ವಾಣಿಜ್ಯ

₹1.80 ಲಕ್ಷದಿಂದ ₹1.24 ಲಕ್ಷಕ್ಕೆ ಇಳಿದ ಬಂಗಾರದ ದರ! ಇನ್ನೂ ಕಡಿಮೆ ಆಗುತ್ತಾ ಚಿನ್ನ? ಗೋಲ್ಡ್ ರೇಟ್ ಬಗ್ಗೆ ತಜ್ಞರು ಹೇಳೋದೇನು?

₹1.80 ಲಕ್ಷದಿಂದ ₹1.24 ಲಕ್ಷಕ್ಕೆ ಇಳಿದ ಬಂಗಾರದ ದರ! ಇನ್ನೂ ಕಡಿಮೆ ಆಗುತ್ತಾ ಚಿನ್ನ? ಗೋಲ್ಡ್ ರೇಟ್ ಬಗ್ಗೆ ತಜ್ಞರು ಹೇಳೋದೇನು?
ಭಾರಿ ಕುಸಿತ ಕಂಡ ಚಿನ್ನದ ಬೆಲೆ: ಹೂಡಿಕೆಗೆ ಕಾಯಬೇಕೇ ಅಥವಾ ಈಗಲೇ ಖರೀದಿಸಬೇಕೇ? — AI Image
Published On :

Gold Price: ಆಕಾಶಕ್ಕೇರಿದ್ದ ಬಂಗಾರದ ಬೆಲೆಗೆ ಈಗ ದಿಢೀರ್ ಬ್ರೇಕ್ ಬಿದ್ದಿದೆ! ಜನವರಿ ತಿಂಗಳಲ್ಲಿ 10 ಗ್ರಾಂಗೆ ಬರೋಬ್ಬರಿ 1.80 ಲಕ್ಷ ರೂಪಾಯಿ ಗಡಿ ದಾಟಿ ಗ್ರಾಹಕರಿಗೆ ಶಾಕ್ ನೀಡಿದ್ದ ಚಿನ್ನ, ಕಳೆದ ಮೂರು ತಿಂಗಳಲ್ಲಿ ಶೇ. 27ಕ್ಕೂ ಹೆಚ್ಚು ಕುಸಿದು ಈಗ 1.24 ಲಕ್ಷ ರೂಪಾಯಿ ಆಸುಪಾಸಿಗೆ ಬಂದು ನಿಂತಿದೆ. ಮದುವೆ ಸೀಸನ್‌ನಲ್ಲಿ ಈ ಇಳಿಕೆ ಆಭರಣ ಪ್ರಿಯರಿಗೆ ದೊಡ್ಡ ರಿಲೀಫ್ ನೀಡಿದ್ದರೂ, ಈಗ ಎಲ್ಲರ ಮನಸ್ಸಿನಲ್ಲಿ ಕಾಡುತ್ತಿರುವ ಒಂದೇ ಪ್ರಶ್ನೆ—ಬಂಗಾರದ ರೇಟ್ ಇನ್ನೂ ಕಡಿಮೆಯಾಗುತ್ತಾ? ಅಥವಾ ಇದು ಖರೀದಿಗೆ ಸರಿಯಾದ ಸಮಯವೇ? ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರ ಏರಿಕೆ, ಬಲಿಷ್ಠವಾಗುತ್ತಿರುವ ಡಾಲರ್ ಮತ್ತು ಜಾಗತಿಕ ಮಾರುಕಟ್ಟೆಯ ಏರಿಳಿತಗಳ ನಡುವೆ ಚಿನ್ನದ ಮುಂದಿನ ನಡೆ ಏನಿರಲಿದೆ ಎಂಬ ಬಗ್ಗೆ ಮಾರುಕಟ್ಟೆ ತಜ್ಞರು ನುಡಿದಿರುವ ಅಚ್ಚರಿಯ ಭವಿಷ್ಯ ಇಲ್ಲಿದೆ:

ಇಂದಿನ ಚಿನ್ನದ ರೇಟ್ ಎಷ್ಟು?

ಇಂದು ನವೆಂಬರ್ 25 ರಂದು MCX ನಲ್ಲಿ ಚಿನ್ನ 1.28% ಕುಸಿದು 10 ಗ್ರಾಂಗೆ 1,20,760 ರೂಪಾಯಿಗೆ ಬಂದಿದೆ. ಬೆಂಗಳೂರು ಸೇರಿ ದೇಶಾದ್ಯಂತ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 1,24,580 ರೂ, 22 ಕ್ಯಾರೆಟ್ 1,14,200 ರೂ ಇದೆ. ಏತನ್ಮಧ್ಯೆ, IBJA ಪ್ರಕಾರ ಇದು ಒಂದು ತಿಂಗಳ ಕನಿಷ್ಠ ಮಟ್ಟ. ನವೆಂಬರ್ 5 ರಂದು 1,43,950 ರೂ ಇದ್ದ ಚಿನ್ನ ಈಗ 1.21 ಲಕ್ಷಕ್ಕೆ ಬಂದಿದೆ.

ಹಾಗಾದ್ರೆ, ಯಾಕೆ ಬೀಳ್ತಿದೆ ಬಂಗಾರದ ಬೆಲೆ?

ಮುಖ್ಯ ಕಾರಣ ಅಮೆರಿಕ. ಅಮೆರಿಕದಲ್ಲಿ ಫೆಡ್ ಡಿಸೆಂಬರ್ ನಲ್ಲಿ ಬಡ್ಡಿ ದರ ಹೆಚ್ಚಿಸಬಹುದು ಅನ್ನೋ ಭಯ ಜಾಸ್ತಿಯಾಗಿದೆ. ಈಗ ಮಾರುಕಟ್ಟೆಯಲ್ಲಿ ಡಿಸೆಂಬರ್ ನಲ್ಲಿ 25 ಬೇಸಿಸ್ ಪಾಯಿಂಟ್ ಬಡ್ಡಿ ಹೆಚ್ಚಳಕ್ಕೆ 96% ಸಾಧ್ಯತೆ ಇದೆ ಅಂತ ಲೆಕ್ಕ ಹಾಕಲಾಗಿದೆ. ಡಾಲರ್ ಗಟ್ಟಿಯಾದರೆ, ಬಡ್ಡಿ ಜಾಸ್ತಿಯಾದರೆ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುತ್ತದೆ, ಯಾಕಂದ್ರೆ ಚಿನ್ನ ಬಡ್ಡಿ ಕೊಡಲ್ಲ. ಜೊತೆಗೆ ಟೆಕ್ ಷೇರು ಕುಸಿದಾಗ ಹೂಡಿಕೆದಾರರು ನಷ್ಟ ಸರಿದೂಗಿಸಲು ಚಿನ್ನ ಮಾರಿದ್ದಾರೆ.

ತಜ್ಞರ ಅಭಿಪ್ರಾಯವೇನು?

ಮೋತಿಲಾಲ್ ಓಸ್ವಾಲ್ ವಿಶ್ಲೇಷಕರ ಪ್ರಕಾರ, ಸದ್ಯಕ್ಕೆ ಚಿನ್ನದ ಮಾರುಕಟ್ಟೆ ದುರ್ಬಲವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸ್‌ಗೆ $3,300 - $3,500 ಮಟ್ಟಕ್ಕೆ ಇಳಿದರೆ, ಭಾರತದಲ್ಲಿ 24 ಕ್ಯಾರೆಟ್ ಚಿನ್ನ ₹1.16 ಲಕ್ಷದಿಂದ ₹1.18 ಲಕ್ಷದವರೆಗೂ ಇಳಿಯುವ ಸಾಧ್ಯತೆಯಿದೆ. ಆದರೆ, 10 ಗ್ರಾಂ ಚಿನ್ನ ₹1 ಲಕ್ಷಕ್ಕಿಂತ ಕೆಳಗಿಳಿಯುವ ಸಾಧ್ಯತೆ ಬಹಳ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ, 2027ರ ವೇಳೆಗೆ ಜಾಗತಿಕ ಬೇಡಿಕೆ ಮತ್ತು ಕೇಂದ್ರ ಬ್ಯಾಂಕ್‌ಗಳ ಖರೀದಿಯಿಂದಾಗಿ ಚಿನ್ನ ಮತ್ತೆ ₹1.45 ಲಕ್ಷದಿಂದ ₹1.60 ಲಕ್ಷದವರೆಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಮುಂದಿನ 15 ದಿನ ಯಾಕೆ ಮುಖ್ಯ?

ಮುಂದಿನ 15 ದಿನದಲ್ಲಿ 3 ದೊಡ್ಡ ಈವೆಂಟ್ ಗಳಿವೆ. ನವೆಂಬರ್ 25 ಇಂದು ಅಮೆರಿಕದ PCE ಹಣದುಬ್ಬರ ಡೇಟಾ ಬರುತ್ತಿದೆ. ಡಿಸೆಂಬರ್ 4 ರಂದು ಉದ್ಯೋಗ ಡೇಟಾ, ಡಿಸೆಂಬರ್ 9-10 ರಂದು ಫೆಡ್ ಬಡ್ಡಿ ದರ ನಿರ್ಧಾರ. ಈ ಮೂರು ಡೇಟಾ ಚಿನ್ನದ ದಿಕ್ಕನ್ನು ನಿರ್ಧರಿಸುತ್ತದೆ. ಅದರಲ್ಲೂ, ಹಣದುಬ್ಬರ ಜಾಸ್ತಿ ಬಂದರೆ ಚಿನ್ನ ಇನ್ನೂ ಬೀಳುತ್ತದೆ. ಅಕಸ್ಮಾತ್, ಕಡಿಮೆ ಬಂದರೆ ಸ್ವಲ್ಪ ಚೇತರಿಕೆ ಬರಬಹುದು.!

ಹಾಗಾದ್ರೆ, ಈಗ ಖರೀದಿಸಬೇಕಾ, ಕಾಯಬೇಕಾ?

ಮದುವೆಗಾಗಿ, ತುರ್ತಾಗಿ ಬೇಕಿದ್ದರೆ ಈಗ ಸ್ವಲ್ಪ ಖರೀದಿಸಬಹುದು, ಯಾಕಂದ್ರೆ 1 ತಿಂಗಳಲ್ಲಿ 17,800 ರೂ ಕಡಿಮೆಯಾಗಿದೆ. ಆದರೆ ಹೂಡಿಕೆಗಾಗಿ ದೊಡ್ಡ ಮೊತ್ತ ಹಾಕುವವರು 1,21,000 ಲೆವೆಲ್ ನೋಡಿ, ಅದು ಮುರಿದರೆ 1,18,500 - 1,14,000 ವರೆಗೆ ಕಾಯುವುದು ಬೆಸ್ಟ್ ಅಂತ ತಜ್ಞರು ಹೇಳ್ತಾರೆ. ಒಂದೇ ಬಾರಿ ಎಲ್ಲ ಖರೀದಿಸಬೇಡಿ, ಹಂತ ಹಂತವಾಗಿ ಖರೀದಿಸಿ, ಅಂತರರಾಷ್ಟ್ರೀಯ ದರಗಳ ಮೇಲೆ ನಿಗಾ ಇರಿಸಿ. ಡಿಸೆಂಬರ್ ಫೆಡ್ ನಿರ್ಧಾರದ ನಂತರವೇ ದೊಡ್ಡ ಖರೀದಿಗೆ ಒಳ್ಳೆಯ ಸಮಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.