ರೋಗಗಳಿಗೂ ಗ್ರಹಗಳಿಗೂ ಅವಿನಾಭಾವ ಸಂಬಂಧವಿದೆ. ಮಾನವನಲ್ಲಿ ಕಂಡುಬರುವ ಪ್ರತಿ ರೋಗಗಳಿಗೂ ಗ್ರಹಗಳ ಪ್ರಭಾವವೇ ಕಾರಣವಾಗಿರುತೆ. ಈ ನಿಟ್ಟಿನಲ್ಲಿ ಯಾವ ಕಾಯಿಲೆಗೆ ಯಾವ ಗ್ರಹ ಕಾರಣ ಎಂಬುದನ್ನು ತಿಳಿಯಬೇಕು.
ಸೂರ್ಯ: ಪಿತ್ತದಿಂದ ತೊಂದರೆ, ಜ್ವರ, ಫಿಟ್ಸ್, ಮೂಳೆಗೆ ಸಂಬಂಧಿಸಿದ ತೊಂದರೆಗಳು. ಹೃದಯ ಹಾಗೂ ಹೊಟ್ಟೆಗೆ ಸಂಬಂಧಿಸಿದ ತೊಂದರೆ, ಕಾಮಾಲೆ, ಚರ್ಮದ ತೊಂದರೆ.
ಚಂದ್ರ
ಶ್ವಾಸಕೋಶಕ್ಕೆ ಸಂಬಂಧಿಸಿದ ತೊಂದರೆ, ವಾಂತಿ, ಭೇದಿ, ಮನೋರೋಗ, ಅಜೀರ್ಣ, ವಾಂತಿ, ಉದರಕ್ಕೆ ಸಂಬಂಧಿಸಿದ ತೊಂದರೆ, ಪಿತ್ತಕ್ಕೆ ಸಂಬಂಧಿಸಿದ ತೊಂದರೆ, ತಲೆಸುತ್ತು, ದೃಷ್ಟಿಯ ತೊಂದರೆ
ಕುಜ
ರಕ್ತದ ಒತ್ತಡ, ರಕ್ತಕ್ಕೆ ಸಂಬಂಧಿಸಿದ ತೊಂದರೆ, ದಣಿವು, ಬಾಯಿ ಒಣಗುವುದು, ಕುಷ್ಠ, ನರಗಳ ತೊಂದರೆ, ಅಪಸ್ಮಾರ, ಚರ್ಮ ತೊಂದರೆ, ಪಿತ್ತ,.
ಬುಧ
ಕಣ್ಣು, ಮೂಗು, ಗಂಟಲು, ವಾತ, ಕಜ್ಜಿ, ತೊನ್ನು, ಪಾರ್ಶ್ವವಾಯು, ಚರ್ಮರೋಗ, ಬುದ್ಧಿವಿಕಲ್ಪ, ತುರಿಕೆ, ಮೂಳೆಗೆ ಸಂಬಂಧಿಸಿದ ತೊಂದರೆ.
ಗುರು
ಚರ್ಮರೋಗ, ಹೊಟ್ಟೆಯ ತೊಂದರೆ, ಸಕ್ಕರೆ ಕಾಯಿಲೆ, ನೆನಪಿನ ಶಕ್ತಿ ಕಡಿಮೆ, ಜ್ವರ, ಕಿವಿಯ ತೊಂದರೆ, ಮೂಲವ್ಯಾಧಿ, ಕೀವಿನಿಂದ ಹುಣ್ಣು, ಕುರು, ಶ್ವಾಸಕೋಶದ ತೊಂದರೆ.
ಶುಕ್ರ
ಗುಹ್ಯೇಂದ್ರಿಯ ಕಾಯಿಲೆಗಳು, ಸಕ್ಕರೆ ಕಾಯಿಲೆ, ಕಣ್ಣಿನ ತೊಂದರೆ, ಮೂತ್ರದ ಕಾಯಿಲೆ, ನಿಶಕ್ತಿ, ಹಲ್ಲುನೋವು.
ಶನಿ
ಉದರ ಕೈಕಾಲು, ಪಾದ, ನರಗಳಿಂದ ತೊಂದರೆ, ಅಸ್ತಮ, ಪಾರ್ಶ್ವವಾಯು, ಮೂರ್ಛೆರೋಗ, ಕೆಮ್ಮು.
ರಾಹು
ತೊನ್ನು, ಚರ್ಮದ ಕಾಯಿಲೆ, ಕ್ಯಾನ್ಸರ್, ಕುಷ್ಠ, ಸಿಡುಬು, ಜ್ವರ, ಕೈಕಾಲು ನೋವು.
ಕೇತು
ಮಾನಸಿಕ ತೊಂದರೆ, ಉದರ ತೊಂದರೆ, ವೃಣ, ಸುಟ್ಟಗಾಯಗಳಿಂದ ತೊಂದರೆ, ಉರಿಮೂತ್ರ, ವಾತ, ತೊಂದರೆ, ಬೆನ್ನಿಗೆ ಸಂಬಂಧಿಸಿದ ತೊಂದರೆ.