

ರಾಜಕೀಯ ರೀತಿನೀತಿಗಳು ದೇಶದ ಅರ್ಥ ವ್ಯವಸ್ಥೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದಕ್ಕೆ 2013ರಲ್ಲಿ ಭಾರತಕ್ಕಾದ ಅನುಭವಗಳೇ ಸಾಕ್ಷಿ. ಒಂದು ಕಡೆ ರಾಜಕೀಯ ಗೊಂದಲವಾದರೆ ಮತ್ತೊಂದೆಡೆ ಹಣದುಬ್ಬರ ಸಮಸ್ಯೆಯನ್ನು ಭಾರತ ಸರ್ಕಾರ ಎದುರಿಸಬೇಕಾಯಿತು. 2013ರಲ್ಲಿ ಒದಗಿದ ಆರ್ಥಿಕ ಸಂಕಷ್ಟ ಮತ್ತು 2014ರಲ್ಲಿ ಹೊಸ ಸರ್ಕಾರ ರೂಪಿಸಬಹುದಾದ ನೂತನ ಆರ್ಥಿಕ ನೀತಿಯಿಂದಾಗಿ ಮಾರುಕಟ್ಟೆ ಪ್ರವೇಶಿಸಲು ಹೂಡಿಕೆದಾರರು ಹಿಂಜರಿಯುತ್ತಿರುವುದು ಸುಳ್ಳಲ್ಲ.
2013ರ ಆರ್ಥಿಕ ಬೆಳವಣಿಗೆಯಲ್ಲಿ ಸಂಕಷ್ಟಗಳ ಸರಮಾಲೆಗಳನ್ನೇ ಎದುರಿಸಿದ ಭಾರತ, ಹಣದುಬ್ಬರ ಸರಿಗೊಳಿಸಲು ಸರಕು ಸಾಗಣೆ, ಡೀಸೆಲ್ ಬೆಲೆ ಏರಿಸಿ, ಬಡ್ಡಿ ದರವನ್ನು ಕಡಿತಗೊಳಿಸಬೇಕಾಯಿತು. ಇದಕ್ಕೆಲ್ಲಾ ಕಾರಣವಾದ್ದು ಬೃಹತ್ ಮಾರುಕಟ್ಟೆ ಎಂದೇ ಬಿಂಬಿತವಾದ ಅಮೇರಿಕದ ವ್ಯಾಪಾರ ವಹಿವಾಟಿನಲ್ಲಾದ ಸಂಧಿಗ್ದತೆ. ಇದಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ರಘುರಾಮ್ ರಾಜನ್, ಚಿನ್ನದ ಮೇಲಿನ ಆಮದು ಸುಂಕ ಏರಿಕೆ, ಆರ್ಬಿಐನ ಠೇವಣಿ ಮತ್ತು ವಿದೇಶಿ ಕರೆನ್ಸಿ ಮೇಲೆ ಸಾಲ, ತೈಲ ಕಂಪನಿಗಳ ಸಹಕಾರ ಪಡೆಯುವುದಕ್ಕಾಗಿ ವಿಶೇಷ ಸ್ವಾಪ್ ವಿಂಡೋ, 70 ಶತಕೋಟಿ ಡಾಲರ್ನ ಸರ್ಕಾರಿ ಭದ್ರತೆ ಮತ್ತು ಕಾರ್ಪೋರೇಟ್ ಬಾಂಡ್ಗಳಲ್ಲಿ ವಿದೇಶಿ ಶೈಕ್ಷಣಿಕ ಹೂಡಿಕೆದಾರರ (ಎಫ್ಐಐ) ಬಂಡವಾಳ ಮಿತಿ ಹೆಚ್ಚಳಗೊಳಿಸಿದರು.
ಈ ಎಲ್ಲಾ ಕ್ರಮಗಳು ಡಾಲರ್ ಎದುರು ರುಪಾಯಿಯ ಮೌಲ್ಯವನ್ನು ರು. 62ಕ್ಕೆ ಏರಿಸಿತು. ಒಟ್ಟಿನಲ್ಲಿ ವರ್ಷಾಂತ್ಯಕ್ಕೆ ರುಪಾಯಿ ಮೌಲ್ಯ ಶೇ. 10ರಷ್ಟು ಏರಿಕೆ ಕಂಡರೂ ಡಾಲರ್ ವಿರುದ್ಧ ಶೇ. 13ರಷ್ಟು ಮೌಲ್ಯ ಕಳೆದುಕೊಂಡಿತು. ಆರ್ಬಿಐ ಸಪ್ಟೆಂಬರ್ ನಂತರ ಹಣದುಬ್ಬರವನ್ನು ಕಡಿಮೆಗೊಳಿಸಲು 25ರ ಮೂಲಾಂಕದಲ್ಲಿ ಪ್ರತಿ ಎರಡು ಬಾರಿ ಬಡ್ಡಿ ದರವನ್ನು ಏರಿಸಿದ್ದು, ಇದರಿಂದ ಆಹಾರ ಸಾಮಗ್ರಿಗಳ ಬೆಲೆಯೂ ನಾಲ್ಕು ತಿಂಗಳಲ್ಲಿ ಶೇ.7 ಏರಿಕೆಯಾಯಿತು. ಈ ಮಧ್ಯೆ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತು.
ಫೆಡ್ ಟಾಪರ್ ಆಗಲು 2014 ಜನವರಿಯಿಂದ ಪ್ರತಿ ತಿಂಗಳು 10 ಬಿಲಿಯನ್ ಡಾಲರ್ ಮೌಲ್ಯದ ಸ್ವತ್ತು ಖರೀದಿಗೆ ತೊಡಗುತ್ತದೆ. ದೀರ್ಘಾವಧಿಯಲ್ಲಿ 40 ಬಿಲಿಯನ್ ಡಾಲರ್ (ಮಾಹಿತಿಯಂತೆ 45 ಬಿಲಿಯನ್) ಮತ್ತು ಅಡಮಾನ ಬೆಂಬಲಿತ ಭದ್ರತಾ ಪತ್ರಗಳನ್ನು 35 ಬಿಲಿಯನ್ ಡಾಲರ್ಗೆ ಕೊಳ್ಳುವ ಸಾಧ್ಯತೆಗಳಿವೆ. 2015ರವರೆಗೆ ದರ ಏರಿಕೆ ಮುಂದುವರಿಯುವ ಸಾಧ್ಯತೆ ಎನ್ನುತ್ತಾರೆ ಮುಂದಿನ ಫೆಡ್ ಅಧ್ಯಕ್ಷ ಜಾನೆಟ್ ಯೆಲ್ಲೆನ್.
2014ರ ನಿರೀಕ್ಷೆ
2014ರ ಮೊದಲಾರ್ಧದಲ್ಲಿ ಚುನಾವಣೆ ನಿರೀಕ್ಷೆ, ಫಲಿತಾಂಶದ ಮೂಲಕ ಮತ್ತು ಆರ್ಬಿಐನ ವಿನಿಮಯ ವಿಂಡೋ ಮತ್ತು ಬ್ಯಾಂಕ್ ಸಾಲದ ಮೂಲಕ ವಿದೇಶಿ ವಿನಿಮಯವನ್ನು ಸುಧಾರಿಸಬಹುದು. ಇದರಿಂದ ರುಪಾಯಿ ಮೌಲ್ಯ ಸದೃಢವಾದರೆ ಮತ್ತು ದ್ವಿತೀಯಾರ್ಧದಲ್ಲಿ ನೂತನ ಸರ್ಕಾರದ ಆರ್ಥಿಕ ನೀತಿ ಮತ್ತು ಪರಿಷ್ಕರಣೆ ಮೇಲೆ ಆಶಾದಾಯಕ ಕ್ರಮಗಳಿಂದ ಆರ್ಥಿಕ ಚೇತರಿಕೆಯನ್ನು ನಿರೀಕ್ಷಿಸಬಹುದು. ಮೂಲ ಸೌಕರ್ಯದ ಉತ್ಪಾದಕತೆಗೆ ಸೇರಿಸುವ ಬಡ್ಡಿ ದರದಿಂದ ಹಣದುಬ್ಬರ ಉಂಟಾಗುವ ಸಾಧ್ಯತೆಯೂ ಇದೆ. ಸರಕು ಬೆಲೆಗಳು ಜಾಗತಿಕ ವ್ಯಾಪಾರ ವಹಿವಾಟಿನಲ್ಲಿ ಸಹಕಾರಿಯಾಗಲಿವೆ.
ಎಲ್ ಅಂಡ್ ಟಿ ಯು 2013ರ ಡಿಸೆಂಬರ್ 31ಕ್ಕೆ, 8,00,000 ಗ್ರಾಹಕರಿಂದ ರು. 17,000 ಕೋಟಿ ಮ್ಯೂಚ್ಯುಯಲ್ ಫಂಡ್ ಹೊಂದಿತ್ತು. ಮ್ಯೂಚ್ಯುಯಲ್ ಫಂಡ್ಗಳು ಭಾರತದ ಆರ್ಥಿಕ ಅಭಿವೃದ್ಧಿಗೆ ಉತ್ತಮ ಭದ್ರತೆಯನ್ನು ಒದಗಿಸುತ್ತದೆ. ವೃತ್ತಿಪರ ಹೂಡಿಕೆದಾರರು ಮತ್ತು ಖಾಸಗಿ ಹೂಡಿಕೆಯನ್ನು ಬದಲಾಯಿಸುವ ಅವಕಾಶವನ್ನು ಒದಗಿಸಬೇಕು.
(ಲೇಖಕರು ಎಲ್ ಆ್ಯಂಡ್ ಟಿ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ನ ಈಕ್ವಿಟಿ ವಿಭಾಗದ ಮುಖ್ಯಸ್ಥರು)
-ಸೌಮೇಂದ್ರ ನಾಥ್ ಲಾಹಿರಿ