ಕಾರು ಮಾರಾಟ ಹೆಚ್ಚಳ

ದೇಶದಲ್ಲಿ ಕಾರು ಮಾರಾಟ ಗಣನೀಯವಾಗಿ ಏರಿಕೆ ಕಂಡಿದೆ. ಪ್ರಸಕ್ತ ವರ್ಷದ ಜುಲೈನಲ್ಲಿ ಮಾರುತಿ ಸುಜುಕಿ, ಹುಂಡೈ, ಟಾಟಾ ಮೊಟಾರ್ಸ್, ಹೋಂಡಾ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ದೇಶದಲ್ಲಿ ಕಾರು ಮಾರಾಟ ಗಣನೀಯವಾಗಿ ಏರಿಕೆ ಕಂಡಿದೆ. ಪ್ರಸಕ್ತ ವರ್ಷದ ಜುಲೈನಲ್ಲಿ ಮಾರುತಿ ಸುಜುಕಿ, ಹುಂಡೈ, ಟಾಟಾ ಮೊಟಾರ್ಸ್, ಹೋಂಡಾ ಕಂಪನಿ ಕಾರುಗಳ ಮಾರಾಟದಲ್ಲಿ ಏರಿಕೆ ದಾಖಲಿಸಿವೆ. ಎಲ್ಲ ಕಂಪನಿಗಳ ಮಾರಾಟ ಎರಡಂಕಿ ಏರಿಕೆ ಕಂಡಿದ್ದು ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಇದು ಉತ್ತೇಜನ ನೀಡಿದೆ.

ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಕಂಪನಿಯ ವಾಹನಗಳು ಮಾರಾಟ ಶೇ.22.5ರಷ್ಟು ಏರಿಕೆ ಕಂಡಿದೆ.ಕಳೆದ ವರ್ಷದ ಜುಲೈನಲ್ಲಿ ಕಂಪನಿಯ 90,093 ವಾಹನಗಳು ಮಾರಾಟವಾಗಿದ್ದರೆ ಈ ವರ್ಷದ ಜುಲೈನಲ್ಲಿ 1,10,405 ವಾಹನಗಳು ಮಾರಾಟ ಕಂಡಿವೆ. ಆಲ್ಟೋ, ವ್ಯಾಗನ್‍ಆರ್ ಸೇರಿದಂತೆ ಸಣ್ಣ ಗಾತ್ರದ ಕಾರುಗಳ ಮಾರಾಟದಲ್ಲಿ ಶೇ.31.3ರಷ್ಟು ಏರಿಕೆ ಕಂಡಿದೆ ಎಂದು ಕಂಪನಿ ತಿಳಿಸಿದೆ.

ಕಾಂಪ್ಯಾಕ್ಟ್ ವಲಯದಲ್ಲಿ ಸ್ವಿಫ್್ಟ, ಎಸ್ಟೈಲೊ, ರಿಟ್ಜ್, ಡಿಸೈರ್ ಮಾದರಿಗಳ ಮಾರಾಟದಲ್ಲಿ ಶೇ.13.9 ರಷ್ಟು ಏರಿಕೆ ಕಂಡಿದೆ. ಹುಂಡೈ ಮೋಟಾರ್ಸ್ ಮಾರಾಟ ಶೇ. 24.7ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷದ ಜುಲೈನಲ್ಲಿ 29,275 ವಾಹನ ಮಾರಾಟ ಕಂಡಿದ್ದರೆ ಈ ಜುಲೈನಲ್ಲಿ 36,500 ವಾಹನ ಮಾರಾಟವಾಗಿದೆ. ಟಾಟಾ ಮೋಟಾರ್ಸ್ ಕಂಪನಿಯ ಪ್ರಯಾಣಿಕ ವಾಹನ ಮಾರಾಟದಲ್ಲೂ ಶೇ.27.1ರಷ್ಟು ಏರಿಕೆ ಕಂಡಿದ್ದು 8,520ಕ್ಕೆ ತಲುಪಿದೆ.

ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಿದ ಜೆಸ್ಟ್, ಬೋಲ್ಟ್, ಜೆನ್ ಎಕ್ಸ್‍ನ್ಯಾನೊ ಮಾದರಿಗಳು ಉತ್ತಮ ಮಾರಾಟ ಕಂಡಿವೆ ಎಂದು ಕಂಪನಿ ಹೇಳಿದೆ. ಹೋಂಡಾ ಕಾರ್ಸ್ ಇಂಡಿಯಾ ಮಾರಾಟದಲ್ಲೂ ಶೇ.18.44ರಷ್ಟು ಏರಿಕೆ ಯಾಗಿದೆ. ಕಳೆದ ವರ್ಷ 15,709 ವಾಹನ ಮಾರಾಟವಾಗಿದ್ದರೆ ಈ ವರ್ಷದ ಜುಲೈ ನಲ್ಲಿ 18,606 ವಾಹನ ಮಾರಾಟವಾಗಿದೆ. ಟೊ ಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಮಾರಾಟ ಶೇ.1.24ರಷ್ಟು ಏರಿಕೆಯಾಗಿದೆ.

ಕಳೆದ ವರ್ಷದ ಜುಲೈನಲ್ಲಿ 11,921 ವಾಹನ ಮಾರಾಟ ಕಂಡಿದ್ದರೆ ಈ ವರ್ಷ 12,070 ವಾಹನ ಮಾರಾಟವಾಗಿದೆ. ಹಾಗಿದ್ದರೂ ಮಹೀಂದ್ರ ಮತ್ತು ಮಹೀಂದ್ರ ಕಂಪನಿ ವಾಹನಗಳ ಮಾರಾಟ ಇಳಿಮುಖ ಕಂಡಿದೆ. ಕಳೆದ ವರ್ಷದ ಜುಲೈನಲ್ಲಿ ಕಂಪನಿ 33,047 ವಾಹನ ಮಾರಾಟ ಮಾಡಿದ್ದರೆ ಈ ವರ್ಷ ಈ ಮಾರಾಟ 31,087ಕ್ಕೆ ಇಳಿದಿದೆ. ದೇಶದಲ್ಲಿನ ವಾಹನ ಕ್ಷೇತ್ರದ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಕೆಲವು ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರಿಂದ ಮುಂದಿನ ದಿನಗಳಲ್ಲಿ ಮಾರಾಟದಲ್ಲಿ ಏರಿಕೆ ಕಾಣಬಹುದು ಎಂಬ ನಿರೀಕ್ಷೆಯನ್ನು ಎಂಅಂಡ್‍ಎಂ ಆಟೋಮೊಬೈಲ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕರಾದ ಪ್ರವೀಣ್ ಷಾ ಹೇಳಿದ್ದಾರೆ.

ಉತ್ತಮ ಮುಂಗಾರು ಮತ್ತು ಇಂಧನ ದರಗಳು ಇಳಿಮುಖ ಕಾಣುತ್ತಿರುವುದರಿಂದ ವಾಹನಗಳ ಮಾರಾಟ ಏರಿಕೆ ಕಾಣಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದ್ವಿಚಕ್ರ ವಾಹನ ವಿಭಾಗದಲ್ಲಿ ದೇಶದ ಪ್ರಮುಖ ಕಂಪನಿ ಹೀರೊ ಮೋಟರ್ ಕಂಪನಿ ವಾಹನ ಮಾರಾಟ ಶೇ.7.97ರಷ್ಟು ಇಳಿಮುಖ ಕಂಡಿದೆ. ಆದರೂ ಹೋಂಡಾ ಕಂಪನಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.2.15ರಷ್ಟು ಹೆಚ್ಚಳವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com