ಬಂತು ಗಾಳಿಯಲ್ಲೇ ತೇಲುವ ಎಲಾನ್‌ ಮಸ್ಕ್‌ ಸೂಪರ್‌ಕಾರ್! ಜಗತ್ತನ್ನೇ ಬೆರಗುಗೊಳಿಸಿದ ಟೆಸ್ಲಾ ರೋಡ್‌ಸ್ಟರ್ ಬಿಗ್ ಜಂಪ್

Elon Musk Unveils Flying Tesla Roadster With SpaceX Rocket Thrusters
ಬಂತು ಗಾಳಿಯಲ್ಲೇ ತೇಲುವ ಟೆಸ್ಲಾ ಸೂಪರ್‌ಕಾರ್!Online Desk
Updated on: 

ಟೆಕ್ಸಾಸ್‌ (ಅಮೆರಿಕ): ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಒಡೆತನದ ಪ್ರಸಿದ್ಧ ಎಲೆಕ್ಟ್ರಿಕ್ ಕಾರು ಸಂಸ್ಥೆ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಜಂಟಿಯಾಗಿ ನಿಜಕ್ಕೂ ಗಾಳಿಯಲ್ಲಿ ಹಾರಬಲ್ಲ ಮತ್ತು ಜಿಗಿಯಬಲ್ಲ ಭವಿಷ್ಯದ ತಂತ್ರಜ್ಞಾನದ ಎಲೆಕ್ಟ್ರಿಕ್ ಸೂಪರ್‌ಕಾರ್ ಟೆಸ್ಲಾ ರೋಡ್‌ಸ್ಟರ್ ಅನ್ನು ಅನಾವರಣಗೊಳಿಸಿವೆ. ಟೆಕ್ಸಾಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೆಸ್ಲಾ ಸಿಇಒ ಇಲಾನ್ ಮಸ್ಕ್ ಈ ಅದ್ಭುತ ಸೂಪರ್‌ಕಾರನ್ನು ಜಗತ್ತಿಗೆ ಪರಿಚಯಿಸಿದ್ದು, "ಭವಿಷ್ಯದಲ್ಲಿ ಹಾರುವ ಕಾರುಗಳಿರುತ್ತವೆ ಎಂದು ನಮಗೆ ಭರವಸೆ ನೀಡಲಾಗಿತ್ತು, ಈಗ ಅದು ನಿಜವಾಗಿದೆ" ಎಂದು ಘೋಷಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಟೆಸ್ಲಾ ಮ್ಯಾಜಿಕ್: ಗಾಳಿಯಲ್ಲಿ ತೇಲುವ ಕಾರು!

ಟೆಸ್ಲಾ ಸಂಸ್ಥೆಯ ಟೆಸ್ಲಾ ರೋಡ್‌ಸ್ಟರ್ ಕಾರು, ಸಾಂಪ್ರದಾಯಿಕ ಹೆಲಿಕಾಪ್ಟರ್ ಅಥವಾ ಡ್ರೋನ್ ತರಹದ ಫ್ಲೈಯಿಂಗ್ ಕಾರ್ ಅಲ್ಲ, ಬದಲಿಗೆ ರಾಕೆಟ್ ತಂತ್ರಜ್ಞಾನ ಬಳಸಿ ಜಿಗಿಯುವ ಮತ್ತು ಗಾಳಿಯಲ್ಲಿ ತೇಲುವ ವಿಶಿಷ್ಟ ಕಾರಾಗಿದೆ. ಈ ಬಿಗ್ ಜಂಪ್ ಕಾರಿನಲ್ಲಿ ಯಾವುದೇ ಸಾಮಾನ್ಯ ಇಂಧನದ ಬದಲಿಗೆ ಅತ್ಯಂತ ಒತ್ತಡದ ಗಾಳಿಯನ್ನು ಬಳಸುವ 10 ಕೋಲ್ಡ್-ಗ್ಯಾಸ್ ರಾಕೆಟ್ ಥ್ರಸ್ಟರ್ಸ್ ಅಳವಡಿಸಲಾಗಿದೆ. ಇವುಗಳ ಸಹಾಯದಿಂದ ಕಾರು ನೆಲದಿಂದ ಮೇಲಕ್ಕೆ ಜಿಗಿಯಲು, ಗಾಳಿಯಲ್ಲಿ ತಿರುಗಲು ಮತ್ತು ಸುರಕ್ಷಿತವಾಗಿ ಕೆಳಗೆ ಇಳಿಯಲು ಸಾಧ್ಯವಾಗುತ್ತದೆ. ಜೊತೆಗೆ, ಕಾರಿನ ತಳಭಾಗದಲ್ಲಿ ಅತ್ಯಂತ ಶಕ್ತಿಶಾಲಿ ಸೂಪರ್ ಸಕ್ಷನ್ ಫ್ಯಾನ್ ವ್ಯವಸ್ಥೆ ಇದ್ದು, ಇದು ರಸ್ತೆಗೆ ಕಾರನ್ನು ಎಷ್ಟು ಬಲವಾಗಿ ಹಿಡಿದಿಡುತ್ತದೆ ಎಂದರೆ, ಕಾರು ನಿಂತಲ್ಲೇ ಇದ್ದರೂ ಸಹ ಛಾವಣಿಯ ಮೇಲೆ (ತಲೆಕೆಳಗಾಗಿ) ಬೇಕಾದರೂ ಚಲಿಸುವಷ್ಟು ಡೌನ್‌ಫೋರ್ಸ್ ಉತ್ಪಾದಿಸುತ್ತದೆ. ಅದರಂತೆ, ಡೆಮೊ ವೇಳೆ ಈ ಕಾರು ಸೈಬರ್‌ಕ್ಯಾಬ್, ಸೈಬರ್‌ಟ್ರಕ್, ಟೆಸ್ಲಾ ಸೆಮಿ, ಮಾಡೆಲ್ ವೈ ಹಾಗೂ ಮಾಡೆಲ್ 3 ನಂತಹ ವಾಹನಗಳ ಮೇಲೂ ಹಾರಾಟ ನಡೆಸಿ ತೋರಿಸಿದೆ.

ಮುಂದುವರೆದು, ಈ ಕಾರು ಸ್ಥಿರ ಸ್ಥಿತಿಯಿಂದ ಗಂಟೆಗೆ 97 ಕಿಮೀ ವೇಗವನ್ನು ಕೇವಲ 0.81 ಸೆಕೆಂಡುಗಳಲ್ಲಿ ತಲುಪುವ ಮೂಲಕ ಜಗತ್ತಿನ ಅತ್ಯಂತ ವೇಗದ ರೇಸಿಂಗ್ ದಾಖಲೆಗಳನ್ನು ಮುರಿಯಲು ಸಜ್ಜಾಗಿದೆ. ಅದರಂತೆ, ಇದರ ಗರಿಷ್ಠ ವೇಗ ಗಂಟೆಗೆ 370 ಕಿಮೀ (230 mph) ಗಿಂತಲೂ ಹೆಚ್ಚಾಗಿದ್ದು, ಸಿಂಗಲ್ ಚಾರ್ಜ್‌ನಲ್ಲಿ ಸುಮಾರು 480 ಕಿಮೀ ಚಲಿಸಬಲ್ಲದು. ಏತನ್ಮಧ್ಯೆ, ಟೆಸ್ಲಾ ಈ ಕಾರನ್ನು ಮೂರು ಪ್ಯಾಕೇಜ್‌ಗಳಲ್ಲಿ ಬಿಡುಗಡೆ ಮಾಡಲು ಸಿದ್ದವಾಗಿದ್ದು,

Elon Musk Unveils Flying Tesla Roadster With SpaceX Rocket Thrusters
ಶೋರೂಮ್ v/s ಲೋಕಲ್ ಗ್ಯಾರೇಜ್: ನಿಮ್ಮ ವಾಹನ ಸರ್ವಿಸ್‌ಗೆ ಯಾವುದು ಬೆಸ್ಟ್? ಮೋಸ ಹೋಗದಿರಲು ಈ 5 ವಿಷಯ ಮರೀಬೇಡಿ!
  • ಪರ್ಫಾರ್ಮೆನ್ಸ್: ಇದು ಕಾರಿನ ಸ್ಟ್ಯಾಂಡರ್ಡ್ ಮಾಡೆಲ್ ಆಗಿದ್ದು, ಇದಕ್ಕೆ ₹42 ಲಕ್ಷ ಅಥವಾ $50,000 ಮುಂಗಡ ಹಣ ನೀಡಿ ಬುಕ್ ಮಾಡಬಹುದು.

  • ಥ್ರಸ್ಟ್: ರೇಸಿಂಗ್-ಸಿದ್ಧ ರೂಪಾಂತರವಾಗಿದ್ದು, ಸುಧಾರಿತ ಏರೋಡೈನಾಮಿಕ್ಸ್ ಮತ್ತು ಹಿಂಭಾಗದಲ್ಲಿ ಹಲವು ಥ್ರಸ್ಟರ್‌ಗಳನ್ನು ಹೊಂದಿರುತ್ತದೆ. ಇದರ ಬುಕಿಂಗ್ ಶುಲ್ಕ $250,000.

  • ರಾಕೆಟ್: ಇದು ಕೇವಲ ಆಹ್ವಾನಿತರಿಗೆ ಮಾತ್ರ ಲಭ್ಯವಿರುವ ಅತ್ಯಂತ ಪ್ರೀಮಿಯಂ ಮಾಡೆಲ್ ಆಗಿದ್ದು, ಸಾರ್ವಜನಿಕ ರಸ್ತೆಗಳಲ್ಲಿ ಸದ್ಯಕ್ಕೆ ಬಳಸಲು ಅನುಮತಿ ಇರುವುದಿಲ್ಲ.

ಹಾಗಾದ್ರೆ, ಯಾವಾಗ ಮಾರುಕಟ್ಟೆಗೆ ಪ್ರವೇಶಿಸಲಿದೆ ಟೆಸ್ಲಾ ರೋಡ್‌ಸ್ಟರ್?

ಜಾಗತಿಕ ಅನಾವರಣದ ವೇಳೆ ಟೆಸ್ಲಾ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಲಾರ್ಸ್ ಮೊರಾಬಿ ಮತ್ತು ಸಿಇಒ ಇಲಾನ್ ಮಸ್ಕ್ ಇಬ್ಬರು 2028ರ ಆರಂಭದಲ್ಲಿ ಈ ಕಾರುಗಳ ದೊಡ್ಡ ಪ್ರಮಾಣದ ಉತ್ಪಾದನೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಇದು ಕೇವಲ ರಸ್ತೆಯಲ್ಲಿ ಓಡುವ ಕಾರಲ್ಲದೆ, ರಾಕೆಟ್ ಥ್ರಸ್ಟರ್‌ಗಳ ತಂತ್ರಜ್ಞಾನ ಹೊಂದಿರುವುದರಿಂದ ವಿವಿಧ ದೇಶಗಳ ವಾಯುಯಾನ ಮತ್ತು ರಸ್ತೆ ಸಾರಿಗೆ ಇಲಾಖೆಗಳಿಂದ ಕಟ್ಟುನಿಟ್ಟಿನ ಸುರಕ್ಷತಾ ಅನುಮತಿಗಳನ್ನು ಪಡೆಯಬೇಕಾಗಿದೆ. ಹೀಗಾಗಿ ಇದಕ್ಕೆ ಇನ್ನೂ 1 ರಿಂದ 2 ವರ್ಷಗಳ ಸಮಯಾವಕಾಶ ಬೇಕಾಗುತ್ತದೆ ಎನ್ನಲಾಗಿದೆ.

Elon Musk Unveils Flying Tesla Roadster With SpaceX Rocket Thrusters
ಪೆಟ್ರೋಲ್, ಡೀಸೆಲ್ ಬಿಟ್ಟು ಪರ್ಯಾಯ ಇಂಧನದತ್ತ ಮುಖ ಮಾಡಿದ ವಾಹನ ಪ್ರಿಯರು: ಕಾರಣವೇನು ಗೊತ್ತಾ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com