ಮೊಬೈಲ್ ಮೂಲಕ ಹಣ ಪಾವತಿ ಮಾಡುವ ಪ್ರಕ್ರಿಯೆ ಈಗ ಸುಲಭ. ಇದಕ್ಕಾಗಿ ಬೆಂಗಳೂರು ಮೂಲದ ಸಂಸ್ಥೆಯೊಂದು ಹೊಸ ಡಿವೈಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 'ಮೊಬೈಲ್ ಪಾಯಿಂಟ್ ಸೇಲ್ ಡಿವೈಸ್' ಎಂಬ ಹೆಸರಿನ ಹೊಸ ವ್ಯವಸ್ಥೆಗೆ ರು. 300. ಇದರ ವಿಶೇಷತೆ ಏನೆಂದರೆ, ಯಾವುದೇ ಸಮಗ್ರ ಮೊಬೈಲ್ ಕಾರ್ಡ್ ರೀಡರ್‌ಗಿಂತ ಮೂರನೇ ಒಂದರಷ್ಟು ಕಡಿಮೆ ಬೆಲೆ ಹೊಂದಿರುವ ಈ ಡಿವೈಸ್ ಅನ್ನು ದೇಶದಲ್ಲೇ ವಿನ್ಯಾಸಗೊಳಿಸಿ ಸಿದ್ಧಪಡಿಸಲಾಗಿದೆ. ಇದು ಹಗುರ ಮತ್ತು ದೃಢವಾಗಿದ್ದು, ಸ್ಟ್ರೈಪ್ ಮತ್ತು ಚಿಪ್ ಕಾರ್ಡ್ ರೀಡರ್ ಅನ್ನು ಪಿನ್‌ಪ್ಯಾಡ್ ಜತೆಗೆ ಒಂದೇ ಉತ್ಪನ್ನದಲ್ಲಿ ಸೇರಿಸಲಾಗಿದೆ. ವಿವರಕ್ಕೆ www.ezetap.com ಅನ್ನು ಸಂಪರ್ಕಿಸಿ.