ಮ್ಯೂಚುವಲಯ

ಮ್ಯೂಚುವಲಯ
Updated on: 

ಮ್ಯೂಚುವಲ್ ಫಂಡ್ಗಳ ಬಲವರ್ಧನೆಗಾಗಿ ಕೇಂದ್ರ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಪ್ರಧಾನಮಂತ್ರಿ ಏಜೆಂಟ್ಗಳ ರಿಜಿಸ್ಟ್ರೇಷನ್ಗೆ ಮುಖ್ಯವಾಗಿದ್ದ ಎಎಂಎಫ್ಐ (ಆಂಋಐ) ನ ಶುಲ್ಕ ತಗ್ಗಿಸಿದ್ದಾರೆ. ಈ ಮೂಲಕ ಹೆಚ್ಚು ಹೆಚ್ಚು ಹೂಡಿಕೆಯತ್ತ ಭಾರತೀಯರೂ ಆಸಕ್ತಿ ವಹಿಸಲಿ ಎಂಬ ಉದ್ದೇಶ ಇದೆ. ಅಭಿವೃದ್ಧಿ ರಾಷ್ಟ್ರಗಳಾದ ಚೀನಾ, ಆಸ್ಟ್ರೇಲಿಯಾಗಳಿಗೆ ಹೋಲಿಸಿದಲ್ಲಿ ಈ ನಿಟ್ಟಿನಲ್ಲಿ ಭಾರತ ತೀರಾ ಹಿಂದಿದೆ. ಪ್ರಸ್ತುತ ನಮಗೆ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ 15ನೇ ಸ್ಥಾನ.

ಎಎಂಎಫ್ಐ ಕಾರ್ಯವೇನು?
ಮ್ಯೂಚುವಲ್ ಫಂಡ್ನಲ್ಲಿ ಹೂಡಲು ಆಸಕ್ತಿ ಇರುವವರು ನೇರವಾಗಿ ಹೂಡಲು ಆಗುವುದಿಲ್ಲ. ಇದಕ್ಕೆ ಏಜೆಂಟ್ ಮೂಲಕ ಹೂಡಿಕೆ ಮಾಡಬೇಕಾಗುತ್ತದೆ. ಏಜೆಂಟ್ ಆಗಬೇಕೆಂದರೆ ಎಎಂಎಫ್ಐನಲ್ಲಿ ಆತ ನೋಂದಾಯಿಸಿಕೊಂಡಿರಬೇಕು. ಈ ನೋಂದಣಿ ಅವಧಿ 3 ವರ್ಷದ್ದು.
ದೊಡ್ಡದೊಡ್ಡ ನಗರಗಳ ಜತೆ ಸಣ್ಣ ನಗರಗಳಲ್ಲಿ ಹೂಡಿಕೆ ಹೆಚ್ಚಿಸುವ ಸಲುವಾಗಿ 2012ರ ನವೆಂಬರ್ನಲ್ಲಿ ಎಎಂಎಫ್ಐ ನೋಂದಣಿ ಶುಲ್ಕವನ್ನು ರು. 5000ದಿಂದ ರು. 3000ಕ್ಕೆ ಇಳಿಸಲಾಯಿತು. ಇದರಿಂದ ವರ್ಷಕ್ಕೆ ಏಜೆಂಟ್ಗೆ 1000 ಶುಲ್ಕ ತಗಲುತ್ತದೆ. ಬಳಿಕ ಈ ಮೊತ್ತವನ್ನು 3 ವರ್ಷಕ್ಕೆ ಕೇವಲ ರು. 1, 500 ಎಂದು ನಿಗದಿಪಡಿಸಲಾಯಿತು. ಇದರಿಂದ ವರ್ಷಕ್ಕೆ ಕೇವಲ ರು. 500ನ್ನು ಏಜೆಂಟ್ ನೋಂದಣಿ ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಇದರ ಫಲವಾಗಿ 2012 ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿ 700ಕ್ಕೂ ಹೆಚ್ಚು ಹೊಸ ನೋಂದಣಿಗಳಾದವು. ಹೀಗಾಗಿ ಇನ್ನೂ ಹೆಚ್ಚಿನ ಆಸಕ್ತರು ಬರಲಿ ಎಂಬ ದೃಷ್ಟಿಯಿಂದ ನೋಂದಣಿಯನ್ನು ಉಚಿತ ಮಾಡಲಾಗಿದೆ. ಇದು 5 ತಿಂಗಳ ಅವಧಿಯದಾಗಿದ್ದು, ಫೆಬ್ರವರಿ 2013ರಿಂದ ಜೂನ್  2013ರವರೆಗೆ ಅನ್ವಯವಾಗುತ್ತದೆ. ಇದರಲ್ಲಿ ಹಳೆಯ ಹಾಗೂ ಹೊಸ ನಿಯಮಗಳೂ ಸೇರಿಕೊಳ್ಳುತ್ತವೆ. ಆದರೆ ಉಚಿತ ಪ್ರವೇಶ ಸಿಗುವುದಕ್ಕೆ ಪರೀಕ್ಷೆ ಇದ್ದು, ಅದರಲ್ಲಿ ಉತ್ತೀರ್ಣರಾಗಿ ಪ್ರಮಾಣ ಪತ್ರವನ್ನು ಪಡೆಯಬೇಕಾಗುತ್ತದೆ.
ಎರಡು
ವಿಭಾಗಗಳು...
ಏಜೆಂಟ್ಗಳು
ಇಲ್ಲಿ ಹಣಕಾಸಿಗೆ ಸಂಬಂಧಪಟ್ಟ ವಿಭಾಗಗಳು ಬರಲಿದ್ದು, ಇನ್ಶೂರೆನ್ಸ್ ಏಜೆಂಟ್ಗಳು, ಎಫ್ಡಿ ಏಜೆಂಟ್ಗಳು, ರಾಷ್ಟ್ರೀಯ ಉಳಿತಾಯ ಯೋಜನೆ, ಪಿಪಿಎಫ್ ಇತ್ಯಾದಿ ಫೈನಾನ್ಶಿಯಲ್ಗಳಿಗೆ ಸಂಬಂಧಪಟ್ಟಂಥ ವ್ಯವಹಾರಗಳು ಬರುತ್ತವೆ.
ಬ್ಯುಸಿನೆಸ್ ಕರೆಸ್ಪಾಂಡೆನ್ಸ್
ಈ ಹೊಸ ಯೋಜನೆಯು ಹೆಚ್ಚು ಆಸಕ್ತಿದಾಯಕ. ಇದು ಡೈವರ್ಸಿಫೈಡ್ ಈಕ್ವಿಟಿ ಫಂಡ್, ಫಿಕ್ಸಡ್ ಮೆಚ್ಯುರಿಟಿ ಪ್ಲಾನ್ಸ್ ಮತ್ತು ಇಂಡೆಕ್ಸ್ ಫಂಡ್ಗಳನ್ನು ಮಾತ್ರ ಮಾರುತ್ತದೆ. ಹೀಗಾಗಿ ಈ ವಿಭಾಗಗಳಲ್ಲಿ ಬರುವ ಫಂಡ್ಗಳು ಕಡಿಮೆ ರಿಸ್ಕ್ಗಳನ್ನು ಹೊಂದಿರುತ್ತವೆ. ಇದು ಕರೆಸ್ಪಾಂಡೆನ್ಸ್ಗಳಿಗೆ ಅನುಕೂಲ. ಆದ್ದರಿಂದ ಬ್ಯುಸಿನೆಸ್ ಕರೆಸ್ಪಾಂಡೆನ್ಸ್ಗೆ ಸೇರಬಯಸುವವರು NISM ವತಿಯಿಂದ ನಡೆಸಲ್ಪಡುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ.
ಎಎಂಎಫ್ಐನಡಿ ಈಗಾಗಲೇ 5000 ಜನ ನೋಂದಣಿ ಮಾಡಿಸಿಕೊಂಡಿದ್ದು, ಇದನ್ನು ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದರ ಮುಖ್ಯ ಉದ್ದೇಶ ದೊಡ್ಡ ನಗರಗಳಿಗಷ್ಟೇ ಅಲ್ಲದೇ ಸಣ್ಣ ನಗರಗಳಲ್ಲೂ ಹೂಡಿಕೆ ಹೆಚ್ಚು ಮಾಡುವುದಾಗಿದೆ. ಇದು ದೀರ್ಘಾವಧಿ ಯೋಜನೆಯಾಗಿದ್ದು, ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆ ಮತ್ತಷ್ಟು ಸುಧಾರಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

- ವಿ. ರಮೇಶ್
 ಎಎಂಎಫ್ಐ ನ ಡೆಪ್ಯುಟಿ ಸಿಇಓ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com