

ನವದೆಹಲಿ: ಇರಾನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಡುವೆ ಪರಣಾಣು ಒಪ್ಪಂದ ಜಾರಿಯಾಗುತ್ತಿದ್ದಂತೆ ವಿಶ್ವಾದ್ಯಂತ ಕಚ್ಛಾ ತೈಲ ಬೆಲೆ ಇಳಿದಿತ್ತು.
ಅದಕ್ಕೆ ಪೂರಕವಾಗಿ ದೇಶೀಯ ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ರು.2ರಷ್ಟು ಕಡಿಮೆಮಾಡಿದೆ.
ಈ ಮೊತ್ತಕ್ಕೆ ವಿಧಿಸುವ ತೆರಿಗೆಯೂ ಕಡಿತವಾಗುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಂದಾಜು 2.50 ರೂ.ವರೆಗೂ ಇಳಿಯಲಿದೆ. ಆದರೆ ದೆಹಲಿ ವ್ಯಾಪ್ತಿಯಲ್ಲಿ ಆಪ್ ಸರ್ಕಾರ ವ್ಯಾಟ್ ಅನ್ನು ಹೆಚ್ಚಳ ಮಾಡಿದ್ದರಿಂದ ಅಲ್ಲಿಯ ಜನರಿಗೆ ದರ ಇಳಿಕೆಯ ಲಾಭ ಸಿಗದಂತಾಗಿದೆ.
ಬುಧವಾರ ಮಧ್ಯರಾತ್ರಿಯಿಂದ ಹೊಸ ದರ ಜಾರಿಗೆ ಬಂದಿದೆ. ದೇಶದ ಉಳಿದ ಭಾಗಕ್ಕೆ ಸಂಬಂಧಿಸಿದಂತೆ ಇದು ಎಱಡನೇ ಅತ್ಯಂತ ದೊಡ್ಡ ದರ ಇಳಿಕೆಯಾಗಿದೆ. ಸ್ಥಳೀಯವಾಗಿ ವಿಧಿಸಲಾಗುತ್ತಿರುವ ತೆರಿಗೆ ಅಥವಾ ವ್ಯಾಟ್ ಅನ್ನು ಆಧರಿಸಿ ವಿವಿಧ ರಾಜ್ಯ.ಗಳಲ್ಲಿ ಪೆಟ್ರೋಲ್, ಡೀಸೆಲ್ ದರ ವ್ಯತ್ಯಾಸಗೊಳ್ಳಲಿವೆ.