Weekly Horoscope: ವಾರ ಭವಿಷ್ಯ- ದ್ವಾದಶ ರಾಶಿಗಳ ಫಲಾಫಲ

ವಾರ ಭವಿಷ್ಯ: ದ್ವಾದಶ ರಾಶಿಗಳ ಫಲಾಫಲ- ಕೆಲಸ, ಹಣಕಾಸು, ಪ್ರೀತಿ; ಈ ವಾರ ನಿಮ್ಮ ಪರಿಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳಿ. ( ಮಾರ್ಚ್ 16ರಿಂದ - ಮಾರ್ಚ್ 22ರ ವರೆಗೆ)
Zodiac signs
ದ್ವಾದಶ ರಾಶಿಗಳು
Updated on

ಮೇಷ

ಕೆಲಸದ ಸ್ಥಳದಲ್ಲಿ ಈ ವಾರ ಮೇಷ ರಾಶಿಗೆ ಸೇರಿದ ಜನರು ಕಠಿಣ ಪರಿಶ್ರಮವನ್ನು ಪಡುವುದರಿಂದ ಭವಿಷ್ಯದಲ್ಲಿ ಶುಭ ಫಲಗಳ ಪ್ರಾಪ್ತಿಯಾಗುವುದು. ಈ ವಾರ ನೀವು ಪ್ರಯಾಣಿಸುವುದರಿಂದ ಯಶಸ್ಸು ದೊರಕುವುದು. ಹಾಗೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಪ್ರಯಾಣಿಸುವುದರಿಂದ ಶುಭ ಫಲಗಳ ಪ್ರಾಪ್ತಿಯಾಗಲಿದೆ. ಪ್ರೇಮ ಸಂಬಂಧದಲ್ಲಿರುವವರ ನಡುವಿನ ಪ್ರೀತಿ ಈ ವಾರ ಇನ್ನಷ್ಟು ಬಲಗೊಳ್ಳಲಿದೆ ಮತ್ತು ಜೀವನದಲ್ಲಿ ಪರಸ್ಪರ ಉತ್ತಮ ಹೊಂದಾಣಿಕೆ ಇರುವುದರಿಂದ ನೀವು ಸಾಕಷ್ಟು ಸಂತೋಷದಿಂದ ಜೀವನವನ್ನು ನಡೆಸುವಿರಿ.

ವೃಷಭ

ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಧಾನವಾಗಿ ಸುಧಾರಣೆಯನ್ನು ಹೊಂದುವಿರಿ. ಹಾಗೆ ನಿಮಗೆ ಉತ್ತಮ ಮಾರ್ಗಗಳು ಪ್ರತಿಯೊಂದು ಕೆಲಸದಲ್ಲಿ ದೊರಕಲಿದೆ. ಮನೆಯಲ್ಲಿ ನೆಮ್ಮದಿಯಿಂದ ಜೀವನವನ್ನು ನಡೆಸುವುದರೊಂದಿಗೆ ಮನೆಯ ಸದಸ್ಯರು ತಮ್ಮ ಅಭಿಪ್ರಾಯವನ್ನು ಹೇಳಲು ಅವಕಾಶವನ್ನು ನೀಡುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ನೆಲೆಸುವುದು. ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ವಾರಾಂತ್ಯದಲ್ಲಿ ಸುಖ, ಸಮೃದ್ಧಿ ಲಭಿಸುವ ಯೋಗ ನಿರ್ಮಾಣವಾಗುವುದು.

ಮಿಥುನ

ಈ ರಾಶಿಗೆ ಸೇರಿದ ಜನರು ತಮ್ಮ ಮನೆಯ ಎಲ್ಲಾ ಸದಸ್ಯರೊಂದಿಗೆ ಸುಖಮಯವಾದ ಕ್ಷಣಗಳನ್ನು ಕಳೆಯುವರು. ಹಾಗೆ ನಿಮ್ಮ ಮನೆಯವರೊಂದಿಗೆ ಉತ್ತಮ ಸ್ಥಾನವನ್ನು ತಲುಪುವರಿಂದ ಮನಸ್ಸು ಸಂತಸದಿಂದ ಇರುವುದು. ಈ ಅವಧಿಯಲ್ಲಿ ಪ್ರಯಾಣಿಸುವುದರಿಂದ ಶುಭ ಫಲಗಳ ಪ್ರಾಪ್ತಿಯಾಗಲಿದೆ. ಆದರೆ ನೀವು ನಿಮ್ಮ ಆಪ್ತರೊಂದಿಗೆ ಪ್ರಯಾಣಿಸುವುದರಿಂದ ಹೆಚ್ಚಿನ ಸಂತೋಷವನ್ನು ಹೊಂದುವಿರಿ. ಈ ವಾರ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುಧಾರಣೆಯಾಗಲಿದೆ. ಹಾಗೆ ನೀವು ಹೆಚ್ಚು ನೆಮ್ಮದಿಯಿಂದ ಇರುವಿರಿ.

ಕಟಕ

ಪ್ರೇಮ ಸಂಬಂಧದಲ್ಲಿ ಸುಖ, ಸಮೃದ್ಧಿ ಈ ವಾರ ಹೆಚ್ಚಾಗುವುದು ಮತ್ತು ನಿಮ್ಮ ಸಂಗಾತಿಯೊಂದಿಗಿನ ಪ್ರೀತಿ ಬಹಳಷ್ಟು ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ಭಾವನಾತ್ಮಕವಾಗಿ ಈ ಅವಧಿಯು ಸ್ವಲ್ಪ ಕಠಿಣವಾಗಿರಬಹುದು. ಹಾಗೆ ಪಾಲುದಾರಿಕೆಯೊಂದಿಗೆ ಯಾವುದಾದರೂ ಯೋಜನೆಯಲ್ಲಿ ಕೆಲಸವನ್ನು ಮಾಡುವುದರಿಂದ ಮನಸ್ಸು ಒತ್ತಡಕ್ಕೆ ಒಳಗಾಗಬಹುದು ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಈ ಪರಿಸ್ಥಿತಿಯು ಉತ್ತಮವಾಗಿರಲಿದೆ. ಯಾವುದಾದರು ಹೂಡಿಕೆಯಿಂದ ಮನಸ್ಸು ಅಶಾಂತವಾಗಿರುವುದು. ಈ ವಾರದ ಕೊನೆಯಲ್ಲಿ ಯಾವುದಾದರೂ ಹಿರಿಯ ವ್ಯಕ್ತಿಗಳ ಆಶೀರ್ವಾದದಿಂದ ಜೀವನದಲ್ಲಿ ಸಂತೋಷದ ಅನುಭವವಾಗಲಿದೆ.

ಸಿಂಹ

ಈ ರಾಶಿಗೆ ಸೇರಿದ ಜನರು ಇಂದು ಕೆಲಸದಲ್ಲಿ ಪ್ರಗತಿಯನ್ನು ಹೊಂದುವರು. ಹಾಗೆ ಯಾವುದಾದರೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವುದರಿಂದ ಶುಭ ಫಲಗಳ ಪ್ರಾಪ್ತಿಯಾಗಬಹುದು. ಆರೋಗ್ಯದ ಬಗ್ಗೆ ಈ ವಾರ ಹೆಚ್ಚಿನ ಗಮನವನ್ನು ನೀಡುವುದರಿಂದ ಹಾಗೂ ಹೆಚ್ಚು ಕಾರ್ಯನಿರತರಾಗಿರುವುದರಿಂದ ಈ ವಾರ ಹೆಚ್ಚು ಶಕ್ತಿಶಾಲಿಗಳಾಗುವಿರಿ. ಈ ವಾರ ಪ್ರಯಾಣಿಸುವ ಸಂದರ್ಭದಲ್ಲಿ ನಿಮ್ಮ ಅಭಿಪ್ರಾಯವನ್ನು ಎಲ್ಲರೆದುರೂ ವ್ಯಕ್ತಪಡಿಸುವಿರಿ. ಪ್ರೀತಿಯಲ್ಲಿ ಇರುವವರು ಈ ವಾರ ಮಾತುಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರವನ್ನು ಹೊಂದುವರು.

ಕನ್ಯಾ

ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಡೆತಡೆಗಳು ಎದುರಾಗುವುದರಿಂದ ಜೀವನದಲ್ಲಿ ಕಷ್ಟ ವೃದ್ಧಿ ಆಗಬಹುದು. ಈ ವಾರ ಹೂಡಿಕೆ ಬಗ್ಗೆ ಹೆಚ್ಚಿನ ಗಮನ ನೀಡುವುದು ಅವಶ್ಯಕ. ಇಲ್ಲದಿದ್ದರೆ ಖರ್ಚು ಹೆಚ್ಚಾಗುವ ಸಂಭವವಿದೆ. ಮನೆಯಲ್ಲಿ ನಿಮ್ಮ ಆಪ್ತರೊಂದಿಗೆ ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ವಾರದ ಕೊನೆಯಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಹಾಗೂ ನಿಮ್ಮ ಪ್ರೀತಿ ಪಾತ್ರರ ಭವಿಷ್ಯಕ್ಕಾಗಿ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವಿರಿ.

ತುಲಾ

ರಾಶಿಗೆ ಸೇರಿದ ಜನರು ಕೆಲಸದ ಸ್ಥಳದಲ್ಲಿ ಅಪಾರ ಪ್ರಗತಿಯನ್ನು ಹೊಂದುವರು. ಗೌರವ, ಖ್ಯಾತಿ ಬಹಳಷ್ಟು ವೃದ್ದಿಯಾಗಲಿದೆ. ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಖರ್ಚು ಹೆಚ್ಚಾಗಬಹುದು ಮತ್ತು ಹೂಡಿಕೆ ಬಗ್ಗೆ ಹೆಚ್ಚಿನ ಗಮನವನ್ನು ನೀಡುವುದು ಅವಶ್ಯಕ. ಈ ವಾರ ನಿಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪ್ರಭಾವ ಬೀರಬಹುದು ಮತ್ತು ಹೊಟ್ಟೆಗೆ ಸಂಬಂಧಿಸಿದಂತೆ ಕಷ್ಟ ಹಠಾತ್ ಹೆಚ್ಚಾಗಬಹುದು. ಈ ವಾರ ಕೆಲಸದ ಸ್ಥಳದಲ್ಲಿ ಪ್ರಗತಿಯನ್ನು ಗಳಿಸುವರು ಮತ್ತು ಯಾವುದಾದರೂ ಯೋಜನೆಗೆ ಸಂಬಂಧಿಸಿದಂತೆ ನೀವು ಹೆಚ್ಚಿನ ಚಿಂತೆಗೆ ಒಳಗಾಗುವುದರೊಂದಿಗೆ ಕಷ್ಟ ಹೆಚ್ಚಾಗಬಹುದು. ಪ್ರೇಮ ಸಂಬಂಧದಲ್ಲಿ ಪ್ರೀತಿ ವೃದ್ದಿಯಾಗುವ ಸಾಧ್ಯತೆ ಇದೆ.

ವೃಶ್ಚಿಕ

ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಯೊಂದಿಗಿನ ಪ್ರೀತಿ ಸಾಕಷ್ಟು ಹೆಚ್ಚಾಗಲಿದೆ. ಈ ವಾರ ಕೆಲಸದ ಸ್ಥಳದಲ್ಲಿ ಪ್ರಗತಿಯನ್ನು ಹೊಂದುವಿರಿ. ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ವಾರ ಸುಧಾರಣೆಯನ್ನು ಹೊಂದುವಿರಿ ಮತ್ತು ನೀವು ಸಾಕಷ್ಟು ಶಕ್ತಿಶಾಲಿಗಳಾಗಿರುವಿರಿ. ಮನೆಯವರ ಸಾನಿಧ್ಯದಿಂದ ಸುಖಮಯವಾದ ಸಮಯವನ್ನು ಕಳೆಯುವಿರಿ ಮತ್ತು ನಿಮ್ಮ ಪ್ರೀತಿ ಪಾತ್ರದೊಂದಿಗೆ ಪ್ರಯಾಣಿಸುವ ಬಗ್ಗೆ ಯೋಜನೆಯನ್ನು ರೂಪಿಸುವಿರಿ. ಈ ವಾರ ಪ್ರಯಾಣದ ಸಂದರ್ಭದಲ್ಲಿ ಸಂತೋಷದ ಅನುಭವವಾಗಲಿದೆ. ಹಾಗೆ ಯಾವುದಾದರೂ ಉತ್ತಮ ಸ್ಥಳಕ್ಕೆ ಪ್ರಯಾಣಿಸುವ ಬಗ್ಗೆ ಯೋಜನೆಯನ್ನು ರೂಪಿಸುವಿರಿ.

ಧನಸ್ಸು

ಧನು ರಾಶಿಗೆ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಖರ್ಚು ಹೆಚ್ಚಾಗಬಹುದು. ಹಾಗಾಗಿ ಹೆಚ್ಚಿನ ಗಮನ ನೀಡುವುದು ಆವಶ್ಯಕ. ಸೇರಿದ ಜನರು ಈ ವಾರ ಕೆಲಸದಲ್ಲಿ ಪ್ರಗತಿಯನ್ನು ಹೊಂದುವುದರೊಂದಿಗೆ ಪಾಲುದಾರಿಕೆಯಲ್ಲಿ ಕೆಲಸವನ್ನು ಮಾಡುವುದರಿಂದ ಶುಭ ಫಲಗಳ ಪ್ರಾಪ್ತಿಯಾಗಬಹುದು. ಈ ವಾರ ತಿಳಿದವರ ಸಹಾಯದಿಂದ ಜೀವನದಲ್ಲಿ ಸುಖ, ಸಮೃದ್ಧಿ ನೆಲೆಸುವ ಯೋಗ ದೊರಕುವುದು. ಆರ್ಥಿಕ ವಿಚಾರಗಳು ಯಶಸ್ಸನ್ನು ಗಳಿಸುವ ಸಂಭವವಿರುವುದು. ಪ್ರೇಮ ಸಂಬಂಧದಲ್ಲಿ ಈ ವಾರ ಒತ್ತಡ ಹೆಚ್ಚಾಗುವುದರಿಂದ ಮನಸ್ಸು ಅಶಾಂತಿಗೆ ಒಳಗಾಗುವುದು. ವಾರದ ಕೊನೆಯಲ್ಲಿ ಹೊಸ ಆರಂಭವನ್ನು ಹೊಂದುವುದರೊಂದಿಗೆ ಜೀವನದಲ್ಲಿ ನೆಮ್ಮದಿಯನ್ನು ಗಳಿಸುವಿರಿ.

ಮಕರ

ಈ ವಾರ ಕೆಲಸದಲ್ಲಿ ಪ್ರಗತಿಯನ್ನು ಗಳಿಸುವುದರೊಂದಿಗೆ ಜೀವನದಲ್ಲಿ ಗೌರವ, ಖ್ಯಾತಿ ಹೆಚ್ಚಾಗಲಿದೆ. ನೀವು ಉತ್ತಮ ಭವಿಷ್ಯಕ್ಕಾಗಿ ಈ ವಾರ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಈ ವಾರ ಪ್ರೇಮ ಸಂಬಂಧದಲ್ಲಿ ಸುಧಾರಣೆಯಾಗುವುದರೊಂದಿಗೆ ಮನಸ್ಸು ಸಂತಸದಿಂದ ಇರುವುದು. ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಧನ ಅಭಿವೃದ್ಧಿಯಾಗುವ ಸಾಧ್ಯತೆ ಇರುವುದು. ಮನೆಯಲ್ಲಿ ನೆಮ್ಮದಿ ಇರುವುದು ಹಾಗೂ ಹೊಸ ಅತಿಥಿಯ ಆಗಮನದಿಂದ ಜೀವನದಲ್ಲಿ ಸುಖ, ಸಮೃದ್ಧಿ ನಿರ್ಮಾಣಗೊಳ್ಳುವುದು. ಈ ವಾರ ಪ್ರಯಾಣಿಸುವ ಸಂದರ್ಭದಲ್ಲಿ ಶುಭ ಫಲಗಳ ಪ್ರಾಪ್ತಿಯಾಗುವುದು. ಹಾಗಾಗಿ ಮನಸ್ಸು ಸಂತಸದಿಂದ ಇರುವುದು. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ.

ಕುಂಭ

ಕುಂಭ ರಾಶಿಗೆ ಸೇರಿದ ಜನರು ಈ ವಾರ ಕೆಲಸಗಳಲ್ಲಿ ಪ್ರಗತಿಯನ್ನು ಹೊಂದುವುದರೊಂದಿಗೆ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಈ ವಾರ ಶುಭವಾಗಿರುವುದು. ಈ ವಾರ ಮನೆಯವರೊಂದಿಗೆ ಸಂತೋಷದಿಂದ ಕೂಡಿದ ಸಮಯವನ್ನು ಕಳೆಯುವ ಅವಕಾಶ ದೊರಕಲಿದೆ. ಈ ವಾರ ಪ್ರಯಾಣಿಸುವ ಸಂದರ್ಭದಲ್ಲಿ ಯಶಸ್ಸು ದೊರಕುವುದರೊಂದಿಗೆ ಮನಸ್ಸು ಸಂತಸದಿಂದ ಇರುವುದು. ಈ ವಾರ ಮನೆಯ ವಿಚಾರಗಳಿಗೆ ಸಂಬಂಧಿಸಿದಂತೆ ಹಠಾತ್ ಯಾವುದಾದರು ಸುದ್ದಿಯಿಂದ ಮನಸ್ಸು ದುಃಖಕ್ಕೆ ಒಳಗಾಗಬಹುದು.

ಮೀನ

ಮೀನ ರಾಶಿಗೆ ಸೇರಿದ ಜನರು ಈ ವಾರ ಕೆಲಸದ ಸ್ಥಳದಲ್ಲಿ ಪ್ರಗತಿಯನ್ನು ಹೊಂದುವುದರೊಂದಿಗೆ ಜೀವನದಲ್ಲಿ ಹೆಚ್ಚಿನ ಸಹನೆಯೊಂದಿಗೆ ಕೆಲಸವನ್ನು ಮಾಡುವುದು ಉತ್ತಮ. ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುವುದರೊಂದಿಗೆ ಪ್ರೀತಿಯ ಜೀವನದಲ್ಲಿ ಸಂತೋಷ ನೆಲೆಸಲಿದೆ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಬೇರೆಯವರ ಅಭಿಪ್ರಾಯವನ್ನು ನೀವು ಉಪಯೋಗಿಸುವುದರಿಂದ ಕಷ್ಟ ಹೆಚ್ಚಾಗಬಹುದು. ಈ ವಾರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡುವುದು ಅವಶ್ಯಕ ಮತ್ತು ಭಾವನಾತ್ಮಕ ಕಾರಣಗಳಿಂದಾಗಿ ನಿಮ್ಮ ಆರೋಗ್ಯ ಹದಗೆಡುವ ಸಂಭವವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com