ಯುಗ ಧರ್ಮ ಕೂರ್ಮ ಪುರಾಣ

ಯುಗ ಧರ್ಮ ಕೂರ್ಮ ಪುರಾಣ
Updated on: 

ಸಮುದ್ರ ಮಥನದ ಕಥೆ ಗೊತ್ತೇ ಇದೆ. ಮಂದರ ಪರ್ವತವನ್ನು ಕಡಗೋಲನ್ನಾಗಿಯೂ, ವಾಸುಕಿಯನ್ನು ಹಗ್ಗವನ್ನಾಗಿಯೂ ಮಾಡಿಕೊಂಡು ದೇವ-ದಾನವರು ಕ್ಷೀರ ಸಾಗರವನ್ನು ಕಡೆಯುವ ಸಂದರ್ಭದಲ್ಲಿ ಮಂದರ ಪರ್ವತವು ಸಾಗರದ ತಳಕ್ಕೆ ಕುಸಿಯಲಾರಂಭಿಸುತ್ತದೆ. ಆಗ ಮಹಾವಿಷ್ಣುವು ಬೃಹತ್ ಕೂರ್ಮದ (ಆಮೆ) ರೂಪ ತಳೆದು ಮುಳುಗುತ್ತಿದ್ದ ಪರ್ವತವನ್ನು ಬೆನ್ನ ಮೇಲೆ ಹೊರುತ್ತಾನೆ.
ಕೂರ್ಮಾವತಾರದಲ್ಲಿ ಆವಿರ್ಭವಗೊಂಡ ಮಹಾವಿಷ್ಣುವು ತನ್ನ ಈ ಅವತಾರದಲ್ಲಿ ಉದ್ಘೋಶಿಸಿದ ಮಹಾಮಂತ್ರಗಳೇ 'ಕೂರ್ಮ ಪುರಾಣ'. ಇದನ್ನು ಪ್ರಪ್ರಥಮವಾಗಿ ಕೂರ್ಮವಾತಾರಿ ಮಹಾವಿಷ್ಣುವು ನಾರದರಿಗೆ ಬೋಧಿಸಿದನು. ನಂತರ ನಾರದರು ಇದನ್ನು ನೈಮಿಷಾರಣ್ಯ ವಾಸಿಗಳಿಗೆ ಬೋಧಿಸಿದರು.
ಕೂರ್ಮ ಪುರಾಣದಲ್ಲೇನಿದೆ?
ಕೂರ್ಮ ಪುರಾಣ ನಾಲ್ಕು ಕಾಂಡಗಳನ್ನು ಹೊಂದಿದೆ. ಅವು ಕ್ರಮವಾಗಿ ಬ್ರಹ್ಮಸಂಹಿತ, ಭಗತ್ಸಂಹಿತ, ಗೌರಿ ಸಂಹಿತ ಮತ್ತು ವೈಷ್ಣವಿ ಸಂಹಿತಗಳೆಂಬುದು. ಪ್ರಸ್ತುತ ಬ್ರಹ್ಮಸೂತ್ರ ಒಂದೇ ಲಭ್ಯವಿದ್ದು, ಇತರೆ ಸಂಹಿತೆಗಳು ನಷ್ಟವಾಗಿ ಹೋಗಿದೆ.
ಬ್ರಹ್ಮಸಂಹಿತದಲ್ಲಿ ಕೂರ್ಮಾವತಾರದ ಉದ್ದೇಶ ಹಾಗೂ ಧರ್ಮವೆಂದರೆ ಏನು ಎಂಬ ಬಗ್ಗೆ ಸುದೀರ್ಘ ವಿವರಣೆ ಇದೆ. ಅದರಲ್ಲಿ ಮುಖ್ಯವಾಗಿ 'ಧರ್ಮವೋ ಹತೋ ಹಂತಿ೤ ಧರ್ಮೋ ರಕ್ಷತಿ
ರಕ್ಷಿತಃ' ಎಂಬ ಮಹದ್ವಾಕ್ಯವನ್ನು ಹೇಳಲಾಗಿದೆ. ಧರ್ಮ ಎಂದರೇನು? ಮನುಷ್ಯನಾಗಿ ಹುಟ್ಟಿದವನು ಅದನ್ನು ಹೇಗೆ ಆಚರಿಸಬೇಕು ಎಂಬ ಸವಿಸ್ತಾರವಾದ ವಿವರಣೆ ಇದೆ. ಇದರಲ್ಲಿ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳ ಯುಗಧರ್ಮಗಳೇನು, ಅವುಗಳ ಅತಿಶಯಗಳು ಏನು ಎಂಬ ಬಗ್ಗೆಯೂ, ಈ ಯುಗಗಳ ಮಹತ್ವದ ಬಗ್ಗೆಯೂ ಸವ್ಸ್ತಾರ ಉಲ್ಲೇಖವಿದೆ.
ಯಾಗ, ಯಜ್ಞ ಆಚರಿಸಲು ಯಾರು ಅರ್ಹರು, ಹೇಗೆ ಆಚರಿಸಬೇಕು ಎಂಬ ಬಗ್ಗೆ ಉಲ್ಲೇಖವಿದೆ. ಮನುಷ್ಯ ಮಾತ್ರನಾದವನು ತ್ರಿಗುಣಗಳಲ್ಲಿ ಶ್ರೇಷ್ಠವಾದ ಸಾತ್ವಿಕ ಮಾರ್ಗದಲ್ಲಿ ಜೀವಿಸಿ, ಸನ್ಮಾರ್ಗ, ಧರ್ಮ ಮಾರ್ಗಗಳಲ್ಲಿ ಸಾಗಿ ಅಧ್ಯಾತ್ಮಿಕ ಉನ್ನತಿ ಪಡೆದು ಭಗವಂತನ ಸಾಕ್ಷಾತ್ಕಾರವನ್ನು ಹೇಗೆ ಸಾಧಿಸಬೇಕು ಎಂಬುದರ ಬಗ್ಗೆ ಸುದೀರ್ಘ ವಿವರಣೆ ಇದೆ. ಇದುವೇ 'ಕೂರ್ಮ ಪುರಾಣ.'
-  ವಿ. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com