

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಮತ್ತೆ ಬಡ್ಡಿ ದರ ಇಳಿಸುವ ಸಾಧ್ಯತೆ ಇದೆ. ಮಂಗಳವಾರ ನಡೆಯಲಿರುವ ಹಣಕಾಸು ಪರಾಮರ್ಶೆ ವೇಳೆ ಈ ಘೋಷಣೆ ಹೊರಬೀಳಲಿದೆ ಎನ್ನಲಾಗಿದೆ. ಇದರಿಂದ ಗೃಹ, ವಾಹನ ಸೇರಿ ಎಲ್ಲ ಸಾಲದ ಇಎಂಐ ಇಳಿಕೆಯಾಗಲಿದೆ.
ಕುಸಿತ: ಹಣಕಾಸು ಪರಾಮರ್ಶೆ ನಡೆಯುವ ಮುನ್ನಾ ದಿನವೇ ಷೇರುಪೇಟೆ ಕುಸಿತ ಕಂಡಿದೆ. ಹೂಡಿಕೆದಾರರು ಷೇರು ಖರೀದಿಯಲ್ಲಿ ಆಸಕ್ತಿ ತೋರದ ಕಾರಣ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರ 61 ಅಂಕ ಕುಸಿದು, ದಿನಾಂತ್ಯಕ್ಕೆ 29,122ರಲ್ಲಿ ಕೊನೆ ಗೊಂಡಿತು. ನಿಫ್ಟಿ ಕೂಡ 11 ಅಂಕಗಳ ಕುಸಿತ ದಾಖಲಿಸಿ, 8,797ಕ್ಕೆ ವಹಿವಾಟು ಅಂತ್ಯಗೊಳಿಸಿತು.