ಇರಾನ್ ಸರ್ವೋಚ್ಛ ನಾಯಕ ಖಮೇನಿ ಹಾಗೂ ಅಮೆರಿಕಾ ಅಧ್ಯಕ್ಷ ಡೊನಾಲ್ಟ್ ಟ್ರಂಪ್ 
ವಿದೇಶ

ಸಂಧಾನ ಪ್ರಸ್ತಾಪ ತಿರಸ್ಕೃತ: ಟ್ರಂಪ್ ಹೇಳಿಕೆಗೆ ಕ್ಯಾರೇ ಎನ್ನದ Iran; ಸಾರ್ವಜನಿಕ ಹೇಳಿಕೆ ವಿರೋಧಾಭಾಸದಿಂದ ಕೂಡಿವೆ, ಅಧಿಕೃತ ಉತ್ತರಕ್ಕೆ ಕಾಯುತ್ತಿದ್ದೇವೆಂದ ಅರಾಘ್ಚಿ..!

ಟ್ರಂಪ್ ಹಲವು ಉತ್ತಮ ಹೇಳಿಕೆಗಳನ್ನು ನೀಡಿದ್ದಾರೆ, ಆದರೆ, ಅನೇಕ ಬಾರಿ ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನೂ ನೀಡಿದ್ದಾರೆ. ದುರದೃಷ್ಟವಶಾತ್, ನಾವು ಇದನ್ನು ಆಗಾಗ್ಗೆ ಕೇಳುತ್ತೇವೆ. ಮಧ್ಯಸ್ಥರು ತಮ್ಮ ಅಂತಿಮ ನಿಲುವನ್ನು ನಮಗೆ ತಿಳಿಸುವುದಕ್ಕಾಗಿ ನಾವು ಕಾಯುತ್ತಿದ್ದೇವೆ.

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇರಾನ್ ಪ್ರಸ್ತಾಪಿಸಿದ್ದ ಏಳು ದಿನಗಳ ಶಾಂತಿ ಮಾರ್ಗಸೂಚಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಆದರೆ, ಟ್ರಂಪ್ ಅವರ ಈ ಸಾರ್ವಜನಿಕ ಹೇಳಿಕೆಗೆ ಇರಾನ್ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ. ಬದಲಿಗೆ, ಅಮೆರಿಕದಿಂದ ಅಧಿಕೃತ ಮತ್ತು ಲಿಖಿತ ಪ್ರತಿಕ್ರಿಯೆ ಬರುವವರೆಗೂ ಕಾಯುವುದಾಗಿ ಇರಾನ್ ರಾಜತಾಂತ್ರಿಕ ನಡೆ ಇಟ್ಟಿದೆ.

ಟೆಲಿಗ್ರಾಂನಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಟ್ರಂಪ್ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಈ ಹಿಂದೆ ಟ್ರಂಪ್ ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಿದ್ದಾರೆ.

ಟ್ರಂಪ್ ಹಲವು ಉತ್ತಮ ಹೇಳಿಕೆಗಳನ್ನು ನೀಡಿದ್ದಾರೆ, ಆದರೆ, ಅನೇಕ ಬಾರಿ ಪರಸ್ಪರ ವಿರುದ್ಧವಾದ ಹೇಳಿಕೆಗಳನ್ನೂ ನೀಡಿದ್ದಾರೆ. ದುರದೃಷ್ಟವಶಾತ್, ನಾವು ಇದನ್ನು ಆಗಾಗ್ಗೆ ಕೇಳುತ್ತೇವೆ. ಮಧ್ಯಸ್ಥರು ತಮ್ಮ ಅಂತಿಮ ನಿಲುವನ್ನು ನಮಗೆ ತಿಳಿಸುವುದಕ್ಕಾಗಿ ನಾವು ಕಾಯುತ್ತಿದ್ದೇವೆ. ಅವರ ಪ್ರತಿಕ್ರಿಯೆಯ ಆಧಾರದ ಮೇಲೆ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟ್ರಂಪ್, ಟೆಹ್ರಾನ್ ಮುಂದಿಟ್ಟಿರುವ ಪ್ರಸ್ತಾವನೆ “ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದರು. ನಾನು ಅವರ ಒಪ್ಪಂದವನ್ನು ತಿರಸ್ಕರಿಸುತ್ತಿದ್ದೇನೆ. ಹಾರ್ಮುಜ್ ಜಲಸಂಧಿಯ ಮೇಲೆ ಈಗಾಗಲೇ ಅಮೆರಿಕ “ಸಂಪೂರ್ಣ ನಿಯಂತ್ರಣ ಹೊಂದಿದ್ದು, ಅದರ ಮೂಲಕ “ಭಾರಿ ಪ್ರಮಾಣದ ತೈಲ” ಸಾಗುತ್ತಿದೆ. ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ತೆರೆಯುವ ಒಪ್ಪಂದ ಮಾಡಿಕೊಳ್ಳಲು ಇರಾನ್ ಬಯಸಿದೆ. ಏಕೆಂದರೆ “ಅವರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ” ಎಂದು ತಿಳಿಸಿದ್ದರು.

ಕಳೆದ ವಾರ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ನಡೆದ ಮಾತುಕತೆಗಳಲ್ಲಿ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದು ಹಾಗೂ ಸಂಘರ್ಷವನ್ನು ಅಂತ್ಯಗೊಳಿಸುವ ಕುರಿತು ಪ್ರಸ್ತಾಪಿಸಿದ್ದಾಗಿ ಇರಾನ್ ತಿಳಿಸಿತ್ತು.

ವಿಶ್ವದ ಒಟ್ಟು ಅನಿಲ ಮತ್ತು ತೈಲ ಪೂರೈಕೆಯ ಸುಮಾರು ಐದನೇ ಒಂದು ಭಾಗ ಸಾಗುವ ಈ ಪ್ರಮುಖ ಜಲಮಾರ್ಗವು ಫೆಬ್ರವರಿಯಲ್ಲಿ ಯುದ್ಧ ಆರಂಭವಾದ ಬಳಿಕ ಬಹುತೇಕ ಬಂದ್ ಆಗಿದೆ.

ಈ ನಡುವೆ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯಲ್ಲಿ ಮಧ್ಯಸ್ಥಿಕೆ ವಹಿಸುತ್ತಿರುವ ಒಮಾನ್, ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಎಲ್ಲರೂ ಮುಕ್ತ ಸಂವಾದವನ್ನು ಮುಂದುವರಿಸಬೇಕು ಎಂದು ಕರೆ ನೀಡಿದೆ.

ಒಮಾನ್ ವಿದೇಶಾಂಗ ಸಚಿವ ಸಯ್ಯಿದ್ ಬದರ್ ಬಿನ್ ಹಮದ್ ಬಿನ್ ಹಮೂದ್ ಅಲ್ ಬುಸೈದಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಈ ಕಾರ್ಯತಂತ್ರದ ಜಲಮಾರ್ಗದಲ್ಲಿ ನೌಕಾಯಾನವನ್ನು ಸುರಕ್ಷಿತವಾಗಿಡುವ ಪ್ರಯತ್ನಗಳಿಗೆ “ಎಲ್ಲಾ ಪಕ್ಷಗಳು” ಒಮಾನ್‌ನೊಂದಿಗೆ ಸಹಕರಿಸಬೇಕು ಎಂದು ಹೇಳಿದ್ದಾರೆ.

ಇರಾನ್‌ನ ಪ್ರಸ್ತಾವನೆಯನ್ನು ಟ್ರಂಪ್ ತಿರಸ್ಕರಿಸಿರುವುದನ್ನು ನ್ಯಾಟೋಗೆ ಅಮೆರಿಕದ ರಾಯಭಾರಿ ಮ್ಯಾಥ್ಯೂ ವಿಟೇಕರ್ ಕೂಡ ಸಮರ್ಥಿಸಿದ್ದಾರೆ.

ಶನಿವಾರ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ವಿಟೇಕರ್, ಇರಾನ್ “ಅರ್ಧಮಟ್ಟದ ಕ್ರಮಗಳು” ಹಾಗೂ “ಭ್ರಮೆ ಮೂಡಿಸುವ ಒಪ್ಪಂದಗಳನ್ನು” ಮುಂದಿಡುವ ಮೂಲಕ ಜಾಗತಿಕ ವೇದಿಕೆಯಲ್ಲಿ ತನ್ನನ್ನು ಉತ್ತಮವಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಅದನ್ನು ತಿರಸ್ಕರಿಸುವುದು ಅಧ್ಯಕ್ಷ ಟ್ರಂಪ್ ಅವರ ಹಕ್ಕು ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಅಮೆರಿಕದ ಆರ್ಥಿಕ ಒತ್ತಡವು ಟೆಹ್ರಾನ್ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಮೆರಿಕದ ಆರ್ಥಿಕ ಸಚಿವ ಸ್ಕಾಟ್ ಬೆಸೆಂಟ್ ಶನಿವಾರ ಹೇಳಿದ್ದಾರೆ.

ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬೆಸೆಂಟ್, ಟರ್ಕಿ, ಒಮಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ವಿವಿಧ ಇರಾನ್ ವಿಮಾನಯಾನ ಸಂಸ್ಥೆಗಳ ವಿಮಾನಗಳನ್ನು ಸ್ಥಗಿತಗೊಳಿಸಿವೆ. ಯುಎಇ ಮತ್ತು ಟರ್ಕಿಯ ಕೆಲವು ಬ್ಯಾಂಕ್‌ಗಳು ಇರಾನ್‌ನೊಂದಿಗೆ ಹಣಕಾಸು ವಹಿವಾಟುಗಳನ್ನು ಸ್ಥಗಿತಗೊಳಿಸಿವೆ ಎಂದು ತಿಳಿಸಿದ್ದಾರೆ.

ಇರಾನ್ ಮೇಲೆ ಆರ್ಥಿಕ ದಿಗ್ಬಂಧನ ಹೇರಿರುವ ಟ್ರಂಪ್ ಆಡಳಿತ ಅದನ್ನು “ಆಪರೇಷನ್ ಎಕನಾಮಿಕ್ ಔಟ್‌ಕಾಸ್ಟ್” ಎಂದು ಕರೆದಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಟೆಹ್ರಾನ್ ಮೇಲೆ ಒತ್ತಡ ಹೇರಲು ನಿರ್ಬಂಧಗಳನ್ನು ಬಳಸಲಾಗುತ್ತಿದೆ.

ಆದರೆ, ಇತ್ತೀಚಿನ ನಿರ್ಬಂಧಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಲಿವೆ ಎಂಬ ಬಗ್ಗೆ ಕೆಲವು ಅರ್ಥಶಾಸ್ತ್ರಜ್ಞರು ಪ್ರಶ್ನೆ ಎತ್ತಿದ್ದಾರೆ.

ಇದು ಇರಾನ್‌ನ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.

ಇರಾನ್ ತೈಲದ ಅತಿದೊಡ್ಡ ಖರೀದಿದಾರ ಚೀನಾ ಈ ರಾಷ್ಟ್ರಗಳಲ್ಲಿ ಪ್ರಮುಖವಾದುದು. ಈ ಹಿಂದೆ ಅಮೆರಿಕ ಹೇರಿದ್ದ ನಿರ್ಬಂಧಗಳನ್ನೂ ಚೀನಾ ಕಡೆಗಣಿಸಿ, ಟೆಹ್ರಾನ್‌ನೊಂದಿಗೆ ವ್ಯಾಪಾರ ಮುಂದುವರಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇನ್ನು ನಿಮ್ಮ ಆಟ ನಡೆಯಲ್ಲ, ಉಗ್ರವಾದ ನಿಲ್ಲಿಸಿ-ಬುದ್ಧಿ ಕಲಿಯಿರಿ: ಸುಳ್ಳು ಹೇಳಿದ ‘ಸರಣಿ ಭಯೋತ್ಪಾದಕ’ Pakಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು..!

'ಅವರ ಹತ್ತಿರ ದುಡ್ಡೇ ಇಲ್ಲ, ಸಂಕಷ್ಟದಲ್ಲಿದ್ದಾರೆ': ಸಂಧಾನ ಪ್ರಸ್ತಾಪ ಕಸದ ಬುಟ್ಟಿಗೆ ಎಸೆದು, Iran ಸ್ಥಿತಿ ಲೇವಡಿ ಮಾಡಿದ ಡೊನಾಲ್ಡ್ ಟ್ರಂಪ್..!

ವಿದೇಶಿ ಮಾರುಕಟ್ಟೆಗೆ ಕಲಬುರಗಿ ತೊಗರಿಬೇಳೆ ಎಂಟ್ರಿ: ಮಾಲ್ಡೀವ್ಸ್‌ಗೆ 1 ಮೆಟ್ರಿಕ್ ಟನ್ ರಫ್ತು, ರೈತರಿಗೆ ಶೇ.30ಕ್ಕೂ ಅಧಿಕ ಲಾಭ..!

‘ಮಧು ಬಂಗಾರಪ್ಪ, MLCಗಳ ಬಣ್ಣ ಬಯಲು ಮಾಡುತ್ತೇನೆ, Video ಕ್ಲಿಪ್‌ಗಳಿವೆ, CMಗೆ ಕೊಡುತ್ತೇನೆ: ಹೆಚ್.ಎಸ್. ಸುಂದರೇಶ್ ಹೊಸ ಬಾಂಬ್

ವಿಧಾನ ಪರಿಷತ್ ಚುನಾವಣೆ ಕಾವು: ನಾಲ್ಕೂ ಕ್ಷೇತ್ರಗಳ ಗೆಲುವಿಗೆ NDA ಪ್ಲ್ಯಾನ್, BJP-JDS ಮಹತ್ವದ ಸಭೆ..!