ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು 2022-23 ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ.
ತೆರಿಗೆ ಇಳಿಕೆ ಮಾಡಿರುವುದರ ಪರಿಣಾಮ ಒಂದಷ್ಟು ಉತ್ಪನ್ನ, ಪದಾರ್ಥಗಳ ಬೆಲೆಯೂ ಇಳಿಕೆಯಾಗಿದೆ.
ಬೆಲೆ ಅಗ್ಗವಾಗಿರುವ ವಸ್ತು/ ಪದಾರ್ಥಗಳ ವಿವರ ಹೀಗಿದೆ.
ಯಾವುದು ದುಬಾರಿ?
ಇದೇ ವೇಳೆ ಮೆಂತೆ ಎಣ್ಣೆಯ ಮೇಲಿನ ಕಸ್ಟಮ್ ಸುಂಕವನ್ನು ಸಹ ಕಡಿಮೆ ಮಾಡಲಾಗಿದೆ.
ಯಾವ ಸರಕುಗಳ ಮೇಲೆ ಕಸ್ಟಮ್ ಸುಂಕ ಹೆಚ್ಚಳ?
ಬಂಡವಾಳ ಸರಕುಗಳ ಮೇಲೆ ಶೇಕಡಾ 7.5ರಷ್ಟು ಆಮದು ಸುಂಕವನ್ನು ವಿಧಿಸಲಾಗಿದ್ದು, ಈ ಮೊದಲು ಇದ್ದ ಆಮದು ಸುಂಕದಲ್ಲಿ ವಿನಾಯಿತಿಯನ್ನು ತೆಗೆದುಹಾಕಲಾಗಿದೆ. ಅನುಕರಣೆ ಆಭರಣಗಳ ಮೇಲಿನ ಕಸ್ಟಮ್ ಸುಂಕವನ್ನು ಹೆಚ್ಚಿಸಲಾಗಿದ್ದು, ಅದರ ಆಮದನ್ನು ಕಡಿಮೆ ಮಾಡಬಹುದು. ವಿದೇಶಿ ಕೊಡೆ ಕೂಡ ದುಬಾರಿಯಾಗಲಿದೆ. ಇದಲ್ಲದೆ ಮಿಶ್ರಣ ಮಾಡದ ಇಂಧನದ ಮೇಲೂ ಕೂಡ ಬೆಲೆ ಏರಿಕೆ ಮಾಡಲಾಗಿದೆ.ಉಳಿದಂತೆ ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಈ ಹಿಂದೆ ಇದ್ದ ತೆರಿಗೆ ಪದ್ಧತಿಯನ್ನೇ ಮುಂದುವರೆಸಲಾಗಿದೆ.
Advertisement