ಮೇ 16ರಂದು ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸುದ್ದಿ ವಾಹಿನಿಗಳು ತಮ್ಮ ಜಾಹೀರಾತು ದರದಲ್ಲಿ ಭಾರಿ ಏರಿಕೆ ಮಾಡಿದ್ದವು. ಪ್ರತಿ ಹತ್ತು ಸೆಕೆಂಡಿನ ಜಾಹೀರಾತು ಸ್ಲಾಟ್ಗೆ ರು. 10 ಸಾವಿರದಿಂದ ರು. 2 ಲಕ್ಷದವರೆಗೆ ಏರಿಕೆ ಮಾಡಿದ್ದವಂತೆ. ಹಾಲಿ ನಡೆಯುತ್ತಿರುವ ಐಪಿಎಲ್ 7 ಸೀಸನ್ನಲ್ಲಿ ಹತ್ತು ಸೆಕೆಂಡಿನ ಜಾಹೀರಾತಿಗೆ ರು. 5 ಲಕ್ಷ ನಿಗದಿ ಮಾಡಿವೆಯಂತೆ. ದೇಶಾದ್ಯಂತದ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಜಾಹೀರಾತು ದರ ಏರಿಕೆ ಮಾಡಲು ಮುಂದಾಗಿದ್ದವಂತೆ.