ಭಕ್ತಿ-ಜ್ಯೋತಿಷ್ಯ

ಯಾರಿಗೆ ಲವ್ ಮ್ಯಾರೇಜ್ ಆಗುತ್ತೆ?

ಯಾರಿಗೆ ಲವ್ ಮ್ಯಾರೇಜ್ ಆಗುತ್ತೆ?
Published On :

ವಿವಾಹ ಬಂಧನ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ. ಹೀಗಾಗಿ, ಇಹದಲ್ಲಿ ನಡೆಯುವುದು ಕೇವಲ ಔಪಚಾರಿಕ ಪದ್ಧತಿ ಅಷ್ಟೇ. ಪ್ರೇಮ ವಿವಾಹವೆಂದರೆ ಒಬ್ಬರನ್ನೊಬ್ಬರು ಪ್ರೇಮಿಸಿ ನಂತರ ಹಿರಿಯರ ಒಪ್ಪಿಗೆ ಪಡೆದು ವಿವಾಹವಾಗಿರಬಹುದು ಇಲ್ಲವೇ ಹಿರಿಯರಿಂದ ನಿಶ್ಚಯಿಸಲ್ಪಟ್ಟ ರೀತಿಯಲ್ಲಿ ವಿವಾಹವಾಗಿರಬಹುದು. ಪ್ರೀತಿ- ಪ್ರೇಮಕ್ಕೆ ಕಾರಕ ರಾಶಿ. ಶುಭರಾಶಿ ಮನುಷ್ಯನಲ್ಲಿರುವ ಭಾವನಾಶಕ್ತಿಗೆ ರವಿ, ಚಂದ್ರ, ಶುಕ್ರ ಗ್ರಹಗಳು ಅತಿ ಮುಖ್ಯ.
ಈ ಗ್ರಹಗಳು ಶುಭರಾಶಿಯಲ್ಲಿದ್ದಾಗ ಜಾತಕನ ಕಲ್ಪನಾ ಶಕ್ತಿ ಮತ್ತು ಭಾವೋದ್ರೇಕಗಳು ಉಂಟಾಗುತ್ತದೆ. ರವಿಗ್ರಹವು ಭಾವನಾಶಕ್ತಿಯಾಗಿ ಶತ್ರುಕ್ಷೇತ್ರ, ನೀಚಕ್ಷೇತ್ರ ಮತ್ತು ವೃಷಭ ರಾಶಿಯಾದರೆ ಚಂದ್ರನು ಮನೋಕಾರಕನಾಗಿ ವ್ಯಕ್ತಿಗಳಿಗೆ ಪ್ರೇಮಾನುರಾಗ ಉಂಟು ಮಾಡುತ್ತಾನೆ.
ಈ ಗ್ರಹ ಸ್ವಕ್ಷೇತ್ರ, ಮಿತ್ರ ಕ್ಷೇತ್ರ, ಉಚ್ಚಕ್ಷೇತ್ರವಾಗಿದ್ದರೆ ಅದರಲ್ಲೂ ಸಿಂಹ ಮತ್ತು ಮೀನ ರಾಶಿಯಲ್ಲಿ ಅತ್ಯಂತ ಪ್ರಬಲವಾಗಿ ಪ್ರೀತಿ - ಪ್ರೇಮವಿರುತ್ತೆ.
ಮೇಷ, ಮಿಥುನ, ಕನ್ಯಾ, ಧನುಸ್ಸು, ಮಕರ, ಕುಂಭ ರಾಶಿಯಲ್ಲಿ ರವಿ-ಚಂದ್ರ ಮತ್ತು ಶುಕ್ರರಿದ್ದರೆ ಪ್ರೇಮವು ಬಲಹೀನವಾಗಿರುತ್ತದೆ. ಪ್ರೇಮ ವಿವಾಹಕ್ಕೆ 1-5-7ನೇ ಭಾವ ಕಾರಣ. ಪಂಚಮ ಭಾವವು ಪ್ರೇಮ, ಪ್ರಣಯ ಹಾಗೂ ಇಂದ್ರಿಯ ಜನ್ಯ ಸೌಖ್ಯವಾದರೆ ಲಗ್ನಭಾವವು ಜಾತಕನ ಮನೋಬಲ ಪ್ರತಿನಿಧಿಸುತ್ತದೆ.

-ಸಿ. ರಂಗನಾಥರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.