ಕೇಂದ್ರ ಸರ್ಕಾರಿ ಸ್ವಾಮ್ಯದ ಕಾರ್ಪೊರೇಷನ್ ಬ್ಯಾಂಕ್ ಗೃಹ ಮತ್ತು ವಾಹನ ಸಾಲಗಳ ಮೇಲೆ ವಿಧಿಸುವ ಬಡ್ಡಿದರಗಳಲ್ಲಿ ಕಡಿತ ಮಾಡಿದೆ. ಸದ್ಯ ಇರುವ ಹಬ್ಬದ ಸಮಯವನ್ನು ಅನುಸರಿಸಿ ಬ್ಯಾಂಕ್ ಶೇ.1.75ರ ವರೆಗೆ ಬಡ್ಡಿದರದಲ್ಲಿ ಇಳಿಕೆ ಮಾಡಿದೆ. ಗೃಹ ಸಾಲದಲ್ಲಿ ಶೇ.0.50ರಷ್ಟು ದರ ತಗ್ಗಿಸಿದೆ. ವಾಹನ ಸಾಲಗಳಲ್ಲಿ ಶೇ.1ರಷ್ಟು ಬಡ್ಡಿ ಕಡಿಮೆಯಾಗಿದೆ. ಗೃಹೋಪಯೋಗಿ ಬಳಕೆ ವಸ್ತುಗಳ ಖರೀದಿಗೆ ನೀಡಲಾಗುವ ಸಾಲದ ಮೊತ್ತ 5 ಲಕ್ಷ ವರೆಗಿನ ಮೊತ್ತಕ್ಕೆ ಶೇ.1.75ರಷ್ಟು ಬಡ್ಡಿದರವನ್ನು ಬ್ಯಾಂಕ್ ವಿಧಿಸಲಿದೆ.