

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೊಮ್ಮೆ ರು.1 ಕಡಿತಗೊಳ್ಳಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಕುಸಿದಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆ ಇಳಿಕೆ ನಿರ್ಧಾರಕ್ಕೆ ಬಂದಿವೆ.
ಒಂದೊಮ್ಮೆ ಕಡಿತ ಮಾಡಿದ್ದೇ ಆದಲ್ಲಿ ಏಳನೇ ಬಾರಿ ಪೆಟ್ರೋಲ್ ಹಾಗೂ ಮೂರನೇ ಬಾರಿ ಡೀಸೆಲ್ ಬೆಲೆಯನ್ನು ಇಳಿಸಿದಂತಾಗುತ್ತದೆ. ಇನ್ನು ಎರಡು ಮೂರು ದಿನದೊಳಗೆ ಪ್ರಕಟಣೆ ಹೊರ ಬೀಳುವ ಸಾಧ್ಯತೆ ಇದೆ.