

ನ್ಯೂಯಾರ್ಕ್: ಜಗತ್ತಿನ 500 ಬೃಹತ್ ಕಂಪನಿಗಳ ಪಟ್ಟಿಯಲ್ಲಿ ಭಾರತದ ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್ ಸೇರಿ ದಂತೆ ಏಳು ಕಂಪನಿಗಳು ಸ್ಥಾನ ಪಡೆದಿವೆ.
ಫಾರ್ಚೂನ್ ಈ ಪಟ್ಟಿ ತಯಾರಿಸಿದ್ದು ರಿಟೇಲ್ ಕಂಪನಿ ವಾಲ್ ಮಾರ್ಟ್ ಮೊದಲ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಇಂಡಿಯನ್ ಆಯಿಲ್ 119, ರಿಲಯನ್ಸ್ ಇಂಡಸ್ಟ್ರೀಸ್ 158, ಟಾಟಾ ಮೋಟಾರ್ಸ್ (254), ಭಾರತೀಯ ಸ್ಟೇಟ್ ಬ್ಯಾಂಕ್ (260), ಭಾರತ್ ಪೆಟ್ರೋಲಿಯಂ (280), ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಒಎನ್‍ಜಿಸಿ (449)ನೇ ಸ್ಥಾನಗಳಲ್ಲಿವೆ.