ಶನಿದೋಷ ನಿವಾರಕ ನೀಲಿ

ಜ್ಯೋತಿಷ್ಯ, ವೈದ್ಯಕೀಯ ಮತ್ತು ರತ್ನ ಶಾಸ್ತ್ರಗಳಲ್ಲಿ ವಜ್ರಗಳ ಪ್ರಾಮುಖ್ಯ ವಿಶೇಷ ಸ್ಥಾನದಲ್ಲಿರುತ್ತದೆ. ವಿಶ್ವದೆಲ್ಲೆಡೆ ವಜ್ರಗಳ ವೈವಿಧ್ಯಮಯ ಬಣ್ಣಗಳ ಲಾಸ್ಯಕ್ಕೆ ಮಾರುಹೋಗಿದ್ದಾರೆ. ಧನಮೂಲ, ಅಲಂಕಾರ ಮತ್ತು ಅದೃಷ್ಟ ಸಾಧನವಾಗಿರುವ ವಜ್ರಗಳು ಧರಿಸುವುದರಿಂದ ಶೌರ್ಯ, ಪರಾಕ್ರಮ, ತೇಜಸ್ಸು, ಸಿರಿ ಸಂಪತ್ತು, ವ್ಯಕ್ತಿತ್ವ ಬಲಗೊಳ್ಳಲಿದೆ ಎಂಬ ಭಾವನೆ ಬೇರೂರಿದೆ. ಸೌರ ಮಂಡಲದ ಗ್ರಹಗಳಿಗೂ ಪೃಥ್ವಿ ಮೇಲ್ಮೈ ಅಮೂಲ್ಯ ರತ್ನಗಳ ಭೌತಿಕ ಗುಣಗಳಿಗೂ ಅವಿನಾಭಾವ ಸಂಬಂಧಗಳಿರುವುದು ಸತ್ಯ. ಗ್ರಹಗಳು ಎರಕ ಹೊಯ್ಯುವ ನಭೋ ಪ್ರಭಾವಳಿಗೆ ವಜ್ರಗಳಲ್ಲಿ ಅಂತರ್ ಕ್ರಿಯೆ ಏರ್ಪಟ್ಟು ಪ್ರತಿಬಿಂಬಿಸುವ ಬಣ್ಣಗಳ ಲಾಸ್ಯಕ್ಕೆ ಮಾನವ ಮಾರುಹೋಗಿದ್ದಾನೆ.
ಬಣ್ಣಗಳ ಲಾಸ್ಯದ ಪ್ರಭಾವಳಿಯಿಂದ ಮಾನವನಲ್ಲಿ ಗ್ರಹದೋಷ ದಮನ ಮಾಡಿ, ನಿಗ್ರಹಿಸುವ ಅವಿನಾಭಾವ ಗ್ರಹಗಳನ್ನು ಜ್ಯೋತಿಷ್ಯ, ರತ್ನ ಮತ್ತು ಖಗೋಳ ಶಾಸ್ತ್ರಜ್ಞರು ಗುರುತಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಾತಃಕಾಲ ಪೂರ್ವ ದಿಕ್ಕಿನಲ್ಲಿ ಮೂಡಿಬರುವ ಹೊಳಪಿನ ಶುಕ್ರನಿಗೆ ವಜ್ರ ಪ್ರಿಯಕರ, ರತ್ನ ಶುಕ್ರನ ನಭೋ ಪ್ರಭಾವಳಿ ವಜ್ರದ ಮೇಲೆ ಎರಕ ಹೊಯ್ದಾಗ ನೀಲಿ ಬಣ್ಣ ಪ್ರತಿಬಿಂಬಿಸಿದರೆ ಅನೇಕ ಗ್ರಹದೋಷಗಳು ದಮನಗೊಳ್ಳುತ್ತವೆ ಎಂಬ ನಂಬಿಕೆ ಜನರಲ್ಲಿ ಮೂಡಿದೆ. ಇದರಿಂದ ನೀಲಿ ವಜ್ರದ ಆಭರಣ ಧರಿಸುವುದರಿಂದ ಪ್ರಮುಖವಾಗಿ ಶನಿ ಮತ್ತು ಕುಜ ದೋಷ ದಮನಗೊಳ್ಳುವುದರಲ್ಲಿ ಸಂಶಯವೇ ಇಲ್ಲ. ನೀಲಿ ವಜ್ರದ ಬದಲಿಗೆ ನೀಲಂ ಮತ್ತು ಗೋಮೇದಿಕಾ ಸಂಯೋಜಿತ ಆಭರಣ ಧರಿಸಬಹುದು. ನೀಲಿ ವಜ್ರವನ್ನು ಶುಕ್ರವಾರದ ಸಂಧ್ಯಾ ಸಮಯದಲ್ಲಿ ಖರೀದಿಸಿ ಹಾಲು ಮತ್ತು ಚಂದನದಿಂದ ತೊಳೆದು ಧರಿಸಬೇಕು. ನೀಲಿ ವಜ್ರ, ನೀಲಂ ಮತ್ತು ಗೋಮೇಧ ರತ್ನಗಳನ್ನು ಧರಿಸುವವರು ಪುಷ್ಪರಾಗವನ್ನು ಎಂದಿಗೂ ಧರಿಸಬಾರದು. ನೃತ್ಯಗಾತಿಯರು ನೀಲಿ ವಜ್ರದ ಮೂಗುತಿ ಧರಿಸಿದರೆ ನಾಟ್ಯದಲ್ಲಿ ಉದ್ದೀಪನ ಶಕ್ತಿ ಹೊರಹೊಮ್ಮುವದು. ಮಾಹಿತಿಗೆ, 9945605618 ಸಂಪರ್ಕಿಸಿ.
-ನಾರಾಯಣ ಶೆಟ್ಟಿ ಪದ್ಮಸಾಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


