Gold rate: ಭಾರಿ ಕುಸಿತದ ಬಳಿಕ ಚಿನ್ನದ ದರ ಮತ್ತೆ ಏರಿಕೆ; ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ಎಷ್ಟಿದೆ? ಬೆಳ್ಳಿ ಬೆಲೆಯಲ್ಲೂ ಬದಲಾವಣೆ, ಇಲ್ಲಿದೆ ಸಂಪೂರ್ಣ ಪಟ್ಟಿ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯ ಹಾದಿಗೆ ಮರಳಿದ್ದು, ದೇಶೀಯ ಮಾರುಕಟ್ಟೆಯಲ್ಲೂ ಬೆಲೆಗಳಲ್ಲಿ ಏರಿಕೆ ದಾಖಲಾಗಿದೆ. ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,30,460 ಹಾಗೂ 22 ಕ್ಯಾರೆಟ್ ಚಿನ್ನ..
Gold Rate Today
ಚಿನ್ನ ಬೆಳ್ಳಿ ದರಗಳು (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಹಿಂದಿನ ದಿನ ಭಾರಿ ಕುಸಿತ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಗುರುವಾರ (ನವೆಂಬರ್ 19) ಮತ್ತೆ ಚೇತರಿಕೆ ಕಂಡುಬಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯ ಹಾದಿಗೆ ಮರಳಿದ್ದು, ದೇಶೀಯ ಮಾರುಕಟ್ಟೆಯಲ್ಲೂ ಬೆಲೆಗಳಲ್ಲಿ ಏರಿಕೆ ದಾಖಲಾಗಿದೆ.

ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,30,460 ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ ₹1,19,588 ದಾಖಲಾಗಿದೆ.

ಬೆಂಗಳೂರು, ಮುಂಬೈ, ದೆಹಲಿ, ಚೆನ್ನೈ ಸೇರಿದಂತೆ ಪ್ರಮುಖ ನಗರಗಳ ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ವಿವರ ಇಲ್ಲಿದೆ.

ನವೆಂಬರ್ 19ರ ಬೆಳಗ್ಗೆ 6.20ರ ವೇಳೆಗೆ ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ ₹1,30,460 ಆಗಿತ್ತು. 22 ಕ್ಯಾರೆಟ್ ಚಿನ್ನದ ಬೆಲೆ ₹1,19,588 ಆಗಿದ್ದರೆ, ಒಂದು ಕೆಜಿ ಬೆಳ್ಳಿಯ ಬೆಲೆ ₹1,61,490 ದಾಖಲಾಗಿತ್ತು ಎಂದು Bullion.co.in ವರದಿ ಮಾಡಿದೆ.

Gold Rate Today
TVS ಕುಟುಂಬದಲ್ಲಿ ಆಸ್ತಿ ವಿವಾದ ಸ್ಫೋಟ: ತಂದೆ ವೇಣು ಶ್ರೀನಿವಾಸ್​ಗೆ ಆಸ್ತಿಯಲ್ಲಿ ಸಮಾನ ಪಾಲು ಕೋರಿ ಪುತ್ರಿ ಲಕ್ಷ್ಮಿ ವೇಣು ನೋಟಿಸ್

ಹಿಂದಿನ ದಿನ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ

ನವೆಂಬರ್ 18ರಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇ.3ಕ್ಕಿಂತ ಹೆಚ್ಚು ಕುಸಿದಿತ್ತು. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳ ಕುರಿತು ಕಠಿಣ ನಿಲುವು ತಳೆದಿರುವುದು ಹಾಗೂ ಡಾಲರ್ ಮೌಲ್ಯ ಮತ್ತು ಬಾಂಡ್ ಇಳುವರಿ ಹೆಚ್ಚಾಗಿರುವುದು ಚಿನ್ನದ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಅಂದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 3,726.19 ಡಾಲರ್‌ಗೆ ಇಳಿದಿತ್ತು. ಭಾರತದ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ (MCX)ನಲ್ಲಿ ಡಿಸೆಂಬರ್ ವಿತರಣೆಯ ಚಿನ್ನದ ಫ್ಯೂಚರ್ಸ್ ಬೆಲೆ ಶೇ.3.3ರಷ್ಟು ಕುಸಿದು 10 ಗ್ರಾಂಗೆ ₹1,29,814ಕ್ಕೆ ತಲುಪಿತ್ತು.

ಇದೇ ವೇಳೆ ಬೆಳ್ಳಿ ಫ್ಯೂಚರ್ಸ್ ಬೆಲೆ ಶೇ.5.3ರಷ್ಟು ಕುಸಿದು ಕೆಜಿಗೆ ₹1,60,182ಕ್ಕೆ ಇಳಿದಿತ್ತು. ಗುರುವಾರದ ಆರಂಭದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಶೇ.0.36ರಷ್ಟು ಏರಿಕೆಯಾಗಿ ಔನ್ಸ್‌ಗೆ 3,753.9 ಡಾಲರ್‌ಗೆ ತಲುಪಿತ್ತು. ಬೆಳ್ಳಿ ಬೆಲೆಯೂ ಶೇ.1.37ರಷ್ಟು ಏರಿಕೆಯಾಗಿ ಔನ್ಸ್‌ಗೆ 45.675 ಡಾಲರ್‌ಗೆ ವಹಿವಾಟು ನಡೆಸಿತ್ತು.

Gold Rate Today
ಡಾಲರ್ ಎದುರು ಪುಟಿದೆದ್ದ ರೂಪಾಯಿ: ಈ ವರ್ಷದಲ್ಲೇ ಮಹಾ ಪತನ; ಮುಂದಿನ ದಿನಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಮತ್ತಷ್ಟು ಕುಸಿತ!

ಪ್ರಮುಖ ನಗರಗಳಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ

ಬೆಂಗಳೂರಿನಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ₹1,30,330 ಗಳಾಗಿದ್ದರೆ, ಮುಂಬೈನಲ್ಲಿ ₹1,30,220, ದೆಹಲಿಯಲ್ಲಿ ₹1,30,000, ಚೆನ್ನೈನಲ್ಲಿ ₹1,30,600, ಹೈದರಾಬಾದ್ ನಲ್ಲಿ ₹1,30,430 ಮತ್ತು ಕೋಲ್ಕತ್ತಾದಲ್ಲಿ ₹1,30,050 ನಷ್ಟಿದೆ.

ಅಂತೆಯೇ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ ₹1,19,469 ಗಳಾಗಿದ್ದರೆ, ಮುಂಬೈನಲ್ಲಿ ₹1,19,368, ದೆಹಲಿಯಲ್ಲಿ ₹1,19,167, ಚೆನ್ನೈನಲ್ಲಿ ₹1,19,717, ಹೈದರಾಬಾದ್ ನಲ್ಲಿ ₹1,19,561 ಮತ್ತು ಕೋಲ್ಕತ್ತಾದಲ್ಲಿ ₹1,19,213 ನಷ್ಟಿದೆ.

ಬೆಳ್ಳಿ ದರದಲ್ಲೂ ಬದಲಾವಣೆ

ಇತ್ತ ಬೆಳ್ಳಿ ದರದಲ್ಲೂ ಇಂದು ಬದಲಾವಣೆಯಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಕೆಜಿ ಬೆಳ್ಳಿದರ ₹1,61,330 ಗಳಾಗಿದ್ದರೆ, ಮುಂಬೈನಲ್ಲಿ ₹1,61,200, ದೆಹಲಿಯಲ್ಲಿ ₹1,60,920, ಚೆನ್ನೈನಲ್ಲಿ ₹1,61,670, ಹೈದರಾಬಾದ್ ನಲ್ಲಿ ₹1,61,460 ಮತ್ತು ಕೋಲ್ಕತ್ತಾದಲ್ಲಿ ₹1,60,990 ನಷ್ಟಿದೆ.

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತವೆ. ಆಭರಣ ಖರೀದಿಸುವಾಗ ಜಿಎಸ್‌ಟಿ, ಮೇಕಿಂಗ್ ಚಾರ್ಜ್ ಹಾಗೂ ಇತರ ಶುಲ್ಕಗಳು ಹೆಚ್ಚುವರಿಯಾಗಿ ಅನ್ವಯವಾಗಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X