ಹೊಸತಾಗಿ ಬ್ಯಾಂಕ್ಗಳನ್ನು ಆರಂಭಿಸಲು ತಾನು ಸಲ್ಲಿಸಿದ್ದ ಅರ್ಜಿಯನ್ನು ಟಾಟಾ ಸನ್ಸ್ ಹಿಂಪಡೆದಿದೆ. ಶೀಘ್ರದಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಬ್ಯಾಂಕ್ಗಳಿಗೆ ಪರವಾನಿಗಿ ಘೋಷಣೆ ಮಾಡುವುದಿತ್ತು. ಬ್ಯಾಂಕ್ ಆರಂಭಿಸಲು ನೀಡಲಾಗಿರುವ ನಿಯಮಗಳು ಮತ್ತು ಹಲವು ದೇಶಗಳಲ್ಲಿರುವ ನಿಯಮಗಳು ಉದ್ದೇಶಿತ ಬ್ಯಾಂಕ್ ವಹಿವಾಟಿಗೆ ಅಡ್ಡಿಯಾಗಲಿವೆ. ಹೀಗಾಗಿ, ಸಂಸ್ಥೆ ಅರ್ಜಿ ಹಿಂಪಡೆದಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಆರ್ಬಿಐ ಕೂಡ ಟಾಟಾ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ.