ಭಾರ್ತಿ - ರಿಲಯನ್ಸ್ ಜಿಯೋ ಒಪ್ಪಂದ

Updated on: 

ದೂರಸಂಪರ್ಕ ಮೂಲ ಸೌಕರ್ಯಗಳನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಭಾರ್ತಿ ಏರ್‌ಟೆಲ್ ಲಿಮಿಟೆಡ್ ಮತ್ತು ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಇದರ ಪ್ರಕಾರ ಉಭಯ ಕಂಪನಿಗಳು ದೂರಸಂಪರ್ಕ ಕ್ಷೇತ್ರದಲ್ಲಿ ಪರಸ್ಪರ ಮೊಬೈಲ್ ಟವರ್ ಮತ್ತು ತಾಂತ್ರಿಕ ವಿಚಾರಗಳ ಹಂಚಿಕೆ ಮಾಡಿಕೊಳ್ಳಲಿವೆ.  ರಿಲಯನ್ಸ್ ಜಿಯೋ ಇನ್ಫೊಕಾಮ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್)ನ ಸಹವರ್ತಿ ಸಂಸ್ಥೆಯಾಗಿದೆ. ಇದು ದೇಶದ 22 ದೂರಸಂಪರ್ಕ ವಲಯಗಳಲ್ಲಿ ಪರವಾನಗಿ ಹೊಂದಿದೆ.
ಭಾರ್ತಿ ಏರ್‌ಟೆಲ್ 11 ದೂರಸಂಪರ್ಕ ವಲಯಗಳಲ್ಲಿ 35,376 ಟವರ್‌ಗಳನ್ನು ಹೊಂದಿದೆ. 1,75,705 ಕಿಲೋಮೀಟರ್‌ನಷ್ಟು ಆಪ್ಟಿಕ್ ಫೈಬರ್ ಕೇಬಲ್ ಸಂಪರ್ಕ ಜಾಲವನ್ನು ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com