ಕಾಸು ಕಳಿಸು

ಕಾಸು ಕಳಿಸು
Updated on: 

ನಿಮ್ಮ ಸಂಬಂಧಿಕರು ಯಾರಾದರೂ ವಿದೇಶಗಳಲ್ಲಿ ನೆಲೆಸಿದ್ದರು ಅವರು ನಿಮಗೆ ಹಣವನ್ನು ಕಳುಹಿಸುತ್ತಿರಬಹುದು. ಈ ಸಂದರ್ಭದಲ್ಲಿ ನಿಮಗೆ ಹಣದ ರವಾನೆ ಮಾಡುವ ಬಗ್ಗೆ ಕೇಳಿಯೇ ಇರುತ್ತೀರಿ. ಏಕೆಂದರೆ ನಿಮ್ಮ ಸಂಬಂಧಿಕರು ಅವರು ಇದ್ದ ಸ್ಥಳದಿಂದ ಬೇರೆಡೆಗೆ ವಲಸೆ ಹೋಗಿರುತ್ತಾರೆ. ಹೀಗಾಗಿ ಈ ಎರಡು ಶಬ್ದಗಳು ಎಲ್ಲರಿಗೂ ಇತ್ತೀಚಿನ ದಿನಗಳಲ್ಲಿ ಪರಿಚಿತವೇ ಆಗಿ ಹೋಗಿದೆ.
ವಿದೇಶಗಳಿಗೆ ಉದ್ಯೋಗಾರ್ಥವಾಗಿ ಹೋಗಿ ನೆಲೆಸುವವರಿದ್ದಾರೆ. ಅಂಥವರಿಗೆ ಹಣ ವರ್ಗಾವಣೆ ಅನಿವಾರ್ಯ. ದೇಶದ ಗ್ರಾಮೀಣ ಪ್ರದೇಶಗಳ ಹಲವಾರು ಮನೆಗಳಿಗೆ ಹಣ ವರ್ಗಾವಣೆಯೇ ಪ್ರಮುಖ ಜೀವನಾಶ್ರಯ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ಜನರು ಹಣ ವರ್ಗಾವಣೆ ಮಾಡುವ ವಿಧಾನಗಳು ಈ ಕೆಳಗಿನಂತಿವೆ.
ಬ್ಯಾಂಕ್‌ಗಳು
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬ್ಯಾಂಕ್‌ಗಳು ಹಣ ವರ್ಗಾವಣೆ ಮಾಡುವ ಸೇವೆಯಲ್ಲಿ ಗ್ರಾಹಕರಿಗೆ ನೀಡುತ್ತಿವೆ. ಇದಕ್ಕಾಗಿ ಹಣ ವರ್ಗಾವಣೆ ಮಾಡುವ ವ್ಯಕ್ತಿ ಆಯಾ ಬ್ಯಾಂಕ್‌ನ ಶಾಖೆಗೆ ತೆರಳಿ ತಮಗೆ ಬೇಕಾದ ವ್ಯಕ್ತಿಯ ಖಾತೆಗೆ ಹಣ ಕಳುಹಿಸುತ್ತಾರೆ. ಇದಕ್ಕಾಗಿ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್‌ಫರ್ (ಎನ್‌ಇ ಎಫ್‌ಟಿ) ಮಾಧ್ಯಮವನ್ನು ಅವರು ಆಯ್ಕೆ ಮಾಡುತ್ತಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣ ವರ್ಗಾವಣೆಗೆ ಸಂಬಂಧಿಸಿ ಹಲವು ಸಂಸ್ಥೆಗಳು ಕೆಲಸ ಮಾಡುತ್ತವೆ. ಇದು ವಿದೇಶಗಳಿಗೆ ತೆರಳಿದವರ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಜನಪ್ರಿಯತೆ ಪಡೆದಿದೆ ಎಂದರೆ ತಪ್ಪಾಗಲಾರದು. ಸಾಂಪ್ರದಾಯಿಕವಾಗಿ ಇರುವಂಥ ಅಂತಾರಾಷ್ಟ್ರೀಯ ಹಣ ವರ್ಗಾವಣೆ ಕ್ರಮದಲ್ಲಿ ಹಣ ಕಳುಹಿಸುವ ವ್ಯಕ್ತಿ ಇಂಥ ಸೇವೆಯನ್ನು ನೀಡುವ ಕೇಂದ್ರಕ್ಕೆ ತೆರಳಬೇಕಾಗುತ್ತದೆ. ಅಲ್ಲಿ ಸಂಬಂಧಿತ ದಾಖಲೆಗಳನ್ನು ತೋರಿಸಿದ ಬಳಿಕ ಹಣ ಕಳುಹಿಸಲಾಗುತ್ತದೆ.
ಆದೇ ರೀತಿಯಲ್ಲಿ ಮತ್ತೊಂದು ವ್ಯವಸ್ಥೆಯೂ ಇದೆ. ಕೆಲವು ವ್ಯವಸ್ಥೆಯಲ್ಲಿ ಹಣ ಸ್ವೀಕರಿಸುವವನ ಕಾರ್ಡ್‌ಗೆ ನೇರವಾಗಿ ಹಣವನ್ನು ಕಾಲ್ ಸೆಂಟರ್ ಮೂಲಕ ಕಳುಹಿಸುವ ವಿಧಾನವೂ ಇದೆ. ಇನ್ನೊಂದು ವಿಧಾನವಿದೆ. ಅದು ಹೇಗೆಂದರೆ ಖಾತೆಗೆ ಹಣ ವರ್ಗಾವಣೆ. ಈ ವ್ಯವಸ್ಥೆಯಲ್ಲಿ ಗ್ರಾಹಕರು ತಮ್ಮ ಪ್ರೀತಿ ಪಾತ್ರರಾದ ವ್ಯಕ್ತಿಗಳಿಂದ ನೇರವಾಗಿ ಹಣ ಪಡೆಯಬಹುದು. ಹಣ ಕಳುಹಿಸುವ ವ್ಯಕ್ತಿ ಅಂತಾರಾಷ್ಟ್ರಿಯವಾಗಿ ಕಣ ಕಳುಹಿಸುವ ಕೇಂದ್ರಕ್ಕೆ ತೆರಳದೆ ಕಳುಹಿಸಬಹುದು. ಕೇವಲ ಏಜೆಂಟ್ ಒಬ್ಬನ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಿದರೆ, ಅವರು ಯಾರ ಖಾತೆಗೆ ಹಣ ಕಳುಹಿಸಬೇಕಾಗಿರುತ್ತದೆಯೋ ಅಲ್ಲಿ ಕಳುಹಿಸುತ್ತಾರೆ.
ಆನ್‌ಲೈನ್ ವ್ಯವಸ್ಥೆ
ಇತ್ತೀಚಿನ ದಿನಗಳಲ್ಲಿ ಈ ವ್ಯವಸ್ಥೆಯೇ ಹೆಚ್ಚು ಜನಪ್ರಿಯವಾಗುತ್ತಿದೆ. ವೆಬ್ ಆಧಾರಿತ ವ್ಯವಸ್ಥೆಯಲ್ಲಿ ಅದನ್ನು ಮಾಡಲಾಗುತ್ತಿದೆ. ಆನ್‌ಲೈನ್ ಬ್ಯಾಂಕಿಂಗ್ ಲಾಗಿನ್ ವ್ಯವಸ್ಥೆ ಇರುವವರು ಇದರ ಜತೆಗೆ ಇಂಟರ್‌ನೆಟ್ ಸಂಪರ್ಕ ಪಡೆಯಬೇಕು ಎನ್ನುವುದು ಗಮನಾರ್ಹ. ಇಂಥ ವ್ಯವಸ್ಥೆಯಲ್ಲಿ ಕ್ಷಣ ಮಾತ್ರದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹಣ ವರ್ಗಾವಣೆ ಮಾಡಲಾಗುತ್ತದೆ.
ಹೊಸ ತಂತ್ರಜ್ಞಾನ
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಅನ್ನು ಖರೀದಿಸುವವರ ಸಂಖ್ಯೆ ವೃದ್ಧಿಸಿದೆ. ಹೀಗಾಗಿ ಮೊಬೈಲ್ ಮೂಲಕವೇ ಹಣ ವರ್ಗಾವಣೆಯೂ ನಡೆಯುತ್ತಿದೆ. ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಅಂಕೆ- ಸಂಖ್ಯೆಯ ಪ್ರಕಾರ 4.90 ದಶಲಕ್ಷ ಮೊಬೈಲ್ ಫೋನ್ ಬಳಕೆದಾರರು ಪ್ರತಿ ತಿಂಗಳು ಸೇರ್ಪಡೆಯಾಗುತ್ತಿದ್ದಾರೆ. ಅದಕ್ಕೆ ಪೂರಕವಾಗಿ ವಿವಿಧ ರೀತಿಯ ಹಣ ವರ್ಗಾವಣೆ ಮಾಡುವ ತಂತ್ರಜ್ಞಾನ ಮಾಡುವ ವಿಧಾನಗಳೂ ಜಾರಿಯಲ್ಲಿವೆ.
(ಲೇಖಕರು ಎಕ್ಸ್‌ಪ್ರೆಸ್ ಮನಿ ಸಂಸ್ಥೆಯ ಉಪಾಧ್ಯಕ್ಷ ಮತ್ತು ವ್ಯವಹಾರ ವಿಭಾಗದ ಮುಖ್ಯಸ್ಥ)



-ಸುಧೇಶ್ ಗಿರಿಯಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com