ವಾಣಿಜ್ಯ

ಪೇಟೆ ಸೇರಲಿವೆ ಸರ್ಕಾರಿ ಷೇರು

ಪೇಟೆ ಸೇರಲಿವೆ ಸರ್ಕಾರಿ ಷೇರು
Published On :

ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಕೇಂದ್ರ ಸರ್ಕಾರದ ಷೇರು ಮಾರಾಟಕ್ಕೆ ಕಾಲ ಕೂಡಿ ಬಂದಿರುವಂತಿದೆ. ಸೆಪ್ಟೆಂಬರ್‌ನಲ್ಲೇ ಬೃಹತ್ ಪ್ರಮಾಣದಲ್ಲಿ ಷೇರುಗಳು ಪೇಟೆಹೆ ಬರುವ ಸಂಭವವಿದೆ.

ಮುಕ್ತ ಮಾರಾಟದ ವ್ಯವಸ್ಥೆಯಂತೆ, ದಿಢೀರ್ ಮಾರಾಟ ಆರಂಭವಾಗಬಹುದು. ಈ ಮಾರಾಟದ ವೈಶಿಷ್ಟ್ಯ ಎಂದರೆ ಬಿಡಿ ವ್ಯವಹಾರಸ್ಥರಿಗೆ(ರೀಟೆಲ್) ನಿರ್ದಿಷ್ಟ ಪ್ರಮಾಣದ ಷೇರುಗಳನ್ನು ಮೀಸಲಾಗಿಡುವುದರ ಜತೆಯಲ್ಲೇ ಸ್ವಲ್ಪ ರಿಯಾಯಿತಿಯನ್ನೂ ನೀಡುವ ವ್ಯವಸ್ಥೆಯೂ ಆಗಿದೆ. ಮುಕ್ತ ಪೇಟೆಗೆ ಮೊದಲು ಬರುವ ಕಂಪನಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅನಂತರ ಓಎನ್‌ಜಿಸಿ, ಹಿಂದೂಸ್ತಾನ್ ಕೋಲ್ ಇಂಡಿಯಾ, ಎನ್‌ಎಚ್‌ಸಿಸಿ ಅದೆಲ್ಲ ಮುಂದಿನ ತಿಂಗಳು. ಹಿಂದೂಸ್ತಾನ್ ಏರೋನಾಟಿಕ್ಸ್ ಷೇರು ಮಾರಾಟ ಹೊಸ ಷೇರುಗಳ ಮಾರಾಟ ಪದ್ಧತಿಯಲ್ಲಿ ಪೇಟೆಗೆ ಬರಲಿದೆ. ಈ ಮಾರಾಟಕ್ಕೆ ತಕ್ಕ ವ್ಯವಸ್ಥೆ ಆಗಿರುವಂತೆ ಕಂಡು ಬರುತ್ತಿದೆ. ಕೆಲವು ನೌಕರ-ಕಾರ್ಮಿಕ ಸಂಘಟನೆಗಳು ಮಾರಾಟವನ್ನು ವಿರೋಧಿಸಿದ್ದರೂ, ಸರ್ಕಾರ ಅದನ್ನು ಲೆಕ್ಕಕ್ಕೆ ಇಟ್ಟಿಲ್ಲ.

ಈಗಿನ ಚಿಂತನೆಯಂತೆ, ಮಾರಾಟಕ್ಕೆ ಎರಡನೇ ದಿನಗಳ ನೋಟಿಸ್ ಕೊಡಲಾಗುವುದಂತೆ. ಅಷ್ಟು ಅಲ್ಪಾವಧಿಯಲ್ಲಿ ಅಗತ್ಯವಾದ ಹಣವನ್ನು ಹೊಂದಿಸುವುದು ಸಾಮಾನ್ಯರಿಗೆ ಕಷ್ಟವಾಗಬಹುದು. ಅದಕ್ಕೆ ಈಗಾಗಲೇ ಅನೌಪಚಾರಿಕವಾಗಿ ಮಾರಾಟದ ಪ್ರಕಟಣೆ ಹೊರ ಬಿದ್ದಿರುವುದು.

ಮೇಲೇರಿದ ಸೆನ್ಸೆಕ್ಸ್
ಈಚಿನ ವಾರಗಳಲ್ಲಿ ಮುಂಬೈ ಸ್ಟಾಕ್ ಎಕ್ಸೆಚೆಂಚ್‌ನ ಸಂವೇದಿ ಸೂಚ್ಯಂಕ ಮೇಲ್ಮಟದಲ್ಲೇ ಇದೆ. ಅದು ಇನ್ನೂ ಎತ್ತರಕ್ಕೆ ಹೋಗುವುದು ಖಚಿತವಾದರೂ, ಅದರಿಂದ ಮೌಲ್ಯ ಹೆಚ್ಚಾಗುವುದು ದೊಡ್ಡ ರಾಜಾ ಷೇರುಗಳಿಗೆ ಮಾತ್ರ. ಸಾಮಾನ್ಯ ವರ್ಗದ ಷೇರುಗಳ ಬೆಲೆಗಳಲ್ಲಿ ಹೇಳಿಕೊಳ್ಳುವಂಥ ಏರಿಕೆ ಕಂಡು ಬಂದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಸೆನ್ಸೆಕ್ಸ್ -30,000ರ ಗಡಿಯನ್ನು ದಾಟಬಹುದು.

2020ರ ವೇಳೆಗೆ ಅದು 50,000 ಆದರೂ ಆಶ್ಯರ್ಯವಿಲ್ಲವಂತೆ. ಮುಂದೆ ಬರಲಿರುವ ದೊಡ್ಡ ಮಾರಾಟದಲ್ಲಿ ಸ್ವಲಪ್ಪ ತೊಂದರೆಗಳೂ ಕಾಣಿಸಿಕೊಳ್ಳಬಹುದು. ಅನೇಕ ಬೃಹತ್ ಕಂಪನಿಗಳಲ್ಲಿ ವಿದೇಶಿ ಹೂಡಿಕೆ ಸಂಸ್ಥೆಗಳು ಹೂಡಬಹುದಾದ ಬಂಡವಾಳದ ಮಿತಿಯ ಗಡಿ ದಾಟಿವೆ. ಹೀಗಾಗಿ ಆ ಷೇರುಗಳ ಮಾರಾಟವನ್ನು ಯಶಸ್ವಿಯಾಗುವಂತೆ ಮಾಡುವುದು ಸ್ವದೇಶಿ ಕಂಪನಿಗಳ ಹೊಣೆಯಾಗಿರುತ್ತದೆ. ಆ ಷೇರುಗಳು ದುಬಾರಿಯಾಗಿದ್ದರಿಂದ ಸಾಮಾನ್ಯರಿಗೆ ನಿಲುವಂಥ ವ್ಯವಹಾರ ಅಲ್ಲ ಇದು. ಇನ್ನು ಮುಂದಿನ ರ್ಯಾಲಿಗಳಲ್ಲಿ ವಿಶಾಲವಾದ ಬುನಾದಿಯ ಬೆಂಬಲದಿಂದಲೇ ಬೇಕಾಗುತ್ತದೆ. ಇವೆಲ್ಲದರ ನಡುವೆ ಅಮೆರಿಕದಲ್ಲಿ ಬಡ್ಡಿ ದರದಲ್ಲಿ ಏರುಪೇರಾದರೆ ಇನ್ನಷ್ಟು ಗೊಂದಲ. ನೆನಪಿನಲ್ಲಿರಲಿ... ಒಳ್ಳೆಯ ಗುಣಮಟ್ಟದ ಷೇರುಗಳಿಗೆ ಇದು ಸಕಾಲ. ಎಲ್ಲ ಷೇರುಗಳಿಗೂ ಅಲ್ಲ. ಸರ್ಕಾರಿ ಕಂಪನಿಗಳ ಷೇರುಗಳ ಮಾರಾಟದ ಸಮಯದಲ್ಲಿ ಖಾಸಗಿ ಕಂಪನಿಗಳು ತಮ್ಮ ಷೇರು ಮಾರುವುದನ್ನು ಮುಂದಕ್ಕೆ ಹಾಕಬೇಕೆಂದು ಸರ್ಕಾರ ಮನವಿ ಮಾಡುವ ಸಂಭವವಿದೆ.

-ಸತ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.