ಯೋಚಿಸಿ ಖರೀದಿಸಿ

ಯೋಚಿಸಿ ಖರೀದಿಸಿ
Updated on: 

ನಮ್ಮಲ್ಲಿ ಬಹಳಷ್ಟು ಮಂದಿ ಆರೋಗ್ಯ ವಿಮೆ ಹೇಗೆ ಸಹಾಯಕವಾಗುತ್ತದೆ ಎನ್ನುವುದನ್ನು ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳದೆ ಖರೀದಿಸುತ್ತಾರೆ. ಹೆಚ್ಚಿನವರು ತಾವು ಕೆಲಸ ಮಾಡುವ ಕಂಪನಿಯ ಪ್ರಾಥಮಿಕ ಆರೋಗ್ಯ ವಿಮೆಯ ರಕ್ಷಣೆಗೆ ಒಳಪಟ್ಟಿರುತ್ತಾರೆ. ನಿರ್ಣಾಯಕ ಕಾಯಿಲೆಗಳನ್ನು ಹೊರತುಪಡಿಸಿ ಆಗಾಗ ಸಂಭವಿಸುವ ಅನಾರೋಗ್ಯಕ್ಕೆ ಈ ವಿಮೆ ಒಳಪಟ್ಟಿರುತ್ತದೆ. ಆರೋಗ್ಯ ವಿಮೆ ಖರೀದಿಸುವ ವೇಳೆ ಹೆಚ್ಚಿನ ಪ್ರಮಾಣದ ಎಚ್ಚರಿಕೆ ವಹಿಸಬೇಕಾಗುತ್ತದೆ.

ಜೀವನ ಶೈಲಿಯ ಬದಲಾವಣೆಗಳು
ಹೆಚ್ಚಿದ ಒತ್ತಡದೊಂದಿಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೆ ಇರುವುದು, ವ್ಯಾಯಾಮದ ಕೊರತೆ, ಚಟುವಟಿಕೆ ಇಲ್ಲದ ಜೀವನಶೈಲಿಯಿಂದಾಗಿ ಅನಾರೋಗ್ಯದ ಪ್ರಮಾಣ ಹೆಚ್ಚಿದೆ. ಇಂಥ ರೋಗಗಳ ಚಿಕಿತ್ಸಾ ವೆಚ್ಚ ದುಬಾರಿಯಾಗಿದೆ. ಮೂಲ ಆರೋಗ್ಯ ವಿಮೆ ಒದಗಿಸುವ ಹಣದ ಮೊತ್ತಕ್ಕಿಂತ ಹೆಚ್ಚಿರುತ್ತದೆ. ಇದರಿಂದ ಚೇತರಿಸಿಕೊಳ್ಳಲು ಕೆಲವು ಸಮಯ ಬೇಕಾಗುತ್ತದೆ. ಈ ಸಂದರ್ಭದಲ್ಲಿ ಕಂಪನಿಯು ವೇತನ ರಹಿತ ರಜೆ ಘೋಷಿಸುವುದರಿಂದ ವ್ಯಕ್ತಿಯ ಆರ್ಥಿಕ ಮಟ್ಟ ಏರುಪೇರಾಗುತ್ತದೆ.

ಇಂಥ ಸಂದರ್ಭದಲ್ಲಿ ನಿರ್ಣಾಯಕ ಆರೋಗ್ಯ ವಿಮೆಯ ಲಾಭ ಪಡೆಯಬಹುದು.
ಮೂಲ ವಿಮಾ ಪಾಲಿಸಿದಾರರಲ್ಲದ ಪಕ್ಷದಲ್ಲಿಯೂ ನಿರ್ಣಾಯಕ ಆರೋಗ್ಯ ವಿಮೆಯ ಲಾಭವನ್ನು ಸೂಕ್ತ ಕಾಲದಲ್ಲಿ ಹೆಚ್ಚುವರಿ ಅಥವಾ ಪ್ರತ್ಯೇಕವಾದ ವಿಮಾ ಸೌಲಭ್ಯ ಪಡೆಯಬಹುದು.

ಈ ವಿಮಾ ಸೌಲಭ್ಯ ಪೂರ್ವ ಮತ್ತು ನಂತರದ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಸಂಪೂರ್ಣ ಖರ್ಚು ಮತ್ತು ಇತರ ವೆಚ್ಚಗಳನ್ನು ಒಳಗೊಂಡಿರುತ್ತದೆ.
ಯಾವುದೇ ರೀತಿಯ ಚಿಕಿತ್ಸಾ ಖರ್ಚುಗಳನ್ನು ನಿಭಾಯಿಸಲು ಮತ್ತು ದೈನಂದಿನ ಉಳಿತಾಯದ ಜತೆಗೆ ಅದನ್ನು ಸೇರಿಸಿಕೊಳ್ಳಬಹುದು.

ಕಾಯಿಲೆ ಸಂಖ್ಯೆಗಳು
ಯಾವುದೇ ವಿಮಾ ಸೌಲಭ್ಯ ಪಡೆಯಲು ಸೂಕ್ತವಾದ ವಿಮಾ ಸಂಸ್ಥೆಯನ್ನು ಸಂಪರ್ಕಿಸಿ. ಭಾರತೀಯ ವಿಮಾ ನಿಯಂತ್ರಣ ಪ್ರಾಧಿಕಾರದ (ಐಆರ್‌ಡಿಎ) ಮಾರ್ಗಸೂಚನೆಯ ಅನ್ವಯ 12ಕ್ಕೂ ನಿರ್ಣಾಯಕ ಅನಾರೋಗ್ಯಕ್ಕೆ ವಿಮೆ ಇದೆ.

ಅನುಕೂಲಕರ ಪಾಲಿಸಿ
ಹಣವಿಲ್ಲದ ಮರು ಪಾವತಿ ಮತ್ತು ವಿಮಾ ಖರ್ಚುಗಳು ಹಾಗೂ ಚಿಕಿತ್ಸಾ ವೆಚ್ಚವನ್ನು 30 ದಿನಗಳ ಒಳಗಾಗಿ ಪಡೆಯಲು ಅವಕಾಶ ಉಂಟು.

ಫ್ಲೋಟರ್ ಪಾಲಿಸಿ
ಇದರ ಅಡಿಯಲ್ಲಿ ಕುಟುಂಬದ ಯಜಮಾನ, ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಸಹ ಆರೋಗ್ಯ ವಿಮೆ ಪಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.

ಆರಂಭಿಕ ಪಾಲಿಸಿ
ವಯಸ್ಸು ಕಡಿಮೆ ಇದ್ದಲ್ಲಿ ಆರೋಗ್ಯ ವಿಮೆ ನೆರವಿಗೆ ಬರಲಿದೆ.
ಹಿಂದಿನ ಕಾಯಿಲೆಗೆ ಸಂಬಂಧಿಸಿದಂತೆ
ಕೆಲವೇ ಕೆಲವು ವಿಮಾ ಸಂಸ್ಥೆಗಳು ಪೂರ್ವ ಕಾಯಿಲೆಗೆ ವಿಮೆ ನೀಡುತ್ತವೆ.  ಅದೂ ಕೂಡ ನಾಲ್ಕು ತಿಂಗಳ ಬಳಿಕ.

ವಿಮೆ ಮೊತ್ತ
ಕನಿಷ್ಠ ಅಂದಾಜು ಮೊತ್ತ 5 ಲಕ್ಷಕ್ಕಿಂತ ಮೇಲ್ಪಟ್ಟಿದ್ದರೆ ಉತ್ತಮ ಆರೋಗ್ಯ ವಿಮೆ ಪಡೆಯಲು ಅನುಕೂಲವಾಗುತ್ತದೆ.

-ಡಾ.ಅಮರ್‌ನಾಥ್ ಅನಂತ ನಾರಾಯಣನ್
(ಲೇಖಕರು ಭಾರ್ತಿ ಎಕ್ಸಾ ಜನರಲ್ ಇನ್ಶೂರೆನ್ಸ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com