ಒಂಟಿಗಿಂತ ಚೆನ್ನ ಜಂಟಿ

ಒಂಟಿಗಿಂತ ಚೆನ್ನ ಜಂಟಿ
Updated on: 

ವಿಮೆ ಎಲ್ಲರಿಗೂ ಅಗತ್ಯವಾಗಿ ಬೇಕಾಗಿರುವ ವಿಚಾರ. ಈ ಕ್ಷೇತ್ರದಲ್ಲಿ ಸದ್ಯದ ದಿನಮಾನದಲ್ಲಿ ಗ್ರಾಹಕರಿಗೆ ಹಲವಾರು ಆಯ್ಕೆಗಳು ಇವೆ.  ವಿಮೆ ಮಾಡಿಸಿಕೊಳ್ಳುವವರ ಸಾಮರ್ಥ್ಯಕ್ಕೆ ಅನುಗುಣವಾಗಿ ವಿವಿಧ ಯೋಜನೆಗಳೂ ಲಭ್ಯವಿವೆ. ಅದರ ಜತೆ ಉತ್ತಮವಾದ ಲೈಫ್ ಕವರ್ ಕೂಡ ಇದೆ ಎನ್ನುವುದು ಮಹತ್ವಪೂರ್ಣವಾದಂಥ ಸಂಗತಿ. ಇತ್ತೀಚಿನ ದಿನಗಳಲ್ಲಿ ಜಂಟಿಯಾಗಿ ವಿಮೆಯನ್ನು ಹೊಂದುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಮೂಲಕ ವಿಮೆ ಮಾಡಿಕೊಂಡ ವ್ಯಕ್ತಿಯ ಪತ್ನಿಯ ವಿಮೆಯನ್ನೂ ಮಾಡಿಸಿದಂತಾಗುತ್ತದೆ. ಆಯಾ ವ್ಯಕ್ತಿಯ ಅಗತ್ಯಕ್ಕೆ ತಕ್ಕಂತೆ ಯೋಜನೆಗಳು ಸಿಗುತ್ತವೆ.

ಜಂಟಿ ವಿಮೆ ಯೋಜನೆ ಎಂದರೇನು?
ವಿಮೆಯನ್ನು ಹೊಂದುವ ವ್ಯಕ್ತಿ ಮತ್ತೊಬ್ಬನ ಅಥವಾ ಮತ್ತೊಬ್ಬಳ ಜತೆಗೂಡಿ (ವಿಶೇಷವಾಗಿ ಪತ್ನಿ ಅಥವಾ ವ್ಯವಾಹಾರಿಕ ಪಾಲುದಾರ) ಪರಸ್ಪರ ಅವಲಂಬನೆಗಾಗಿ ಪಡೆದುಕೊಳ್ಳುವ ಸುರಕ್ಷತಾ ಯೋಜನೆ. ಮದುವೆ, ವ್ಯಾಪಾರಕ್ಕಾಗಿ ಇದರಿಂದ ಸಿಗುವ ಮೊತ್ತವನ್ನು ಬಳಸಿಕೊಳ್ಳಬಹುದು. ಆಯಾ ವ್ಯಕ್ತಿಗೆ ತಕ್ಕಂತೆ ಏಕಕಂತಿನ ಅಥವಾ ಎರಡು ವಿಧದ ಮೊಬಲಗನ್ನು ಪಡೆದುಕೊಳ್ಳುವ ಅವಕಾಶ ಇದರಲ್ಲಿದೆ.

ಪ್ರಯೋಜನಗಳೇನು?
ಗ್ರಾಹಕನ ಅನಕೂಲಕ್ಕೆ ತಕ್ಕಂತೆ ಬಳಸಬಹುದು. ಮಾತ್ರವಲ್ಲದೆ ವಿಮೆ ಹೊಂದಿರುವ ಇಬ್ಬರು ವ್ಯಕ್ತಿಗಳು ಅದರಲ್ಲಿ ಹಣ ಹೂಡಿಕೆ ಮಾಡುವುದರಿಂದ ಅದಕ್ಕೆ ಹೆಚ್ಚಿನ ಬಲ ಬರುತ್ತದೆ.
ಈ ಯೋಜನೆಯಲ್ಲಿ ಮೊದಲ ಕಂತಿನ ಮೊತ್ತ ಪಾವತಿ ಮಾಡಿದ ಬಳಿಕ ಕಂತಿನ ಮೊತ್ತ ಕಡಿಮೆಯಾಗುತ್ತದೆ. ಹೀಗಾಗಿ ಈ ಯೋಜನೆ ಗ್ರಾಹಕರಿಗೆ ಹೆಚ್ಚಿನ ಹೊರೆಯನ್ನು ಉಂಟುಮಾಡುವುದಿಲ್ಲ.

ಮತ್ತೊಂದು ಪ್ರಮುಖ ಅಂಶವೆಂದರೆ, ವಿಮಾದಾರನ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬಹುದು. ಹೇಗೆಂದರೆ ವಿಮೆ ಪಡೆದುಕೊಂಡ ವ್ಯಕ್ತಿ ನಿರ್ದಿಷ್ಟ ಸಮಯದ ನಂತರ ತನಗೆ ಇಷ್ಟ ಬಂದವರನ್ನು ಅದಕ್ಕೆ ಸೇರ್ಪಡೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಒಂದು ವೇಳೆ ಇಂಥ ವಿಮೆ ಮಾಡಿಸಿಕೊಂಡ ದಂಪತಿ ವಿಚ್ಛೇದನ ಪಡೆದುಕೊಂಡಲ್ಲಿ ಒಬ್ಬರಿಂದ ಒಬ್ಬರು ವಿಮೆಯಿಂದ ಹೊರಗುಳಿವ ಅವಕಾಶ ಕಲ್ಪಿಸಿಕೊಡಲಾಗಿದೆ.

ವಿಮೆ ಮಾಡಿಸಿಕೊಂಡ ವ್ಯಕ್ತಿಯ ಪತ್ನಿ ಆರ್ಥಿಕವಾಗಿ ಸ್ವತಂತ್ರಳಾಗಿಲ್ಲದಿದ್ದಲ್ಲಿ ಹೆಚ್ಚಿನ ನೆರವು ನೀಡುತ್ತದೆ. ಕಂತು ಪಾವತಿ ಮಾಡುವ ವ್ಯಕ್ತಿ ಅಸುನೀಗಿದರೆ ಸಿಗುವ ಮೊತ್ತ ಕುಟುಂಬದ ನೆರವಿಗೆ ಬರುತ್ತದೆ. ದಂಪತಿಗೆ ಮಕ್ಕಳು ಇದ್ದಲ್ಲಿ ಅವರ ಭದ್ರತೆಗೂ ಈ ವಿಮೆ ನೆರವಾಗುತ್ತದೆ.
ವಿಮೆ ಮಾಡಿಸಿಕೊಂಡ ವ್ಯಕ್ತಿ ಏಕಾಏಕಿ ಸಾವಿಗೀಡಾದರೆ, ಅದನ್ನು ಆತ ಮಾಡಿದ ಸಾಲ ತೀರಿಸಲು ಕೂಡ ಬಳಸಲು ಅವಕಾಶ ಉಂಟು. ಪತಿ ಅಥವಾ ಪತ್ನಿ ಅಸುನೀಗಿದ ಸಂದರ್ಭದಲ್ಲಿ ತುರ್ತಾಗಿ ಪಾವತಿ ಮಾಡಬೇಕಾದ ಸಾಲದ ಮೊತ್ತ ಇದ್ದಲ್ಲಿ ಅದನ್ನು ಭರಿಸಲೂ ಈ ವಿಮೆಯಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ.
(ಲೇಖಕರು ಬಜಾಜ್ ಅಲಯನ್ಸ್ ಜೀವ ವಿಮೆಯ ತಾಂತ್ರಿಕ ವಿಭಾಗದ ಮುಖ್ಯಸ್ಥರು)

-ಪಿ.ರವಿ ಕುಟುಂಬ ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com