ಚಂದ್ರ ಓಡಿದರೆ ಬದುಕು ಓಡುತ್ತದೆ!

ಸೌರಮಂಡಲದಲ್ಲಿ ಸೂರ್ಯನಿಂದ 5,900 ಮಿಲಿಯನ್ ಕಿ.ಮೀ. ವ್ಯಾಪ್ತಿಯಲ್ಲಿ ಸೂರ್ಯ, ಚಂದ್ರ ಮತ್ತು ಪೃಥ್ವಿ ಸೇರಿದಂತೆ 11 ಗ್ರಹಗಳಿವೆ. ಇವುಗಳನ್ನು ಪ್ರದಕ್ಷಣೆ ಮಾಡುತ್ತಿರುವ 63ರಿಂದ 64 ಉಪಗ್ರಹಗಳು, ಗುರು, ಮಂಗಳ ಗ್ರಹಗಳ ಮಧ್ಯ ಮತ್ತು ಕ್ಯೂಪಿಯರ್ ಸರಹದ್ದಿನಲ್ಲಿ ಸಾವಿರಾರು ಉಲ್ಕಶಿಲೆಗಳು ಮತ್ತು ಧೂಮಕೇತುಗಳು ಇರುತ್ತವೆ.
ಪೃಥ್ವಿಗೆ ಮಾತ್ರ 3,80,000 ಕಿ.ಮೀ.ಗಳ ದೂರದಲ್ಲಿ 3,475 ಕಿ.ಮೀ.ಗಳ ಸುತ್ತಳತೆ ಉಳ್ಳ ಏಕಮಾನ ಚಂದಿರನು ತನ್ನ ಸ್ಥಿರ ಕಕ್ಷೆಯಲ್ಲಿ ಪ್ರದಕ್ಷಿಣೆ ಮಾಡುತ್ತಿರುತ್ತಾನೆ. ಚಂದ್ರ ಒಂದು ಹುಣ್ಣಿಮೆಯಿಂದ ಇನ್ನೊಂದು ಹುಣ್ಣಿಮೆಗೆ ಕ್ರಮಿಸಲು 29 ದಿನಗಳು, 12 ಗಂಟೆ. 4 ನಿಮಿಷ ಮತ್ತು 3 ಸೆಕೆಂಡ್‌ಗಳು ತೆಗೆದುಕೊಳ್ಳುತ್ತಾನೆ.
ಈ ಪರ್ವಕಾಲದಲ್ಲಿ ಸಂಭವಿಸುವ ಪೌರ್ಣಮಿ, ಅಮವಾಸ್ಯೆ, ಕ್ಷೀಣಚಂದ್ರ ಮತ್ತು ಪೃಥ್ವಿಚಂದ್ರ ಕಾಲಮಾನದಲ್ಲಿ ಸಂಭವಿಸುವ ಚಂದ್ರಾಕಾರಗಳು ಮತ್ತು ಗ್ರಹಗಳು ಪ್ರಪಂಚದ ಜ್ಯೋತಿಷ್ಯಶಾಸ್ತ್ರ ಅಧ್ಯಾತ್ಮ ಶಾಸ್ತ್ರ ಮತ್ತು ಖಗೋಳ ಶಾಸ್ತ್ರದಲ್ಲಿ ಮಹತ್ತರ ಸ್ಥಾನವನ್ನು ಪಡೆದಿರುತ್ತವೆ.
ಚಂದ್ರನ ಚಲನ ಸಿದ್ಧಾಂತದಲ್ಲಿ ಸಂಭವಿಸುವ ಚಂದ್ರಾಕಾರಗಳಿಗೂ ಪೃಥ್ವಿಯ ಮೇಲೆ ಸಂಭವಿಸುವ ಭೌತಿಕ ಮತ್ತು ರಾಸಾಯನಿಕ ಗುಣಗಳಿಗೂ ಅವಿನಾಭಾವ ಸಂಬಂಧಗಳಿರುವುದು ಕಠೋರ ಸತ್ಯ. ಚಂದಿರ ಪೃಥ್ವಿಗೆ ಹತ್ತಿರ ಬರಬಹುದು ದೂರ ಹೋಗಬಹುದು. (ಸೂಪರ್ ಮೂನ್) ಚಂದ್ರನ ಚಲನ ಸಿದ್ಧಾಂತದಲ್ಲಿ ಸಂಭವಿಸುವ ಆಕಾರಗಳನ್ನು ಗಣನೆಗೆ ತೆಗೆದುಕೊಂಡು ಮಾನವ ದೆಸೆ, ಅದೃಷ್ಟ ಮತ್ತು ಯೋಗಾಯೋಗಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಚಂದ್ರ ಮಹಾದೆಸೆಯಲ್ಲಿ ಜನನವಾದರೆ ಮಾತ್ರ ಜೀವನದಲ್ಲಿ ಮೂರುಸಲ ಗಜಕೇಸರಿ ಯೋಗ ಮರುಕಳಿಸುತ್ತದೆ. ಪ್ರಥಮವಾಗಿ ಚಂದ್ರ ದೆಸೆಯಲ್ಲೇ ಜನನವಾಗಿರುವುದನ್ನು ತಿಳಿಯಲು ಗ್ರೆಗೋರಿಯನ್ ಕ್ಯಾಲೆಂಡರ್ ಸಿದ್ಧಾಂತದ ಮೇರೆಗೆ ಸೂರ್ಯನು ಸಮಭಾಜಕ ವೃತ್ತದ ಮೇಲೆ ಹಾದೂ ಹೋಗುವ ಕಾಲಮಾನವನ್ನು ಗಣನೆಗೆ ತೆಗೆದುಕೊಂಡು ಮನೋವೈಜ್ಞಾನಿಕ ಶಾಸ್ತ್ರ, ಸಂಖ್ಯಾಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ಮತ್ತು ಕಾಲಗಣನಾ ಚಕ್ರದಲ್ಲಿ ಋತುಗಳಲ್ಲಿ ಬದಲಿಸುವ ಭೌತಿಕ ಗುಣಗಳನ್ನು ವಿಭಜಿಸಿ ಚಂದ್ರಮಯ ದೆಸೆ ಜನನ ಕಾಲವನ್ನು ನಿರ್ಧರಿಸಲಾಗಿದೆ.
ಚಂದ್ರ ಮಹಾದೆಸೆಯಲ್ಲಿ ಜನನ ಹೊಂದಿದವರಿಗೆ ಮಾತ್ರ ಗಜಕೇಸರಿಯೋಗ ತನ್ನ ಜನ್ಮ ವರ್ಷದಿಂದ 34, 45, 56, 62, 73 ಮತ್ತು 84 ವರ್ಷಗಳಲ್ಲಿ ಮಾತ್ರ ಮರುಕಳಿಸಲಿದೆ.
ಗಜಕೇಸರಿ ಯೋಗದ ಫಲಗ
ಪ್ರಥಮವಾಗಿ ಪದವಿ ಪಟ್ಟಾಭಿಷೇಕ, ಆಕಸ್ಮಿಕ ಧನಾಗಮನ, ಬುದ್ಧಿ ಬ್ರಹ್ಮಾಂಡ, ಆರೋಗ್ಯ ಚೇತರಿಕೆ, ಚಿರ ಮತ್ತು ಚರ ಆಸ್ತಿಗಳ ದ್ವಿಗುಣ, ಸಂತಾನಯೋಗ, ಮಹಿಳೆಯರಲ್ಲಿ ಸಿಂಹಣಿ ಪ್ರಭಾವ, ಯೋಗಾಯೋಗ, ಪಾರಿತೋಷಕಗಳ ಸುರಿಮಳೆ, ವಿದೇಶ ಪ್ರವಾಸ ಮತ್ತು ವಾಸ್ತವ್ಯ, ವಿಜ್ಞಾನ ಮತ್ತು ಸಂಶೋಧನೆಗಳಲ್ಲಿ ಪ್ರಗತಿ, ವಿಲಾಸಿ ಜೀವನ, ದುಂದು ವೆಚ್ಚ, ದುರ್ವ್ಯವಹಾರ, ನಿರ್ಲಕ್ಷ್ಯ ಮನೋಭಾವ, ಕಲಾವಿದರು ಮತ್ತು ನೃತ್ಯಗಾರ್ತಿಯರಲ್ಲಿ ನವಚೈತನ್ಯ ಉಂಟಾಗುವುದು.
ಚಂದ್ರ ಮಹಾದೆಸೆಯಲ್ಲಿ ಜನನವಾದರೆ, ಅಧಿಕ ಆಯುಸ್ಸು, ಉತ್ತಮ ಆರೋಗ್ಯ, ಜೀವನದಲ್ಲಿ ರಾಜಯೋಗ ಮತ್ತು ಅಮೃತ ಸಿದ್ಧಯೋಗ ಮರುಕಳಿಸುತ್ತಿರುತ್ತವೆ. ವಿದ್ಯಾಪ್ರಗತಿ, ಅಧಿಕ ಜ್ಞಾಪಕಶಕ್ತಿ, ಚುರುಕು ಬುದ್ಧಿ, ಸಂತಾನಯೋಗ, ಶಾಂತಿ ಸ್ವಭಾವ, ದೈವಭಕ್ತಿ, ನಿರಾಡಂಬರ ಸಂಸಾರ, ಸ್ವಾಮಿ ನಿಷ್ಠೆ, ಉನ್ನತ ಪದವಿ ಲಭ್ಯ, ರಾಜಕೀಯ, ಸಮಾಜಸೇವೆ ಮತ್ತು ಭೂ ವ್ಯವಹಾರದಲ್ಲಿ ಪ್ರಗತಿ ಸಂಭವಿಸಲಿರುತ್ತವೆ. ಮಾಹಿತಿಗೆ ಮೊ. 9945605618.
-ವಿ. ನಾರಾಯಣ ಶೆಟ್ಟಿ ಪದ್ಮಸಾಲಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


