2020ರ ವೇಳೆಗೆ 20 ಸಾವಿರ ಕಂಪನಿ ಸ್ಥಾಪನೆ: ಸಿಎಂ ಸಿದ್ದರಾಮಯ್ಯ ಭರವಸೆ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಹಲವು ಕ್ರಮ ಕೈಗೊಳ್ಳುತ್ತಿದ್ದು, 2020ನೇ ಇಸವಿಯೊಳಗೆ...
ಬೆಂಗಳೂರಿನಲ್ಲಿ ಮಂಗಳವಾರ ಆರಂಭವಾದ ಐಟಿ ಬಿಜ್ ನಲ್ಲಿ ಸಿಎಂ ಸಿದ್ದರಾಮಯ್ಯ ಬ್ರೌಷರ್ ಬಿಡುಗಡೆ ಮಾಡಿದರು.
ಬೆಂಗಳೂರಿನಲ್ಲಿ ಮಂಗಳವಾರ ಆರಂಭವಾದ ಐಟಿ ಬಿಜ್ ನಲ್ಲಿ ಸಿಎಂ ಸಿದ್ದರಾಮಯ್ಯ ಬ್ರೌಷರ್ ಬಿಡುಗಡೆ ಮಾಡಿದರು.
Updated on: 
ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಹಲವು ಕ್ರಮ ಕೈಗೊಳ್ಳುತ್ತಿದ್ದು, 2020ನೇ ಇಸವಿಯೊಳಗೆ 20 ಸಾವಿರ ಕಂಪನಿಗಳು ಸ್ಥಾಪನೆಯಾಗಿ 6 ಲಕ್ಷ ನೇರ ಮತ್ತು 12 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಸುವ ಗುರಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು ಐಟಿ ಬಿಜ್ 18ನೇ ಆವೃತ್ತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಐಟಿ ಕ್ಷೇತ್ರದ ಸೃಜನಶೀಲ ಕಲ್ಪನೆಗಳ ಅನಾವರಣ ಕರ್ನಾಟಕಲ್ಲಾಗುತ್ತಿದೆ. ಸಾವಿರಾರು ಕಂಪನಿ
ಗಳ ಹುಟ್ಟಿಗೆ ಬೆಂಗಳೂರು ಕಾರಣವಾಗುತ್ತಿದ್ದು, ಭಾರತದ ಐಟಿ ರಾಜಧಾನಿ ಸ್ಟಾರ್ಟ್ ಅಪ್ ರಾಜಧಾನಿಯಾಗಿ ಯೂ ಹೊರಹೊಮ್ಮುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು. 
ತಾಂತ್ರಿಕತೆ, ನಾವೀನ್ಯತೆ ಮತ್ತು ಉದ್ಯಮಶೀಲತೆ ವಿಚಾರದಲ್ಲಿ ರಾಷ್ಟ್ರದಲ್ಲಿಯೇ ರಾಜ್ಯ ಮುನ್ನಡೆ ಸಾಧಿಸಿದೆ. ಮುಂಚಿನಿಂದಲೂ ತ್ರಾನ ಆಧಾರಿತ ಐಟಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಪರಿಸರ ರೂಪಿಸುತ್ತಾ ಬರಲಾಗಿದೆ. ಐಟಿ ಕ್ಷೇತ್ರದ ಅತಿ ದೊಡ್ಡ ಕ್ಲಸ್ಟರ್ ಎಂಬ ಹೆಗ್ಗಳಿಕೆಯನ್ನೂ ಹೊಂದಿರುವ ಬೆಂಗಳೂರು ಇದೀಗ ಸಂಶೋಧನೆ ಮತ್ತು ಅಭಿವೃ-ದ್ಧಿ ವಿಚಾರದಲ್ಲೂ ನೆಚ್ಚಿನ ತಾಣವಾಗುತ್ತಿದೆ. ಜಗತ್ತಿನ ದೊಡ್ಡ ಕಂಪನಿಗಳು ತಮ್ಮ ಆರ್ ಅಂಡ್ ಡಿ ಕೇಂದ್ರಗಳನ್ನು ಬೆಂಗಳೂರಿನಲ್ಲಿ ತೆರೆಯುತ್ತಿವೆ. ಇದಕ್ಕಾಗಿ ಸಾಕಷ್ಟು ಬಂಡವಾಳ ಹೂಡುತ್ತಿವೆ. ಪ್ರತಿಭೆಯ ಲಭ್ಯತೆ ಇದಕ್ಕೆ ಪ್ರಮುಖ ಕಾರಣ ಎಂದರು. 
ರಾಜ್ಯದಲ್ಲಿ 200ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿದ್ದು, ಪ್ರತಿ ವರ್ಷ 45 ಸಾವಿರಕ್ಕೂ ಹೆಚ್ಚು ಪದವೀಧರರು ಬರುತ್ತಿದ್ದಾರೆ. ಇದರಿಂ-ದಾಗಿ ಹೆಚ್ಚಿನ ಪ್ರತಿಭೆ ಲಭ್ಯವಾಗುತ್ತಿದೆ, ಐಟಿ ಕ್ಷೇತ್ರಕ್ಕೆ ಪೂರಕವಾದ ವಾತಾವರಣ ರೂಪಿಸುವಲ್ಲಿ ರಾಜ್ಯ ಸರ್ಕಾರ ಸಹ ನೀತಿಗಳನ್ನು ಜಾರಿಗೊಳಿಸಿದೆ ಎಂದು ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com