ಮೊಬೈಲ್ ಬಳಕೆಯಿಂದ ಮೆದುಳು ಕ್ಯಾನ್ಸರ್ ಬರುವುದಿಲ್ಲ. ಹೀಗೆಂದು ವಿಶ್ವ ಆರೋಗ್ಯ ಸಂಸ್ಥೆಯ ರೇಡಿಯೇಷನ್ ಮತ್ತು ಪರಿಸರ ಆರೋಗ್ಯ ಘಟಕದ ಮೊದಲ ಸಂಯೋಜನಾಧಿಕಾರಿ ಮೈಕೆಲ್ ರೆಪಚೋಲಿ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಸಂಶೋಧನೆಗಳಲ್ಲಿಯೂ ಮಾನವನ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದರ ಬಗ್ಗೆ ಯಾವುದೇ ಆಧಾರ ಲಭ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.