ಭಕ್ತಿ-ಜ್ಯೋತಿಷ್ಯ

ಚಂದ್ರನ ಪಕ್ಷಪಾತ

ಚಂದ್ರನ ಪಕ್ಷಪಾತ
Published On :

ನಮ್ಮ ಹಿಂದೂ ಪಂಚಾಂಗದಂತೆ 12 ಮಾಸಗಳಿವೆ. (ತಿಂಗಳು) ಪ್ರತಿ ಮಾಸವನ್ನು ಶುಕ್ಲ ಹಾಗೂ ಕೃಷ್ಣ ಪಕ್ಷ ಎಂದು ವಿಂಗಡಿಸಲಾಗಿದೆ. ಈ ಪಕ್ಷಗಳ ಪ್ರಾರಂಭದ ಹಿಂದೆ ಒಂದು ಪುರಾಣ ಕಥೆಯಿದೆ. ದಕ್ಷ ಪ್ರಜಾಪತಿಗೆ 27 ಹೆಣ್ಣು ಮಕ್ಕಳಿದ್ದರು. ಅವರನ್ನು ಅತ್ಯಂತ ಸುಂದರ ಎಂದು ಪ್ರಸಿದ್ಧನಾಗಿದ್ದ ಚಂದ್ರನಿಗೆ ಮದುವೆ ಮಾಡಿದ್ದರು. ಆ 27 ಹೆಣ್ಣು ಮಕ್ಕಳಲ್ಲಿ ರೋಹಿಣಿ ಅತ್ಯಂತ ಸುಂದರಿಯಾಗಿದ್ದಳು. ಚಂದ್ರನು ಅವಳನ್ನು ಹೆಚ್ಚು ಪ್ರೀತಿಸುತ್ತಿದ್ದ ಉಳಿದ ಹೆಂಡತಿಯರನ್ನು ಅಲಕ್ಷಿಸುತ್ತಿದ್ದ.

ಹೀಗೆ ಬೀಗುತ್ತ ಉಳಿದ ಹೆಣ್ಣು ಮಕ್ಕಳು ತಂದೆಗೆ ದೂರು ಕೊಟ್ಟರು. ದಕ್ಷನು ಚಂದ್ರನನ್ನು ಕರೆಸಿ ಎಲ್ಲ ಹೆಂಡತಿಯರನ್ನು ಒಂದೇ ಸಮನಾಗಿ ಕಾಣಬೇಕೆಂದು ಆದೇಶಿಸಿದನು. ಆದರೆ ಚಂದ್ರನು ಅವನ ಅಭ್ಯಾಸವನ್ನು ಬಿಡಲಿಲ್ಲ. ಆಗ ಕೋಪಗೊಂಡ ದಕ್ಷ, 'ಚಂದ್ರ... ತುಂಬಾ ಸುಂದರ ಎಂಬ ಅಹಂಕಾರ ನಿನಗಿದೆ. ಆದ್ದರಿಂದ ನಿನ್ನ ಸುಂದರವಾದ ತನು ಕ್ಷಮವಾಗಿ ಹೋಗಲಿ ಎಂದು ಶಾಪ ಕೊಟ್ಟ. 

ಈ ಶಾಪಕ್ಕೆ ಚಂದ್ರನು ಹೆದರಿದ. ಶಾಪ ವಿವೇಚನೆಯ ಉಪಾಯ ಹುಡುಕುವುದು ತನ್ನ ಶಕ್ತಿಗೆ ಮೀರಿದ್ದೆಂದು ತಿಳಿದು ಬ್ರಹ್ಮನ ಬಳಿ ಹೋದನು. ಆಗ ಬ್ರಹ್ಮ, ಚಂದ್ರ ನೀನು ಶಿವನನ್ನು ಆರಾಧಿಸು ಹಾಗೂ ತಪಸ್ಸು ಮಾಡು ಆತನೇ ನಿನ್ನ ಶಾಪಕ್ಕೆ ಪರಿಹಾರ ಕೊಡುವನು ಎಂದು ತಿಳಿಸುತ್ತಾನೆ.

ಚಂದ್ರ ಹಲವು ವರ್ಷ ಶಿವನಿಗೆ ತಪಸ್ಸು ಮಾಡಿದ. ಶಿವ ಪ್ರತ್ಯಕ್ಷನಾಗಿ ದಕ್ಷನ ಶಾಪವನ್ನು ಸಂಪೂರ್ಣವಾಗಿ ತೊರೆದುಹಾಕಲು ಸಾಧ್ಯವಿಲ್ಲ. ಆದರೆ ನನ್ನ ವರದಿಂದ ನೀನು ವೃದ್ಧಿಗೊಳ್ಳುವೆ. ನೀನು ತಿಂಗಳಲ್ಲಿ (ಮಾಸದಲ್ಲಿ) 15 ದಿನ ಅಂದರೆ ಅಮವಾಸ್ಯೆಯ ಮಾರನೆ ದಿನದಿಂದ ಹುಣ್ಣಿಮೆ ದಿನದವರೆಗೆ ವೃದ್ಧಿಗೊಳ್ಳುವೆ. ಇದನ್ನು ಶುಕ್ಲ ಪಕ್ಷ ಎಂದು ಕರೆಯುವರು. ಹುಣ್ಣಿಮೆಯ ಮಾರನೇ ದಿನದಿಂದ ಅಮವಾಸ್ಯೆಯವರೆಗೆ ಕ್ಷಯಿಸುವೆ ಇದನ್ನು ಕೃಷ್ಣಪಕ್ಷ ಎಂದು ಕರೆಯುತ್ತಾರೆ ಎಂದು ಚಂದ್ರನಿಗೆ ವರ ಕೊಟ್ಟನು. ಅಂದಿನಿಂದ ಈ ಶುಕ್ಲಪಕ್ಷ- ಕೃಷ್ಣ ಪಕ್ಷ ಆರಂಭವಾಯಿತು.

ಶುಕ್ಲ ಪಕ್ಷದಲ್ಲಿ ಶುಭ ಕರ್ಮಗಳಾದ ಮದುವೆ, ಉಪನಯನ, ಗೃಹಪ್ರವೇಶ, ಮುಂತಾದ ಕಾರ್ಯಗಳು ಮಾಡಿದರೆ ಹೆಚ್ಚು ಫಲ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿದೆ. ಶುಕ್ಲ-ಪಕ್ಷದಲ್ಲಿ ಜನಿಸಿದವರು ಹೆಚ್ಚು ಬುದ್ಧಿವಂತರು, ಕೃಷ್ಣ ಪಕ್ಷದಲ್ಲಿ ಜನಿಸಿದವರು ಮಂದ ಬುದ್ದಿವುಳ್ಳವರು ಎಂದು ಶಾಸ್ತ್ರದಲ್ಲಿ ಹೇಳಿದೆ. ಮಾನಸಿಕ ತೊಂದರೆ ಇರುವವರು ಶುಕ್ಲ ಪಕ್ಷದಲ್ಲಿ ಚಂದ್ರ ಗ್ರಹವನ್ನು ಪೂಜಿಸಿದರೆ ತೊಂದರೆ ನಿವಾರಣೆ ಆಗುವುದು ಜಾತಕದಲ್ಲಿ ಚಂದ್ರನಿಗೆ ಪಾಪಗ್ರಹಗಳ ದೃಷ್ಟಿ ಇದ್ದರೆ ಹಾಗೂ ಪಾಪ ಗ್ರಹಗಳ ಜೊತೆಯಲ್ಲಿದ್ದರೂ ಶುಕ್ಲ ಪಕ್ಷದಲ್ಲಿ ಚಂದ್ರನನ್ನು ಆರಾಧಿಸುವುದು ಉತ್ತಮ. ಆಗ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುವುದು.

-ಮಂಡಗದ್ದೆ ಪ್ರಕಾಶಬಾಬು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.