ಡೊನಾಲ್ಡ್ ಟ್ರಂಪ್ ಮತ್ತು ಹಾರ್ಮುಜ್ ಜಲಸಂಧಿ (AI ಚಿತ್ರ) 
ವಿದೇಶ

'ಅವರ ಹತ್ತಿರ ದುಡ್ಡೇ ಇಲ್ಲ, ಸಂಕಷ್ಟದಲ್ಲಿದ್ದಾರೆ': ಸಂಧಾನ ಪ್ರಸ್ತಾಪ ಕಸದ ಬುಟ್ಟಿಗೆ ಎಸೆದು, Iran ಸ್ಥಿತಿ ಲೇವಡಿ ಮಾಡಿದ ಡೊನಾಲ್ಡ್ ಟ್ರಂಪ್..!

ಅವರು ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಬಯಸುತ್ತಿದ್ದಾರೆ. ಏಕೆ ಗೊತ್ತೇ? ಏಕೆಂದರೆ ಅವರು ಸಂಕಷ್ಟದಲ್ಲಿದ್ದಾರೆ. ಏಕೆಂದರೆ ಅವರಿಗೆ ಹಣವೇ ಬರುತ್ತಿಲ್ಲ. ಅವರಿಗೆ ಹಣ ಬರುತ್ತಿದ್ದದ್ದು ಹಾರ್ಮುಜ್ ಜಲಸಂಧಿಯಿಂದ. ಹೀಗಾಗಿ ಅವರೇ ತಮ್ಮನ್ನು ತಾವು ಸಂಕಷ್ಟಕ್ಕೆ ಸಿಲುಕಿಸಿಕೊಂಡಿದ್ದಾರೆ.

ವಾಷಿಂಗ್ಟನ್: ಜಾಗತಿಕ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿರುವ ವಿದ್ಯಮಾನವೊಂದರಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ನೀಡಿದ್ದ ಮಹತ್ವದ ಸಂಧಾನದ ಪ್ರಸ್ತಾಪವನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರೆ.

ವ್ಯೂಹಾತ್ಮಕವಾಗಿ ಅತ್ಯಂತ ಪ್ರಮುಖವಾಗಿರುವ ಸ್ಟ್ರೈಟ್ ಆಫ್ ಹಾರ್ಮುಜ್ (Strait of Hormuz) ಜಲಸಂಧಿಯನ್ನು ಮರುಪ್ರಾರಂಭಿಸುವ ಇರಾನ್ ಯೋಜನೆಯನ್ನು ಅಮೆರಿಕ ಒಪ್ಪಿಲ್ಲ.

ಶ್ವೇತಭವನದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಲೇವಡಿ ಮಾಡಿದ್ದಾರೆ.

ಅವರು ತಕ್ಷಣವೇ ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಬಯಸುತ್ತಿದ್ದಾರೆ. ಏಕೆ ಗೊತ್ತೇ? ಏಕೆಂದರೆ ಅವರು ಸಂಕಷ್ಟದಲ್ಲಿದ್ದಾರೆ. ಏಕೆಂದರೆ ಅವರಿಗೆ ಹಣವೇ ಬರುತ್ತಿಲ್ಲ. ಅವರಿಗೆ ಹಣ ಬರುತ್ತಿದ್ದದ್ದು ಹಾರ್ಮುಜ್ ಜಲಸಂಧಿಯಿಂದ. ಹೀಗಾಗಿ ಅವರೇ ತಮ್ಮನ್ನು ತಾವು ಸಂಕಷ್ಟಕ್ಕೆ ಸಿಲುಕಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದ್ದರಿಂದ ಇಡೀ ಜಗತ್ತಿಗೇ ಸಮಸ್ಯೆ ಎದುರಾಗಿದೆ ಎಂದು ಹೇಳಿದ ಟ್ರಂಪ್, ಇರಾನ್ ಬಂದರುಗಳ ಮೇಲೆ “ಇತಿಹಾಸದಲ್ಲೇ ಅತ್ಯಂತ ದೊಡ್ಡ ದಿಗ್ಬಂಧನ” ಹೇರಿಸುವ ಮೂಲಕ ಅಮೆರಿಕ ಸೇನೆ ಇರಾನ್ ಆರ್ಥಿಕತೆಯನ್ನು ಗುರಿಯಾಗಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಅವರು ಅದನ್ನು ಬಂದ್ ಮಾಡಿ ಜಗತ್ತಿಗೆ ಸಮಸ್ಯೆ ಸೃಷ್ಟಿಸೋಣ ಎಂದುಕೊಂಡರು. ಬಳಿಕ ನಾನು ಬಂದೆ. ನಾವು ಸೇನಾ ಇತಿಹಾಸದಲ್ಲೇ ಅತ್ಯಂತ ದೊಡ್ಡ ದಿಗ್ಬಂಧನವನ್ನು ಹೇರಿದೆವು. ಅದು ಉಕ್ಕಿನ ಗೋಡೆಯಂತಿದೆ. ನಾವು ಅದನ್ನು ನಿರ್ಮಿಸಿದ್ದೇವೆ. ಈಗ ಏನಾಗಿದೆ ಗೊತ್ತೇ? ಅವರಿಗೆ ಹಣವೇ ಇಲ್ಲ. ಅವರು ಜಲಸಂಧಿಯನ್ನು ಮುಚ್ಚಲು ಬಯಸಿದ್ದರು. ನಾನು, ‘ಸರಿ, ನಾವು ಅದನ್ನು ನಿಮ್ಮ ಮೇಲೆಯೇ ಬಂದ್ ಮಾಡುತ್ತೇವೆ. ಆದರೆ ಉಳಿದವರಿಗೆ ಅದನ್ನು ಬಳಸಲು ಅವಕಾಶ ಇರುತ್ತದೆ’ ಎಂದು ಹೇಳಿದೆ ಎಂದು ಹೇಳಿದರು.

ಕತಾರ್ ಮಧ್ಯಸ್ಥಿಕೆಯ ಮೂಲಕ ಇರಾನ್ ಮುಂದಿಟ್ಟಿದ್ದ ಪ್ರಸ್ತಾವನೆಯನ್ನು ತಾನು ತಿರಸ್ಕರಿಸಿರುವುದಾಗಿ ಟ್ರಂಪ್ ಬಹಿರಂಗಪಡಿಸಿದ ಒಂದು ದಿನದ ಬಳಿಕ ಅವರ ಈ ಹೇಳಿಕೆ ಬಂದಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಹಿನ್ನೆಲೆಯಲ್ಲಿ ಈ ವಾರದ ಆರಂಭದಲ್ಲಿ ನ್ಯೂಯಾರ್ಕ್‌ನಲ್ಲಿ ಇರಾನ್ ತನ್ನ ಶಾಂತಿ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು.

ಇದರ ಬೆನ್ನಲ್ಲೇ ಭಾನುವಾರ ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷವನ್ನು ರಾಜತಾಂತ್ರಿಕ ಮಾತುಕತೆಯ ಮೂಲಕವೇ ಪರಿಹರಿಸಲು ಸಾಧ್ಯ ಎಂದು ಹೇಳಿದೆ. ಪ್ರಮುಖ ಹಾರ್ಮುಜ್ ಜಲಸಂಧಿಯನ್ನು ತೆರೆಯುವುದು ಮತ್ತು ಪ್ರದೇಶದಲ್ಲಿನ ಹೋರಾಟವನ್ನು ನಿಲ್ಲಿಸುವ ಕುರಿತು ತಾನು ಮುಂದಿಟ್ಟಿರುವ ಶಾಂತಿ ಪ್ರಸ್ತಾವನೆಗೆ ಅಧಿಕೃತ ಪ್ರತಿಕ್ರಿಯೆಗಾಗಿ ಇನ್ನೂ ಕಾಯುತ್ತಿರುವುದಾಗಿ ಇರಾನ್ ತಿಳಿಸಿದೆ.

ಮಧ್ಯಪ್ರಾಚ್ಯ ಯುದ್ಧ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ವಿರುದ್ಧ ಜಂಟಿ ದಾಳಿ ನಡೆಸಿದ ಬಳಿಕ ಆರಂಭವಾಯಿತು. ಈ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು.

ಇದಕ್ಕೆ ಪ್ರತಿಯಾಗಿ ಇರಾನ್, ಇಸ್ರೇಲ್‌ನ ವಿವಿಧ ಗುರಿಗಳು ಹಾಗೂ ಕೊಲ್ಲಿ ಪ್ರದೇಶದಲ್ಲಿನ ಅಮೆರಿಕದೊಂದಿಗೆ ಸಂಪರ್ಕ ಹೊಂದಿರುವ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು.

ಇದೇ ವೇಳೆ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿತು. ಇದರಿಂದ ಜಾಗತಿಕ ಆರ್ಥಿಕತೆ ಅಸ್ಥಿರಗೊಂಡು, ಇಂಧನ ಬೆಲೆಗಳು ತೀವ್ರವಾಗಿ ಏರಿಕೆಯಾಗಿದ್ದವು.

ಅಮೆರಿಕವು ಇರಾನ್ ಬಂದರುಗಳ ಮೇಲಿನ ನೌಕಾ ದಿಗ್ಬಂಧನವನ್ನು ತೆರವುಗೊಳಿಸಿ, ಇರಾನ್ ತೈಲ ಮಾರಾಟದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿ ಹಾಗೂ ಲೆಬನಾನ್ ಸೇರಿದಂತೆ ಎಲ್ಲ ಮುಂಚೂಣಿಗಳಲ್ಲೂ ಕದನ ವಿರಾಮ ಜಾರಿಗೊಳಿಸಿದರೆ, ಏಳು ದಿನಗಳೊಳಗೆ ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವುದರ ಜೊತೆಗೆ ತನ್ನ ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆಗಳನ್ನು ಪುನರಾರಂಭಿಸುವುದಾಗಿ ಇರಾನ್ ಪ್ರಸ್ತಾವನೆ ನೀಡಿತ್ತು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಟ್ರಂಪ್ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದರೂ, ಅವರ ನಿರಾಕರಣೆಯನ್ನು ಅಧಿಕೃತವಾಗಿ ಇರಾನ್‌ಗೆ ತಿಳಿಸಲಾಗಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.

“ಮಧ್ಯಸ್ಥರು ತಮ್ಮ ಅಂತಿಮ ನಿಲುವನ್ನು ನಮಗೆ ತಿಳಿಸುವುದಕ್ಕಾಗಿ ನಾವು ಕಾಯುತ್ತಿದ್ದೇವೆ. ಅವರ ಪ್ರತಿಕ್ರಿಯೆ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ,” ಎಂದು ಅವರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇನ್ನು ನಿಮ್ಮ ಆಟ ನಡೆಯಲ್ಲ, ಉಗ್ರವಾದ ನಿಲ್ಲಿಸಿ-ಬುದ್ಧಿ ಕಲಿಯಿರಿ: ಸುಳ್ಳು ಹೇಳಿದ ‘ಸರಣಿ ಭಯೋತ್ಪಾದಕ’ Pakಗೆ ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು..!

ವಿದೇಶಿ ಮಾರುಕಟ್ಟೆಗೆ ಕಲಬುರಗಿ ತೊಗರಿಬೇಳೆ ಎಂಟ್ರಿ: ಮಾಲ್ಡೀವ್ಸ್‌ಗೆ 1 ಮೆಟ್ರಿಕ್ ಟನ್ ರಫ್ತು, ರೈತರಿಗೆ ಶೇ.30ಕ್ಕೂ ಅಧಿಕ ಲಾಭ..!

‘ಮಧು ಬಂಗಾರಪ್ಪ, MLCಗಳ ಬಣ್ಣ ಬಯಲು ಮಾಡುತ್ತೇನೆ, Video ಕ್ಲಿಪ್‌ಗಳಿವೆ, CMಗೆ ಕೊಡುತ್ತೇನೆ: ಹೆಚ್.ಎಸ್. ಸುಂದರೇಶ್ ಹೊಸ ಬಾಂಬ್

ವಿಧಾನ ಪರಿಷತ್ ಚುನಾವಣೆ ಕಾವು: ನಾಲ್ಕೂ ಕ್ಷೇತ್ರಗಳ ಗೆಲುವಿಗೆ NDA ಪ್ಲ್ಯಾನ್, BJP-JDS ಮಹತ್ವದ ಸಭೆ..!

ಕೋರ್ಟ್‌ನಲ್ಲಿ ನಟ ದರ್ಶನ್‌ಗೆ ಮತ್ತೆ ಶಾಕ್: ಪ್ರದೋಷ್ ಹೇಳಿಕೆ ಮುಂದೂಡಿಕೆ ಅರ್ಜಿ ತಿರಸ್ಕೃತ, ಸೆ.28ರಂದೇ ಹೇಳಿಕೆ ದಾಖಲು..!