

ಮುಂಬೈ: ಆರ್ ಬಿಐ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ ಎಂದು ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಮಂಗಳವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರು ತೀವ್ರ ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟದ ನಡುವೆಯೂ ರೆಪೋ ರೇಟ್ ಹಾಗೇ ಉಳಿಸಿಕೊಳ್ಳಲಿದೆ. ಆರ್ಥಿಕ ನೀತಿ ನಿಯಮಗಳ ಕುರಿತು ರಘುರಾಮ್ ವರದಿ ನೀಡಿದ್ದು ಸಿಆರ್ ಆರ್ ದರ ಕೂಡಾ ಬದಲಾವಣೆ ಮಾಡಲಾಗಿಲ್ಲ.
ರೆಪೋ ದರ ಶೇ.7.75ರ ಪ್ರಮಾಣದಲ್ಲೇ ಮುಂದುವರೆದಿದೆ. ಸಿಆರ್ ಆರ್ ದರ ಶೇ.4ರಷ್ಟಿದೆ.