾಳಿಗಳಿಗೆ ಇರಾನ್ ಪ್ರತೀಕಾರ ತೀರಿಸಿಕೊಂಡರೆ, “ಅವರ ಮೇಲೆ ಇನ್ನಷ್ಟು ಕಠಿಣ ಹಾಗೂ ಹೆಚ್ಚಿನ ಮಟ್ಟದಲ್ಲಿ ದಾಳಿ ನಡೆಸಲಾಗುವುದು” ಎಂದು ಟ್ರಂಪ್ ಎಚ್ಚರಿಸಿದ್ದರು.

ಟೆಹ್ರಾನ್ ವಾಣಿಜ್ಯ ಹಡಗುಗಳು ಮತ್ತು ಮಧ್ಯಪ್ರಾಚ್ಯದಲ್ಲಿರುವ ಅಮೆರಿಕ ಸೇನಾ ಪಡೆಗಳ ಮೇಲೆ ದಾಳಿ ನಡೆಸಲು ಯತ್ನಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಇತ್ತೀಚಿನ ದಾಳಿಗಳನ್ನು ನಡೆಸಲಾಗಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ತಿಳಿಸಿದೆ. ಇದಕ್ಕೆ ಹೆಚ್ಚುವರಿ ಕಾರಣವೊಂದನ್ನು ನೀಡಿದ ಡೊನಾಲ್ಡ್ ಟ್ರಂಪ್, ಫಾಕ್ಸ್ ನ್ಯೂಸ್‌ಗೆ ದೂರವಾಣಿ ಮೂಲಕ ಮಾತನಾಡುವಾಗ ಅಮೆರಿಕ ಸೇನೆ ಇರಾನ್‌ನ ರಾಡಾರ್‌ಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿದರು.

ತಮ್ಮ ರಾಡಾರ್ ವ್ಯವಸ್ಥೆಯನ್ನು ಮರುನಿರ್ಮಿಸಲು ಯತ್ನಿಸಿದರು. ಏಕೆಂದರೆ ಅವರಿಗೆ ಏನನ್ನೂ ಕಾಣಿಸುತ್ತಿಲ್ಲ. ಅದು ಬಹುತೇಕ ನಿರ್ಮಾಣವಾಗುವವರೆಗೆ ನಾವು ಕಾದು, ನಂತರ ಅದನ್ನು ಹೊಡೆದುರುಳಿಸಿದ್ದೇವೆ ಎಂದು ಟ್ರಂಪ್ ಫಾಕ್ಸ್‌ಗೆ ತಿಳಿಸಿದರು.

ಅಮೆರಿಕದ ದಾಳಿಗಳು ಆರಂಭವಾದ ಬಳಿಕ ಇರಾನ್, ಜೋರ್ಡಾನ್ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿತು. ಜೋರ್ಡಾನ್‌ನ ಅಕಾಬಾ ಕೊಲ್ಲಿಯ ಕರಾವಳಿಯಲ್ಲಿರುವ ಅಮೆರಿಕ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇರಾನ್‌ನ ಸರ್ಕಾರಿ ದೂರದರ್ಶನ ವರದಿ ಮಾಡಿದ್ದು, ಇರಾನ್‌ನ ರೆವಲ್ಯೂಷನರಿ ಗಾರ್ಡ್ ಈ ದಾಳಿಯ ಹೊಣೆ ಹೊತ್ತಿದೆ.

ಜೋರ್ಡಾನ್ ಸೇನೆ 10 ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದು, ಉಳಿದ ಮೂರು ಜನವಸತಿ ಇಲ್ಲದ ಪ್ರದೇಶಗಳಲ್ಲಿ ಬಿದ್ದಿವೆ ಎಂದು ತಿಳಿಸಿದೆ. ಅಕಾಬಾ ನಗರದ ಮೇಲೆ ಒಳಬರುತ್ತಿದ್ದ ವಾಯುದಾಳಿಗಳನ್ನು ತಡೆಹಿಡಿದಿರುವಂತೆ ಕಂಡುಬಂದ ಸ್ಫೋಟಗಳು ಗೋಚರಿಸಿದವು.

ಇರಾನ್‌ನ ಸರ್ಕಾರಿ ಮಾಧ್ಯಮಗಳ ಪ್ರಕಾರ, ಅಮೆರಿಕವು ಇರಾನ್‌ನ ದಕ್ಷಿಣ ಕರಾವಳಿಯಲ್ಲಿರುವ ನಾಗರಿಕ ಪ್ರದೇಶಗಳ ಮೇಲೆ ಬಾಂಬ್ ದಾಳಿ ನಡೆಸಿದ್ದು, ನಾಗರಿಕ ವಿಮಾನ ನಿಲ್ದಾಣವೊಂದನ್ನೂ ಗುರಿಯಾಗಿಸಿಕೊಂಡಿದೆ.

ದಕ್ಷಿಣ ಇರಾನ್‌ನ ಕುಹೆಸ್ತಕ್‌ನಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ಮನೆಯೊಂದರ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮಗು ಸೇರಿದಂತೆ ಐವರು ಮೃತಪಟ್ಟಿದ್ದು, ಕನಿಷ್ಠ 68 ಮಂದಿ ಗಾಯಗೊಂಡಿದ್ದಾರೆ ಎಂದು ಹೋರ್ಮೋಜ್ಗಾನ್ ಪ್ರಾಂತ್ಯದ ಉಪ ಗವರ್ನರ್ ಅಹ್ಮದ್ ನಫಿಸಿ ಇರಾನ್ ಸರ್ಕಾರಿ ದೂರದರ್ಶನಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತ್ತೆ ಕದಡಿದ ಮಧ್ಯಪ್ರಾಚ್ಯ; ಇರಾನ್‌ನಲ್ಲಿನ ಗುರಿಗಳ ಮೇಲೆ ದಾಳಿ- ಅಮೆರಿಕ

ಭಯೋತ್ಪಾದನೆಯನ್ನು 'ರಾಜ್ಯ ನೀತಿಯ ಸಾಧನ'ವಾಗಿ ಬಳಸುವ ದೇಶಗಳನ್ನು ಎದುರಿಸಲು SCO ಸಭೆಯಲ್ಲಿ ಪ್ರಧಾನಿ ಮೋದಿ ಒತ್ತಾಯ

ಉತ್ತರಾಖಂಡ್: ರುದ್ರಪ್ರಯಾಗದಲ್ಲಿ ಮಳೆಯ ಅಬ್ಬರಕ್ಕೆ 8 ಮಂದಿ ಬಲಿ, ಭೂ ಕುಸಿತದಿಂದ ಮನೆಗಳಿಗೆ ಅಪಾಯ

ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ 'ಮುಡಾ' ಸಂಕಷ್ಟ: 'ಬಿ' ರಿಪೋರ್ಟ್‌ ಪ್ರಶ್ನಿಸಿ ಹೈಕೋರ್ಟ್​ ಮೆಟ್ಟಿಲೇರಿದ ED

Toxic Box Office Collection: 300 ಕೋಟಿ ಕ್ಲಬ್ ಸೇರಿದ 'ಟಾಕ್ಸಿಕ್'; 6ನೇ ದಿನ ಯಶ್ ಸಿನಿಮಾ ಗಳಿಸಿದ್ದೆಷ್ಟು?