ಭೂತ-ಪ್ರೇತಗಳ ಕಥೆ ಸುಳ್ಳೇ?

ಭೂತ-ಪ್ರೇತಗಳ ಬಗ್ಗೆ, ಆತ್ಮಗಳ ಬಗ್ಗೆ, ಭೂತಬಂಗಲೆಗಳ ಬಗ್ಗೆ ಸಾಕಷ್ಟು ಪುಸ್ತಕಗಳು ಬಂದಿವೆ. ಅದೆಷ್ಟೋ ವರ್ಷಗಳ ಹಿಂದೆ ಮೃತಪಟ್ಟಿದ್ದರೂ 'ಅಲ್ಲಿ ಅವರ ನೆರಳು ಕಂಡೆ, ಇಲ್ಲಿ ಅವರನ್ನೇ ಹೋಲುವ ಪ್ರೇತಾತ್ಮ ಕಂಡೆ' ಎಂದು ಹೇಳುವುದನ್ನು ನೀವೂ ಕೇಳಿರಬಹುದು. ಇಂಥ ವಿಷಯಗಳನ್ನೇ ಒಳಗೊಂಡಿರುವ ಟಿ.ವಿ ಕಾರ್ಯಕ್ರಮಗಳನ್ನು ನೋಡಿರಬಹುದು, ಅಂಥ ಕೇಳಿರಬಹುದು. ಇವೆಲ್ಲ ನಿಮ್ಮ ಭ್ರಮೆಯೋ, ನಿಮ್ಮ ಮೆದುಳಿನ ತರಲೆಯೋ ಅಲ್ಲ. ಇದು ನಿಜ. ನಮ್ಮ ಪ್ರಾಚೀನರು ಈ ಭೂತ, ಪ್ರೇತಾತ್ಮಗಳ ಹಾಗೂ ಸಾವಿನ ನಂತರದ ಜೀವನದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಅವುಗಳ ಇರುವಿಕೆಗೆ ಕಾರಣವನ್ನೂ ನೀಡಿದ್ದಾರೆ.
ದೇಹ ತೊರೆದ ನಂತರದ ಹದಿಮೂರು ದಿನಗಳ ತನಕ ಆತ್ಮವು ದೇಹದ ಸುತ್ತವೇ ಸುತ್ತುತ್ತಿರುತ್ತದೆ. ಈ ಅವಧಿ ಇನ್ನೂ ವಿಸ್ತರಣೆಯಾಗಲೂಬಹುದು ಅಥವಾ ಆತ್ಮಕ್ಕೆ ದೇಹದ, ತನ್ನ ನೆಂಟರಿಷ್ಟರ, ತಾನಿದ್ದ ಮನೆಯ, ಆಸ್ತಿಯ ಮೇಲಿರುವ ಪ್ರೀತಿ ನಶಿಸದೇ ಹೋಗಿದ್ದಲ್ಲಿ, ಎಂದೆಂದಿಗೂ ದೂರವಾಗದೆಯೇ ಅಲ್ಲೇ ಇದ್ದುಬಿಡಬಹುದು. ಈ ಆತ್ಮವೆಂಬುದು ನಿಮ್ಮ ಯೋಚನೆಗಳ ಮೇಲೂ ಅವಲಂಬಿತವಾಗಿರುತ್ತದೆ. ಮೃತ ವ್ಯಕ್ತಿಯೊಂದಿಗೆ ನೀವು ತುಂಬಾ ಆತ್ಮೀಯತೆ ಬೆಳೆಸಿಕೊಂಡವರಾಗಿದ್ದರೆ, ನಿಮ್ಮಿಂದ ಆ ವ್ಯಕ್ತಿಯ ಸಾವನ್ನು ಒಪ್ಪಿಕೊಳ್ಳಲು ಕಷ್ಟ ವಾಗುತ್ತಿದ್ದರೆ, ಆಗಲೂ ಆತ್ಮವು ನಿಮ್ಮ ಯೋಚನೆಗೆ ಸ್ಪಂದಿಸಿ ನಿಮ್ಮ ಸುತ್ತ ಉಳಿದುಕೊಂಡು ಬಿಡುತ್ತದೆ.
ಆತ್ಮಗಳಿಗೆ ಸಂಬಂಧಿಗಳಿಲ್ಲ, ಗೆಳೆಯರಿಲ್ಲ, ಮನೆಯಿಲ್ಲ. ಅದು ಪೂರ್ತಿ ಸ್ವತಂತ್ರ. ಅದು ತನ್ನ ಕರ್ಮ ಹಾಗೂ ಆಸೆಗಳಿಗೆ ತಕ್ಕಂತೆ ಜನ್ಮತಳೆಯಲು ಬಯಸುತ್ತದೆ. ಇದೇ ಕಾರಣಕ್ಕೆ ಎಲ್ಲ ಧರ್ಮಗಳಲ್ಲೂ, ಸಂಸ್ಕೃತಿಗಳಲ್ಲೂ, ಆತ್ಮದ ಹಳೆಯ ಬಂಧವನ್ನು ಬಿಡಿಸುವ ಸಲುವಾಗಿ ಕಾರ್ಯಗಳನ್ನು ಮಾಡಲಾಗುತ್ತದೆ. ಹಾಗೆ ಮಾಡುವ ವಿಧಿವಿಧಾನಗಳಲ್ಲಿ ಅಪಸವ್ಯಗಳಾದರೆ, ಆತ್ಮ ಅತೃಪ್ತವಾಗುತ್ತದೆ ಹಾಗೂ ಆಚರಿಸಿದವರ ಮನಸಿನಲ್ಲೂ ಈ ಬಗ್ಗೆ ಯೋಚನೆಗಳು ಉಂಟಾಗಿ, ಆತ್ಮವು ಭೂತಾತ್ಮವಾಗಿ ಅಲ್ಲಿಯೇ ಉಳಿದುಕೊಂಡು ಬಿಡುತ್ತದೆ. ನಿಮ್ಮಲ್ಲಿ ಎಷ್ಟು ಮಂದಿಗೆ ನೀವು ಪ್ರೀತಿಸುವ, ಹತ್ತಿರದವರ ಆತ್ಮವು ಅತೃಪ್ತಿಯಿಂದ ಮನೆಯ ಸುತ್ತವೇ ನರಳಿಕೊಂಡಿರಲಿ ಎಂಬ ಆಸೆ ಇದೆ ಹೇಳಿ?
ಆದ್ದರಿಂದ, ದೇಹವೇ ಜೀವದ ಅಂತಿಮ ಹಂತ ಎಂದು ತಪ್ಪಾಗಿ ಕಲ್ಪಿಸಿಕೊಳ್ಳುವ ಅಜ್ಞಾನ ಒಳ್ಳೆಯದಲ್ಲ. ನಿಮ್ಮ ಗುರುಗಳ ಮಾತನ್ನು ಆಲಿಸಿರಿ. ದೇಹದೊಂದಿಗಿನ ಬಂಧವನ್ನು ಕಳಚಿ, ಅಹಂಕಾರವನ್ನು ತ್ಯಜಿಸಿ, ಆತ್ಮಕ್ಕೆ ಮುಕ್ತಿ ನೀಡಿರಿ. ಆತ್ಮವನ್ನು ಪುನಃ ದೇಹದೊಳಕ್ಕೆ ತರುವಂಥ ಕೆಲವು ತಂತ್ರಗಳು ಕೂಡ ಇವೆ. ಆದರೆ ಅದು ಪ್ರಕೃತಿಯ ಹೊಣೆ. ಆ ಕೆಲಸವನ್ನು ಪ್ರಕೃತಿಯೇ ಮಾಡುತ್ತದೆ.
ಧ್ಯಾನ್ ಫೌಂಡೇಶನ್ನಲ್ಲಿರುವ ಸಾಧಕರು, ಪೂರ್ವಜನ್ಮದ ಬಗೆಗೆ ಮಾಡಿದ ಪ್ರಯೋಗಗಳಲ್ಲಿ ತಮ್ಮ ಈ ಜನ್ಮದ ಮಗ-ಮಗಳು ಪೂರ್ವಜನ್ಮದಲ್ಲಿ ಶತ್ರುಗಳಾಗಿದ್ದನ್ನು ಕಂಡುಕೊಂಡಿದ್ದಾರೆ. ನೆನಪಿಡಿ, ಆತ್ಮಗಳಿಗೆ ಸಂಬಂಧಗಳಿರುವುದಿಲ್ಲ. ಸಂಬಂಧಗಳು ತಾತ್ಕಾಲಿಕ ಹಾಗೂ ಪಂಚಭೂತಗಳಿಗಷ್ಟೇ ಸೀಮಿತ. ಅಷ್ಟೇ ಅಲ್ಲ, ದೇಹ ಕೂಡ ಅಶಾಶ್ವತ. ಅದು ಪ್ರತಿ ಕ್ಷಣ ನಾಶದತ್ತ ಮುನ್ನಡೆಯುತ್ತ ಇರುತ್ತದೆ.
-ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


