ಭಕ್ತಿ-ಜ್ಯೋತಿಷ್ಯ

ಇಂದಿಗೂ ಕಾಣಸಿಗುತ್ತದೆ ಹಿರಣ್ಯಕಶ್ಯಪನ ಸಂಹಾರದ ಕುರುಹು, ಎಲ್ಲಿ ಗೊತ್ತಾ?

ಇಂದಿಗೂ ಕಾಣಸಿಗುತ್ತದೆ ಹಿರಣ್ಯಕಶ್ಯಪನ ಸಂಹಾರದ ಕುರುಹು, ಎಲ್ಲಿ ಗೊತ್ತಾ?
ನೃಸಿಂಹ
Published On :
ಭಾರತದ ದೇವಾಲಯಗಳಲ್ಲಿರುವ ಅಚ್ಚರಿಗಳು ಬಹುಶಃ ಬೇರೆಲ್ಲೂ ಸಿಗುವುದಿಲ್ಲ, ಹೆಜ್ಜೆ ಹೆಜ್ಜೆಗೆ ದೇವಾಲಯಗಳಿರುವಂತೆ, ಅಲ್ಲಿರುವ ಅಚ್ಚರಿಗಳಿಗೂ ಕೊರತೆಯೇನಿಲ್ಲ. ಎಷ್ಟೇ ಪ್ರಶ್ನೆಗಳಿಟ್ಟುಕೊಂಡು ಹೋದರೂ, ಅಚ್ಚರಿಗಳನ್ನು ಬಗೆಹರಿಸುತ್ತೇವೆ ಎಂದು ಹೊರಟರೆ ಕೆಲವು ಅಚ್ಚರಿಗಳಿಗೆ ಕೆಲವೊಮ್ಮೆ ಕಾರಣವಂತೂ ತಿಳಿಯುವುದಿಲ್ಲ. ಅಂತಹ ಅಚ್ಚರಿಗಳಲ್ಲಿ ಒಂದು ಆಂಧ್ರಪ್ರದೇಶದಲ್ಲಿರುವ ಅಹೋಬಲ ನೃಸಿಂಹ ಸ್ವಾಮಿ ಕ್ಷೇತ್ರ. 
ಕರ್ನೂಲು ಜಿಲ್ಲೆಯಲ್ಲಿರುವ ಪುರಾಣ ಪ್ರಸಿದ್ಧ ಅಹೋಬಲ ನೃಸಿಂಹ ಸ್ವಾಮಿ ಕ್ಷೇತ್ರವಾಗಿದ್ದು, ರಾಜ ಹಿರಣ್ಯಕಶ್ಯಪನ ರಾಜಧಾನಿಯಿದ್ದ ಪ್ರದೇಶವೂ ಆಗಿತ್ತು ಎನ್ನಲಾಗುತ್ತದೆ. ಅಷ್ಟೇ ಅಲ್ಲದೇ ಪುರಾಣ ಪುರುಷರಾದ ರಾಮ, ಅರ್ಜುನರು ಇಲ್ಲಿಗೆ ಭೇಟಿ ನೀಡಿದ್ದ ಬಗ್ಗೆಯೂ ಉಲ್ಲೇಖಗಳು ಸಿಗುತ್ತದೆ. ಅದೇನೇ ಇದ್ದರೂ ಈ ಕ್ಷೇತ್ರ ಮಹತ್ವ ಪಡೆದಿರುವುದು ಪ್ರಹ್ಲಾದನ ಪ್ರಾರ್ಥನೆಗೆ ವಿಷ್ಣು ನೃಸಿಂಹ ರೂಪದಲ್ಲಿ ಪ್ರಕಟಗೊಂಡು ಹಿರಣ್ಯಕಶ್ಯಪನನ್ನು ಸಂಹರಿಸಿದ ಕ್ಷೇತ್ರವೆಂಬ ಕಾರಣಕ್ಕಾಗಿ. 
ಹಿರಣ್ಯಕಶ್ಯಪನನ್ನು ಸಂಹರಿಸಿದ ನಂತರ ನೃಸಿಂಹ ಸ್ವಾಮಿ ಇಲ್ಲೇ ನೆಲೆಸಿದನೆಂಬ ನಂಬಿಕೆ ಇದ್ದು, ನವನೃಸಿಂಹ (9 ನೃಸಿಂಹ) ಕ್ಷೇತ್ರವೆಂದೂ ಪ್ರಸಿದ್ಧಿ ಪಡೆದಿದೆ. ಭಾರ್ಗವ ನೃಸಿಂಹ (ಸೂರ್ಯ), ಛತ್ರಪಟ ನೃಸಿಂಹ (ಚಂದ್ರ), ಜ್ವಾಲಾ ನೃಸಿಂಹ (ಕುಜ ಅಥವಾ ಮಂಗಳ) ಪಾವನ ನೃಸಿಂಹ (ಬುಧ), ಉಗ್ರ ನೃಸಿಂಹ (ಗುರು) ಕಾರಂಜ ನೃಸಿಂಹ(ಶುಕ್ರ) ಯೋಗಾ ನೃಸಿಂಹ (ಶನಿ) ವರಾಹ ನೃಸಿಂಹ(ರಾಹು)  ಮಾಲೋಲ ನೃಸಿಂಹ (ಕೇತು) ನೃಸಿಂಹ ಕ್ಷೇತ್ರಗಳಿವೆ. ಈ 9 ನೃಸಿಂಹ ಸ್ಥಾನಗಳೂ 9 ಗ್ರಹಗಳನ್ನು ಪ್ರತಿನಿಧಿಸುತ್ತವೆ. 
ಜ್ವಾಲಾ ನೃಸಿಂಹ ಸ್ವಾಮಿ ದೇವಾಲಯದಲ್ಲಿ ಇಂದಿಗೂ ಕಾಣಸಿಗುತ್ತದೆ ಹಿರಣ್ಯ ಕಶ್ಯಪನ ಸಂಹಾರದ ಕುರುಹು! 
ಈ ನವ ನೃಸಿಂಹ ಕ್ಷೇತ್ರಗಳ ಪೈಕಿ, ಹಿರಣ್ಯ ಕಶ್ಯಪನ ಸಂಹಾರಕ್ಕೆ ಸಂಬಂಧಿಸಿದಂತೆ ಕುರುಹನ್ನು ಹೊಂದಿರುವ ಕಾರಣಕ್ಕೆ ಜ್ವಾಲಾ ನೃಸಿಂಹ ಕ್ಷೇತ್ರ ಅಚ್ಚರಿಯ ಕ್ಷೇತ್ರವಾಗಿ ಕಾಣುತ್ತದೆ. ಹಿರಣ್ಯಕಶ್ಯಪನ  ಹೊಟ್ಟೆ ಬಗೆದು ಕರುಳು ಹೊರತೆಗೆಯುತ್ತಿರುವ ರೂಪದಲ್ಲಿ ನೃಸಿಂಹ ಸ್ವಾಮಿಯನ್ನು ಕಾಣಬಹುದಾಗಿದೆ. ಹಿರಣ್ಯಕಶ್ಯಪನ ಹೊಟ್ಟೆ ಬಗೆದು ಕರುಳು ಹೊರತೆಗೆ ನೃಸಿಂಹ ಇಲ್ಲೇ ಇದ್ದ ಕಲ್ಯಾಣಿ ಒಂದರಲ್ಲಿ ಬೆರಳುಗಳನ್ನು ತೊಳೆದುಕೊಂಡಿದ್ದನಂತೆ ಅಂದಿನಿಂದ ಅದು ರಕ್ತ ಗುಂಡ ತೀರ್ಥ ಎಂದೇ ಪ್ರಸಿದ್ಧಿ ಪಡೆದಿದ್ದು, ಇಂದಿಗೂ ಆ ಕಲ್ಯಾಣಿಯ ನೀರು ಕೆಂಪು ಮಿಶ್ರಿತವಾಗಿರುವುದೇ ಹಿರಣ್ಯ ಕಶ್ಯಪನ ಸಂಹಾರದ ಕುರುಹಾಕಿದೆ ಎಂದು ಹೇಳಲಾಗುತ್ತದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.