ಬಿಎಸ್‍ಎನ್‍ಎಲ್‍ನಿಂದ ಮೊಬೈಲ್ ವಾಲೆಟ್ ಸೇವೆ

ಗ್ರಾಹಕರನ್ನು ಆಕರ್ಷಿಸಲು ಖಾಸಗಿ ದೂರ ಸಂಪರ್ಕ ಸೇವಾ ಕಂಪನಿಗಳು ವಿವಿಧ ಮೌಲ್ಯ ವರ್ಧಿತ ಸೇವೆಗಳನ್ನು ಒದಗಿಸುತ್ತಿವೆ. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಹ ಖಾಸಗಿ ಕಂಪನಿಗಳ ಜೊತೆ ಸ್ಪರ್ಧಾತ್ಮಕತೆ ಉಳಿಸಿಕೊಳ್ಳಲು ಹಲವು ರೀತಿಯ ಮೌಲ್ಯವರ್ಧಿತ ಸೇವೆಗಳನ್ನು ನೀಡಲು ಮುಂದಾಗಿದೆ...
ಬಿಎಸ್‍ಎನ್‍ಎಲ್
ಬಿಎಸ್‍ಎನ್‍ಎಲ್
Updated on: 

ನವದೆಹಲಿ: ಗ್ರಾಹಕರನ್ನು ಆಕರ್ಷಿಸಲು ಖಾಸಗಿ ದೂರ ಸಂಪರ್ಕ ಸೇವಾ ಕಂಪನಿಗಳು ವಿವಿಧ ಮೌಲ್ಯ ವರ್ಧಿತ ಸೇವೆಗಳನ್ನು ಒದಗಿಸುತ್ತಿವೆ. ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಹ ಖಾಸಗಿ ಕಂಪನಿಗಳ ಜೊತೆ ಸ್ಪರ್ಧಾತ್ಮಕತೆ ಉಳಿಸಿಕೊಳ್ಳಲು ಹಲವು ರೀತಿಯ ಮೌಲ್ಯವರ್ಧಿತ ಸೇವೆಗಳನ್ನು ನೀಡಲು ಮುಂದಾಗಿದೆ.

ಕಂಪನಿ ತನ್ನ ಪ್ರೀಪೇಯ್ಡ್ ಗ್ರಾಹಕರಿಗೆ `ಮೊಬೈಲ್ ವಾಲೆಟ್' ಸೇವೆಗೆ ಶುಕ್ರವಾರ ಚಾಲನೆ ನೀಡಿದ್ದು ಗ್ರಾಹಕರು ಹಣ ವರ್ಗಾವಣೆ, ಪಾವತಿ, ರು.1 ಲಕ್ಷದವರೆಗೂ ವಿತ್‍ಡ್ರಾ ಸೌಲಭ್ಯವನ್ನೂ ಕಲ್ಪಿಸಿದೆ. ಗ್ರಾಹಕರು ಬ್ಯಾಂಕ್ ಖಾತೆ ಹೊಂದಿಲ್ಲದಿದ್ದರೂ ಸ್ಪೀಡ್ ಪೇ ಮೂಲಕ ವಾಲೆಟ್ ಖಾತೆಗೆ ಹಣ ಜಮಾ ಮಾಡಬಹುದಾಗಿದೆ. ಗ್ರಾಹಕರು ಮೊಬೈಲ್ ವಾಲೆಟ್ ಮೂಲಕ ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಹುದು ಮತ್ತು ಬ್ಯಾಂಕ್ ಶಾಖೆ ಅಥವಾ ಬಿಎಸ್‍ಎನ್ಎಲ್ ಕಚೇರಿಗಳಲ್ಲಿ ವಿತ್‍ಡ್ರಾ ಮಾಡ ಬಹುದು ಎಂದು ಕೇಂದ್ರ ದೂರ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಶುಕ್ರವಾರ ಈ ಸೇವೆ ಚಾಲನೆ ನೀಡಿದ ನಂತರ ಹೇಳಿದ್ದಾರೆ.

ಒಂದು ವೇಳೆ ಬ್ಯಾಂಕ್ ಖಾತೆ ಇಲ್ಲದಿದ್ದಲ್ಲಿ ಬಿಎಸ್‍ಎನ್‍ಎಲ್ ಕೇಂದ್ರ ಕ್ಕೆ ತೆರಳಿ ಖಾತೆಗೆ ಹಣ ತುಂಬಬಹುದು ಎಂದು ಬಿಎಸ್‍ಎನ್‍ಎಲ್ ಸಿಎಂಡಿ ಅನುಪಮ್ ಶ್ರಿವಾತ್ಸವ ಹೇಳಿದ್ದಾರೆ. ಮಾಹಿತಿ ತಂತ್ರಜ್ಞಾನ ಸೇವಾ ಸಂಸ್ಥೆ ಪೈರೊ ಜೊತೆ ಸೇರಿ ಕಂಪನಿ ಈ ಸೇವೆ ಆರಂಭಿಸಿದೆ.  ಈ ಸೇವೆ ಮೂಲಕ ಬ್ಯಾಂಕ್ ಗೆ ಹಣ ವರ್ಗಾಯಿಸಿದರೆ, ವಿತ್ ಡ್ರಾ ಮಾಡಿದರೆ ಶೇ.1ರಷ್ಟು ಸೇವಾ ಶುಲ್ಕ ವಿಧಿಸಲಾಗುವುದು. ಪ್ರತಿದಿನ ನಗದು ಪಡೆವ ಮಿತಿ ರು.5 ಸಾವಿರ ಇದ್ದು ಗ್ರಾಹಕರ ಕೋರಿದರೆ ರು.1 ಲಕ್ಷವರೆಗೂ ಡ್ರಾ ಮಾಡಬಹುದು ಎಂದು ಪೈರೊ ಕಂಪನಿ ಸಿಇಒ ಪಾರಿತೋಷ್ ರೆಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com