ಬಜೆಟ್ ನಿಂದ ಬಿಬಿಎಂಪಿಗೆ ಬಂದ 'ಭಾಗ್ಯ' ಏನು

ಕರ್ನಾಟಕಕ್ಕೆ ವಿಶ್ವ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿರುವ ಬೆಂಗಳೂರು ನಗರ ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಬಿಎಂಪಿ
ಬಿಬಿಎಂಪಿ
Updated on

ಬೆಂಗಳೂರು: ಕರ್ನಾಟಕಕ್ಕೆ ವಿಶ್ವ ಮಟ್ಟದಲ್ಲಿ ಮನ್ನಣೆ ತಂದುಕೊಟ್ಟಿರುವ ಬೆಂಗಳೂರು ನಗರ ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಿಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಘನ ತ್ಯಾಜ್ಯ ವಸ್ತುಗಳ ಸಮರ್ಪಕ ನಿರ್ವಹಣೆಗೆ ಕೆಯುಐಡಿಎಫ್ ಸಿ ಮೂಲಕ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದ್ದು, 6 ಘಟಕಗಳು ಕಾರ್ಯಾರಂಭ ಮಾಡಲಿವೆ. ಈ ನೂತನ ಘಟಕಗಳ ಕಾರ್ಯಾರಂಭದಿಂದ, ಬೆಂಗಳೂರು ನಗರದಲ್ಲಿ ಒಟ್ಟಾರೆ 270 ಕೋಟಿ ರು.ಗಳ ವೆಚ್ಚದಲ್ಲಿ ಪ್ರತಿ ದಿನ 2800 ಟನ್ ಗಳ ಘನತ್ಯಾಜ್ಯ ವಸ್ತು ಸಂಸ್ಕರಣಾ ಸಾಮರ್ಥ್ಯ ಸೃಷ್ಟಿಸಲಾಗುವುದು.

ನಗರೋತ್ಥಾನ ಯೋಜನೆಯಡಿ 1000 ಕೋಟಿ ಹಾಗೂ ರಾಜ್ಯ ಮತ್ತು ಕೇಂದ್ರ ಹಣಕಾಸು ಆಯೋಗಗಳ ಅನುದಾನದಿಂದ 391.06 ಕೋಟಿ ರುಪಾಯಿಯನ್ನು ಒದಗಿಸಲಾಗುವುದು. 1500 ಕೋಟಿ ರುಪಾಯಿ ಅಂದಾಜು ವೆಚ್ಚದಲ್ಲಿ ಕೆಳಕಂಡ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಯೋಜನೆಗಳು
* ಪ್ಯಾಲೇಸ್ ಗ್ರೌಂಡ್ ಬಳಿಯಿರುವ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ಅಗಲೀಗರಣ
* ಸರ್ಜಾಪುರ ರಸ್ತೆಯನ್ನು ಹೊರವರ್ತುಲ ರಸ್ತೆಯಿಂದ ದೊಮ್ಮಸಂದ್ರವರೆಗೆ ಅಗಲೀಕರಣ
* ಬನ್ನೇರುಘಟ್ಟ ರಸ್ತೆಯನ್ನು ಜೇಡಿಮರ ಜಂಕ್ಷನ್ ನಿಂದ ನೈಸ್ ರಸ್ತೆಯವರೆಗೆ ಅಗಲೀಕರಣ
ಡಾ. ಅಂಬೇಡ್ಕರ್(ಟ್ಯಾನರಿ) ರಸ್ತೆಯನ್ನು ಎಂ.ಎಂ ರಸ್ತೆಯಿಂದ ಹೊರವರ್ತುಲ ರಸ್ತೆಯವರೆಗೆ * ಅಗಲೀಕರಣ
* ದಿಣ್ಣೂರು ರಸ್ತೆಯನ್ನು ಸಂಜಯನಗರ ಮುಖ್ಯರಸ್ತೆಯಿಂದ ಅಂಬೇಡ್ಕರ್ ಮೆಡಿಕಲ್ ಕಾಲೇಜ್ ವರೆಗೆ ಅಗಲೀಕರಣ
* ವರ್ತೂರು ರಸ್ತೆಯಿಂದ ಗುಂಜೂರು ಮಾರ್ಗವಾಗಿ ಸರ್ಜಾಪುರ ರಸ್ತೆಯವರೆಗೆ ಅಗಲೀಕರಣ
* ರಾಜರಾಜೇಶ್ವರಿನಗರ ವಲಯದಲ್ಲಿನ ವಾಯುಪಡೆ ಇಲಾಖೆಯಿಂದ ಜಮೀನು ಪಡೆದು ಸುಬ್ರತೋ ಮುಖರ್ಜಿ ರಸ್ತೆಯ ಅಗಲೀಕರಣ ಅಭಿವೃದ್ಧಿ ಯೋಜನೆ ಹಾಗೂ ಕೆಳಸೇತುವೆ ನಿರ್ಮಾಣ.
* ಬಿಬಿಎಂಪಿ ವ್ಯಾಪ್ತಿಯಲ್ಲಿ ಆಯ್ದ ಪ್ರಮುಖ ಜಂಕ್ಷನ್ ಗಳ ಸಮಗ್ರ ಅಭಿವೃದ್ಧಿ ಹಾಗೂ ಆಯ್ದ ಸ್ಥಳಗಳಲ್ಲಿ ಗ್ರೇಡ್ ಸಪರೇಟರ್ ಗಳ ನಿರ್ಮಾಣ
* ಟೆಂಡರ್ ಶ್ಯೂರ್ ಮಾದರಿಯಲ್ಲಿ ಪ್ರಮುಖ ರಸ್ತೆಗಳ ಅಭಿವೃದ್ಧಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com