ದೇಹ ಪಂಚಾಂಗ

Updated on: 

ದೇಹಕ್ಕೂ, ನಕ್ಷತ್ರಗಳಿಗೂ ವಿಶೇಷ ಸಂಬಂಧ. ವಾಮನ ಪುರಾಣದಲ್ಲಿ ನಾರದ - ಪುಲಸ್ತಪು ಲಸ್ತ್ಯ ಮುನಿ ಸಂವಾದದಲ್ಲಿ ನಾರದರು, 'ಲಕ್ಷ್ಮೀಪತಿ ವಾಸುದೇವನಾದ ಮಹಾವಿಷ್ಣುವು ಈ ಬ್ರಹ್ಮಾಂಡದ ಸೃಷ್ಟಿಕರ್ತನೆನೆಸಿ, ಇಪ್ಪತ್ತೇಳು ನಕ್ಷತ್ರಗಳ ಮೂಲಕ ಶರೀರದಲ್ಲಿ ಸ್ಥಿತನಾಗಿದ್ದಾನೆಂದು ಕೇಳಿದ್ದೇನೆ. ದಯಮಾಡಿ ಅದನ್ನು  ವಿವರವಾಗಿ ತಿಳಿಸಿಕೊಡಬೇಕು' ಎಂದು ಪ್ರಾರ್ಥಿಸುತ್ತಾರೆ.
ಆಗ ಮಹಾಜ್ಞಾನಿಗಳಾದ ಪುಲಸ್ತ್ಯರು ನೀಡಿದ ವಿವರಣೆ ಹೀಗಿದೆ. ಇದು ಕಾಲಪುರುಷನಾದ ಮಹಾವಿಷ್ಣುವಿನ ಪಾದಗಳಿಂದ ಪ್ರಾರಂಭವಾಗುತ್ತದೆ.
ಮೂಲ ನಕ್ಷತ್ರ ಮಹಾವಿಷ್ಣುವಿನ ಎರಡು ಪಾದಗಳನ್ನು ಪ್ರತಿನಿಧಿಸುತ್ತದೆ. ರೋಹಿಣಿ ಎರಡು ಕಾಲುಗಳನ್ನು, ಅಶ್ವಿನಿ ಎರಡು ಮಂಡಿಗಳನ್ನು. ಪೂರ್ವಾಷಾಢ ಮತ್ತು ಉತ್ತರಾಷಾಢ ಇವು ವಿಷ್ಣುವಿನ ತೊಡೆಗಳು. ಪುಬ್ಬ ಮತ್ತು ಉತ್ತರಾ ಜನನೇಂದ್ರಿಯಗಳನ್ನು, ಕೃತ್ತಿಕಾ ಸೊಂಟವನ್ನು ಪ್ರತಿನಿಧಿಸುತ್ತದೆ.
ಪೂರ್ವಾಭಾದ್ರ ಮತ್ತು ಉತ್ತರಾಭಾದ್ರ ಎರಡು ಪಕ್ಕೆ ಭಾಗಗಳು, ರೇವತಿ ಎರಡು ಕಂಕುಳ ಭಾಗ, ಅನುರಾಧ ಹೃದಯ, ಧನಿಷ್ಟ ಬೆನ್ನು. ವಿಶಾಖ ಎರಡು ತೋಳುಗಳು, ಹಸ್ತ ನಕ್ಷತ್ರ ಎರಡು ಹಸ್ತಗಳನ್ನು ಮತ್ತು ಪುನರ್ವಸು ಬೆರಳುಗಳನ್ನು, ಆಶ್ಲೇಷ ಉಗುರುಗಳನ್ನು ಪ್ರತಿನಿಧಿಸುತ್ತದೆ.
ಜ್ಯೇಷ್ಠ ನಕ್ಷತ್ರ ನಾಲಿಗೆಯನ್ನೂ, ಶ್ರವಣ ಎರಡು ಕಿವಿಗಳನ್ನೂ, ಪುಷ್ಯ ಬಾಯಿಯನ್ನೂ, ಸ್ವಾತಿ ಹಲ್ಲುಗಳನ್ನೂ ಸೂಚಿಸುತ್ತದೆ. ಶತಭಿಷಾ ಎರಡು ಕೆನ್ನೆಗಳು, ಮಖ ನಕ್ಷತ್ರ ಮೂಗು, ಮೃಗಶಿರಾ ಎರಡು ಕಣ್ಣುಗಳು. ಚಿತ್ತಾ ನಕ್ಷತ್ರ ಹಣೆ, ಭರಣಿ ಶಿರಸ್ಸು, ಆರಿದ್ರಾ ಕೇಶಗಳು, ಇವು ಮಹಾವಿಷ್ಣುವಿನ ನಕ್ಷತ್ರ ಶರೀರವಾಗಿದೆ. ಈ ರೀತಿಯಾಗಿ ಪುಲಸ್ತ್ಯ ಮುನಿಗಳು ನಾರದರಿಗೆ ಮಹಾವಿಷ್ಣುವಿನ ನಕ್ಷತ್ರ ಶರೀರ ವಿವರಣೆಯನ್ನು ನೀಡಿದರು.

-ವಿ. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com