ಪ್ರಾಣಶಕ್ತಿಗಳ ಮಲಿನ

ಸಮಸ್ತ ಸೃಷ್ಟಿಕ್ರಿಯೆ ನಡೆಯುತ್ತಿರುವುದೇ ಪ್ರಾಣಶಕ್ತಿಯಿಂದ. ಆದರೆ ಆ ಪ್ರಾಣಶಕ್ತಿಯ ಮೂಲ ಕೂಡ ಸೃಷ್ಟಿಕ್ರಿಯೆಯಿಂದ ಸೃಷ್ಟಿಯಾದ ಜೀವಗಳೇ. ಪ್ರಾಣ ಎಂಬುದೇ ಪ್ರತಿ ಜೀವಿಯಲ್ಲಿರುವ ಒಂದು ಶಕ್ತಿ. ಪ್ರಾಣದ ಮೂಲ ಬ್ರಹ್ಮ. ಬ್ರಹ್ಮ ಅಂದರೆ ದೇವರೇ ಅಂತಲ್ಲ. ಅದೊಂದು ಕಂಪನ ಅಥವಾ ಕಂಪಾನಾಂಕ ಎಂದುಕೊಳ್ಳಬಹುದು. ಪ್ರಾಣ ಸೃಷ್ಟಿಯಾದ ಕೂಡಲೇ ಐದು ಕಂಪಾನಾಂಕಗಳಾಗಿ ವಿಂಗಡಣೆಯಾಗುತ್ತದೆ. ಪೃಥ್ವಿ, ಜಲ, ಆಕಾಶ, ವಾಯು ಮತ್ತು ಅಗ್ನಿ ಎಂಬ ಪಂಚಭೂತಗಳೇ ಪ್ರಾಣದ ಐದು ಕಂಪನಾಂಕಗಳು. ಈ ಐದು ಅಂಶಗಳು ವಿಧವಿಧವಾಗಿ ಒಂದರಲ್ಲೊಂದು ಬೆರೆತು ಸೃಷ್ಟಿ ಮಾಡುತ್ತವೆ. ನಮ್ಮ ದೇಹವೂ ಆ ರೀತಿಯೇ ಸೃಷ್ಟಿಯಾಗಿರುವುದು. ಪಂಚಭೂತದಿಂದ ಸೃಷ್ಟಿಯಾದ ಈ ದೇಹ ಕೊನೆಯಲ್ಲಿ ಪಂಚಭೂತದಲ್ಲೇ ಲೀನವಾಗುವುದನ್ನು ನೀವು ಗಮನಿಸಿರುತ್ತೀರಿ. ದೈಹಿಕ ಆಸೆಗಳು ಮತ್ತು ಸುಖಗಳು ಕೂಡ ಈ ಪಂಚಭೂತಗಳ ಕಂಪನಾಂಕವನ್ನೇ ಅವಲಂಬಿಸಿದೆ. ವೈದಿಕ ಗುರುಗಳು ಬಹಳ ಹಿಂದೆ ಹೇಳಿರುವುದನ್ನೇ ಆ ನಂತರದ ಆಧುನಿಕ ವಿಜ್ಞಾನವೂ ಧೃಡಪಡಿಸಿದೆ. ನ್ಯೂಟನ್ ನಿಯಮ ನಿಜ. ಜಗತ್ತಿನಲ್ಲಿ ಪ್ರತಿಯೊಂದು ಕ್ರಿಯೆಗೂ ಅದೇ ಥರದ ವಿರುದ್ಧ ಪ್ರತಿಕ್ರಿಯೆಯು ವ್ಯಕ್ತವಾಗುತ್ತಿರುತ್ತದೆ. ಗೋಡೆಗೆಸೆದ ಚೆಂಡು ವಾಪಸ್ ಬರುವಂತೆ. ವೈದಿಕ ಸಾರದ ಪ್ರಕಾರ ನೋವಿನ ವಿರುದ್ಧ ನಲಿವು, ಸುಖದ ವಿರುದ್ಧ ಕಷ್ಟ, ಯೌವನದ ವಿರುದ್ಧ ಎಂಬಂತೆ ಮುಪ್ಪು, ಹೀಗೆ ಹಲವು ಪರಸ್ಪರ ತದ್ವಿರುದ್ಧ ಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಇಂದ್ರಿಯಗಳು ಸುಖ ಅನುಭವಿಸುತ್ತಾ ಹೋದಂತೆಲ್ಲ ತಾನಾಗಿ ದೇಹ ಮುಪ್ಪಿನತ್ತ ಹೊರಳುತ್ತದೆ. ತ್ವಚೆ ಸುಕ್ಕುಗಟ್ಟುತ್ತದೆ. ಪಂಚೇಂದ್ರಿಯಗಳು ಸೂಕ್ಷ್ಮತೆ ಕಳೆದುಕೊಳ್ಳುತ್ತವೆ. ಬೆನ್ನು ಬಾಗುತ್ತದೆ, ಕೂದಲುಗಳು ನರೆಯುತ್ತವೆ. ಕೆಲಮೊಮ್ಮೆ ದೇಹವು ಕಾಯಿಲೆಗೂ ಈಡಾಗುತ್ತದೆ. ಪ್ರಾಣ ಶಕ್ತಿಯ ಕಂಪನಾಂಕಗಳು ಬದಲಾಗುವುದೇ ಇದಕ್ಕೆ ಕಾರಣ. ಸನಾತನ ಕ್ರಿಯೆಯಲ್ಲಿ ತತ್ವಶುದ್ಧಿ ಎಂಬುದೊಂದು ಶಕ್ತಿಶಾಲಿ ತಂತ್ರ. ಅದರ ಮೂಲಕ ಈ ಪ್ರಾಣಶಕ್ತಿಗಳ ಕಂಪನಾಂಕಗಳನ್ನು ಸಲೀಸಾಗಿ ಬದಲಿಸಬಹುದು. ಅದಕ್ಕೊಂದಷ್ಟು ಮಂತ್ರಗಳ ಮತ್ತು ಶುದ್ಧಿಗಳ ಅವಶ್ಯ ಇದೆ ಅಷ್ಟೇ. ಇವುಗಳ ಸಹಾಯದಿಂದ ದೇಹದ ಮಾಲಿನ್ಯವನ್ನು ಹೊರಕಳಿಸಿ ಪರಿಶುದ್ಧವಾದ ದೇಹವನ್ನು ಮತ್ತೆ ಪ್ರತಿಷ್ಠಾಪಿಸಬಹುದು.
- ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


