

ಮೊಬೈಲ್ ಆಪ್ ಗಳ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ವಿಸ್ತರಿಸಿಕೊಳ್ಳಲು 'ವಂಡರ್ ಲಿಸ್ಟ್ ಟು ಡು' ಆಪ್ ವಿನ್ಯಾಸ ಮಾಡಿನ ಬರ್ಲಿನ್ ಮೂಲದ ಸಂಸ್ಥೆಯನ್ನು ಕೊಳ್ಳಲು ತಂತ್ರಜ್ಞಾನ ದೈತ್ಯ ಮೈಕ್ರೋಸಾಫ್ಟ್ ಮುಂದಾಗಿದೆ. ಈ ಒಪ್ಪಂದಕ್ಕೆ ಮೈಕ್ರೋಸಾಫ್ಟ್ ೨೦೦ ಮಿಲಿಯನ್ ಯು ಎಸ್ ಡಾಲರ್ ಗಳನ್ನು ವ್ಯಯಿಸಲಿದೆ.
ಮೈಕ್ರೋಸಾಫ್ಟ್ ಮೊಬೈಲ್ ಆಪ್ ಗಳ ಅಭಿವೃದ್ಧಿಗೆ ಇಳಿದ ಮೇಲೆ ಈಗಾಗಲೇ ಎರಡು ಸಂಸ್ಥೆಗಳನ್ನು ವಿಲೀನ ಮಾಡಿಕೊಂಡಿದೆ. ಅವುಗಳು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಅಕಾಂಪ್ಲಿ ಇಂಕ್ ಮತ್ತು ನ್ಯೂಯಾರ್ಕ್ ಮೂಲದ ಸನ್ ರೈಸ್ ಅಟೇಲಿಯರ್ ಇಂಕ್. ಎರಡೂ ಕೂಡ ಪ್ರಾರಂಭದ ದಿನಗಳ ಸಂಸ್ಥೆಗಳೇ.
ಮೊಬೈಲ್ ಈಮೇಲ್ ಆಪ್ ಗಳನ್ನು ಅಕಾಂಪ್ಲಿ ಅಭಿವೃದ್ಧಿ ಪಡಿಸುತ್ತಿದ್ದರೆ ಸನ್ ರೈಸ್ ಅಟೇಲಿಯರ್ ಮೊಬೈಲ್ ಕ್ಯಾಲೆಂಡರ್ ಆಪ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಈ ಎಲ್ಲಾ ಆಪ್ ಗಳು ಆಪಲ್ ಸಂಸ್ಥೆಯ ಐ ಒ ಎಸ್ ಫೋನುಗಳು ಮತ್ತು ಗೂಗಲ್ ಸಂಸ್ಥೆಯ ಆಂಡ್ರಾಯ್ಡ್ ಫೋನುಗಳಿಗೆ ಮಾಡಿದಂತಹುವು.
ಈ ತಿಂಗಳ ಪ್ರಾರಂಭದಲ್ಲಿ ೬ವಂಡರ್ ಕೈಂಡರ್ ಸಂಸ್ಥೆ('ವಂಡರ್ ಲಿಸ್ಟ್ ಟು ಡು' ಆಪ್ ವಿನ್ಯಾಸ ಮಾಡಿದ ಬರ್ಲಿನ್ ಮೂಲದ ಸಂಸ್ಥೆ) ಸನ್ ರೈಸ್ ಅಟೇಲಿಯರ್ ಜೊತೆಗೆ 'ಟು ಡು ಆಪ್' ಅಭಿವೃದ್ಧಿ ಪಡಿಸಲು ಒಪ್ಪಂದ ಮಾಡಿಕೊಂಡಿತ್ತು.
ಈ ಹೊಸ ಒಪ್ಪಂದದ ವ್ಯವಹಾರಗಳು ೬ವಂಡರ್ ಕೈಂಡರ್ ಸಂಸ್ಥೆಯ ಬರ್ಲಿನ್ ಮುಖ್ಯ ಕಚೇರಿಯಲ್ಲಿ ಜರುಗಲಿವೆ.