ಮೂರು ಯೋಗ

ಮೂರು ಯೋಗ
Updated on: 

ಜಾತಕನಿಗೆ ಬರುವ ಹಲವು ಯೋಗಗಳಲ್ಲಿ ಹರ್ಷ, ಸರಳ, ವಿಮಲ ಯೋಗಗಳೂ ಮುಖ್ಯವಾದುವು.
ಹರ್ಷ
ಷಷ್ಠ ಸ್ಥಾನದ ಅಧಿಪತಿ 6-8-12ರಲ್ಲಿ ಇದ್ದರೆ ಇದಕ್ಕೆ ಹರ್ಷ ಯೋಗ ಎನ್ನುತ್ತಾರೆ. ಇಂಥ ಯೋಗ ಇದ್ದವರಿಗೆ ಸುಖ, ಅದೃಷ್ಟ, ಒಳ್ಳೆಯ ಆರೋಗ್ಯ, ಶತ್ರುಗಳ ತೊಂದರೆ ಇದ್ದರೂ ಅವರಿಂದ ಏನೂ ಮಾಡಲು ಆಗುವುದಿಲ್ಲ. ಅಕೃತ್ಯ ಎಸಗುವುದು, ಗಣ್ಯವ್ಯಕ್ತಿಗಳ ಸಂಬಂಧ ಬೆಳೆಸುತ್ತಾರೆ. ವಿವಿಧ ಮೂಲಗಳಿಂದ ಹಣಕಾಸಿನ ಲಾಭ ಇರುತ್ತದೆ. ಒಳ್ಳೆಯ ಸ್ನೇಹಿತರು ಇರುತ್ತಾರೆ.
ಸರಳ
ಅಷ್ಟಮದ ಅಧಿಪತಿ 6-8-12ರಲ್ಲಿ ಇದ್ದರೆ ಈ ಯೋಗಕ್ಕೆ ಸರಳ ಯೋಗ ಎನ್ನುತ್ತಾರೆ. ಈ ಯೋಗ ಹೊಂದಿದವರು ಸಂಪತ್ತು, ಕೈಗೊಂಡ ಕೆಲಸದಲ್ಲಿ ಜಯ ಹೊಂದುತ್ತಾರೆ. ಜೀವನದಲ್ಲಿ ಯಶಸ್ಸು ಹೊಂದುತ್ತಾರೆ. ಶತ್ರುಗಳು ದೂರವಾಗುತ್ತಾರೆ. ಜೀವನದಲ್ಲಿ ಒಳ್ಳೆಯ ಕೆಲಸ ಮಾಡುತ್ತಾರೆ. ದೀರ್ಘ ಆಯುಷ್ಯ ಹೊಂದುತ್ತಾರೆ. ನಂಬಿಕೆಯಿಂದ ಕೆಲಸ ಮಾಡುತ್ತಾರೆ. ಭಯ ಪಡುವುದಿಲ್ಲ. ಜೀವನದಲ್ಲಿ ಪ್ರಗತಿ ಹೊಂದುತ್ತಾರೆ.
ವಿಮಲ
ವ್ಯಯದ ಅಧಿಪತಿ 6-8-12ನೇ ಮನೆಯಲ್ಲಿದ್ದರೆ ಮತ್ತು ಪಾಪಗ್ರಹಗಳೊಂದಿಗೆ ಇದ್ದರೆ ಅಥವಾ ಪಾಪಗ್ರಹಗಳ ದೃಷ್ಟಿ ಇದ್ದರೆ ಇಂಥವರಿಗೆ ವಿಮಲ ಯೋಗ ಉಂಟಾಗುತ್ತದೆ. ಇವರು ಸಮಾಜದಲ್ಲಿ ಎಲ್ಲರಿಗೂ ಬೇಕಾದವರಾಗುತ್ತಾರೆ. ಸಂತೋಷವಾಗಿ ಜೀವಿಸಲು ಮನೆ, ಆಸ್ತಿ ಹೊಂದುತ್ತಾರೆ. ಸ್ಥಾನಮಾನ, ಗೌರವ ಸಿಗುವ ವ್ಯಕ್ತಿಯಾಗುತ್ತಾರೆ.  ಒಳ್ಳೆಯ ನಡತೆಯಿಂದ ಇತರರಿಂದ ಮೆಚ್ಚುಗೆ ಪಡೆಯುತ್ತಾರೆ. ಬಹಳ ಹಣಕಾಸು ಸಂಪಾದನೆ ಮಾಡಿ ಮಿತವ್ಯಯ ಮಾಡುತ್ತಾರೆ. ಮಾಹಿತಿಗಾಗಿ ಮೊ. 9448490860.


-ಮೂಲ್ಕಿ ಹರಿಶ್ಚಂದ್ರ ಪಿ. ಸಾಲಿಯಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com