ಸಿನಿಮಾ ಮಾಡುವ ಕನಸು "ಅರಿವಿನ ಮನೆ"ಗೆ ಕಾರಣ: ಶಿವಾನಂದ ಸೋಮಪ್ಪ

ಸಿನಿಮಾ ಮಾಡಬೇಕು ಎಂಬ ಹೆಬ್ಬಯಕೆ ನನ್ನನ್ನು ಅರಿವಿನ ಮನೆ ಸಿನಿಮಾ ಮಾಡುವಂತೆ ಪ್ರೇರೇಪಿಸಿತು ಎಂದು ಅರಿವಿನ ಮನೆ ಚಿತ್ರದ ನಿರ್ದೇಶಕ ಶಿವಾನಂದ ಸೋಮಪ್ಪ ಅವರು ಹೇಳಿದ್ದಾರೆ...
ಅರಿವಿನ ಮನೆ ಚಿತ್ರದ ನಿರ್ದೇಶಕ ಶಿವಾನಂದ ಸೋಮಪ್ಪ
ಅರಿವಿನ ಮನೆ ಚಿತ್ರದ ನಿರ್ದೇಶಕ ಶಿವಾನಂದ ಸೋಮಪ್ಪ

ಬೆಂಗಳೂರು: ಸಿನಿಮಾ ಮಾಡಬೇಕು ಎಂಬ ಹೆಬ್ಬಯಕೆ ನನ್ನನ್ನು ಅರಿವಿನ ಮನೆ ಸಿನಿಮಾ ಮಾಡುವಂತೆ ಪ್ರೇರೇಪಿಸಿತು ಎಂದು ಅರಿವಿನ ಮನೆ ಚಿತ್ರದ ನಿರ್ದೇಶಕ  ಶಿವಾನಂದ ಸೋಮಪ್ಪ ಅವರು ಹೇಳಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಅರಿವಿನ ಮನೆ ಚಿತ್ರದ ನಿರ್ದೇಶಕ ಶಿವಾನಂದ ಸೋಮಪ್ಪ ಅವರು, ಬಸವಣ್ಣನ ಕುರಿತು ಈ ಹಿಂದೆ ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ತೆರೆಕಂಡಿವೆಯಾದರೂ, ಬಸವಣ್ಣನವರ ಅನುಭವ ಮಂಟಪವನ್ನೇ ಕೇಂದ್ರವಾಗಿಟ್ಟುಕೊಂಡು ಯಾವುದೇ ಚಿತ್ರಗಳು ಬಂದಿಲ್ಲ. ನಾನು ಕೂಡ ಕನ್ನಡ ಎಂಎ ವಿದ್ಯಾರ್ಥಿಯಾಗಿದ್ದು, ಸಿನಿಮಾ ಮಾಡುವ ಬಯಕೆ ನನ್ನಲ್ಲಿತ್ತು. ಹೀಗಾಗಿ ಬಸವಣ್ಣನವರ ಅನುಭವ ಮಂಟಪವನ್ನೇ ಕೇಂದ್ರವಾಗಿಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ವಾಣಿಜ್ಯಾತ್ಮಕವಲ್ಲದ ಚಿತ್ರವೆಂದು ನನದೆ ತಿಳಿದಿದೆ. ಆದರೂ ಧೈರ್ಯಮಾಡಿ ಚಿತ್ರವನ್ನು ನಿರ್ಮಿಸಿದ್ದೇವೆ ಎಂದು ಅವರು ಹೇಳಿದರು.

ಚಿತ್ರವು 900 ವರ್ಷಗಳಷ್ಟು ಹಳೆಯದಾದ ಮತ್ತು 12 ನೇ ಶತಮಾನದ ಕಥೆ ನಮ್ಮ ಮಣ್ಣಿನ ಚಿತ್ರಕಥೆಯನ್ನು ಹೊಂದಿದೆ. ಅಂದು ಬಸವಣ್ಣ ಏನನ್ನು ವಿರೋಧಿಸುತ್ತಿದ್ದರೋ, ಏನನ್ನು ಬೇಕು ಎಂದು ಬಯಸುತ್ತಿದ್ದರೋ ಅದೇ ಪರಿಸ್ಥಿತಿ ಇಂದಿಗೂ ಇದೆ. 900 ವರ್ಷಗಳ ಮೊದಲೇ ಬಸವಣ್ಣ ಈಗಿನ ಬೆಳವಣಿಗೆಗಳನ್ನು ಯೋಚಿಸಿ ದಾರಿ ತೋರಿದ್ದರು ಎಂದು ಶಿವಾನಂದ ಸೋಮಪ್ಪ ಅಭಿಪ್ರಾಯಪಟ್ಟಿದ್ದಾರೆ.

ಅರಿವಿನ ಮನೆ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿದ್ದು, ಚಿತ್ರಕ್ಕೆ ಆಯ್ಕೆ ಸಮಿತಿಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com