

ಕಳೆದ ತಿಂಗಳಷ್ಟೇ ಬಿಡುಗಡೆಯಾಗಿದ್ದ ಜಾಗ್ವಾರ್ ಎಕ್ಸ್‌ಜೆ ಕಾರು ಬೆಂಗಳೂರಿಗೂ ಆಗಮಿಸಿದೆ. ಎಕ್ಸ್‌ಜೆ 3.0 ಎಲ್ ಡೀಸೆಲ್ ಐಶಾರಾಮಿ ಕಾರು ಪ್ರೀಮಿಯಂ ಲಕ್ಸುರಿ ಮತ್ತು ಫೋಟ್ಫೋಲಿಯೊ ಎಂಬ 2 ಮಾದರಿಗಳಲ್ಲಿ ಲಭ್ಯವಿದೆ. ಇದರ ವಿಶೇಷವೆಂದರೆ ಇದನ್ನು ಪುಣೆಯ ಘಟಕದಲ್ಲಿ ಉತ್ಪಾದಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜಾಗ್ವಾರ್ ಲ್ಯಾಂಡ್‌ರೋವರ್ ಇಂಡಿಯಾ ಉಪಾಧ್ಯಕ್ಷ ರೋಹಿತ್ ಸೂರಿ, 'ನಾವು ಜಾಗ್ವಾರ್ ಎಕ್ಸ್‌ಜೆಯನ್ನು ಬೆಂಗಳೂರಿನ ಮಾರುಕಟ್ಟೆಗೆ ಪರಿಚಯಿಸಲು ಹೆಮ್ಮೆಪಡುತ್ತೇವೆ. ಹೊಸ 2014ರ ಎಕ್ಸ್‌ಜೆ ಅತ್ಯಾಧುನಿಕ ಆಯ್ಕೆಗಳನ್ನು ಹೊಂದಿದೆ. ಆಕರ್ಷಕ ತಂತ್ರಜ್ಞಾನದೊಂದಿಗೆ ವಿನ್ಯಾಸಗೊಂಡಿದೆ. ಬ್ರಿಟಿಷ್ ಶೈಲಿಗೆ ಮರುವ್ಯಾಖ್ಯಾನ ನೀಡಿದ್ದು, ಐಶಾರಾಮಿ, ವಿನ್ಯಾಸ ಮತ್ತು ಸಂತೃಪ್ತಿಗಳು ಮತ್ತಷ್ಟು ಹೆಚ್ಚಿವೆ' ಎಂದರು.
ಎಕ್ಸ್‌ಜೆ 3.0 ಡೀಸೆಲ್ ಪ್ರೀಮಿಯಂ ಲಕ್ಸುರಿ ರು. 93.74 ಲಕ್ಷ (ಎಕ್ಸ್ ಶೋರೂಂ ಬೆಂಗಳೂರು) ಮತ್ತು ಜಾಗ್ವಾರ್ ಎಕ್ಸ್‌ಜೆ 3.0 ಡೀಸೆಲ್ ಫೋಟ್ಫೋಲಿಯೊ ರು. 100.45 ಲಕ್ಷ ಬೆಲೆಗೆ (ಎಕ್ಸ್ ಶೋರೂಂ ಬೆಂಗಳೂರು) ಲಭ್ಯವಿದೆ.