ಆರ್ ಕಾಂನಿಂದ ಸಿಸ್ಟೆಮಾ ಖರೀದಿ

ರಷ್ಯಾದ ಮೊಬೈಲ್ ಸೇವಾ ಕಂಪನಿ ಸಿಸ್ಟೆಮಾದ ಭಾರತೀಯ ವಿಭಾಗವನ್ನು ಖರೀದಿಸುವುದಾಗಿ ಅನಿಲ್ ಅಂಬಾನಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಷ್ಯಾದ ಮೊಬೈಲ್ ಸೇವಾ ಕಂಪನಿ ಸಿಸ್ಟೆಮಾದ ಭಾರತೀಯ ವಿಭಾಗವನ್ನು ಖರೀದಿಸುವುದಾಗಿ ಅನಿಲ್ ಅಂಬಾನಿ ಗ್ರೂಪ್ ಕಂಪನಿ ರಿಲಯನ್ಸ್ ಕಮ್ಯೂನಿಕೇಷನ್ಸ್ ಹೇಳಿದೆ.

ಸಿಸ್ಟೆಮಾ ಕಂಪನಿ ಎಂಟಿಎಸ್ ಹೆಸರಿನಲ್ಲಿ ಭಾರತದಲ್ಲಿ ದೂರಸಂಪರ್ಕ ಸೇವೆ ಒದಗಿಸುತ್ತಿದೆ. ಈ ಡೀಲ್‍ನ ಹಣಕಾಸು ವಿವರಗಳನ್ನು ಬಹಿರಂಗಗೊಳಿಸಿಲ್ಲ, ಆದರೂ ಡೀಲ್ ನಂತರವೂ ಕಂಪನಿಯಲ್ಲಿ ಸಿಸ್ಟೆಮಾ ಶ್ಯಾಮ್ ಟೆಲಿಸರ್ವೀಸಸ್ ಶೇ.10ರಷ್ಟು ಪಾಲು ಹೊಂದಿರಲಿದೆ ಎಂದು ಆರ್ ಕಾಂ ತಿಳಿಸಿದೆ. 
ಈ ಡೀಲ್‍ನೊಂದಿಗೆ ಆರ್ ಕಾಂಗೆ 90 ಲಕ್ಷ ಗ್ರಾಹಕರು ಮತ್ತು ವಾರ್ಷಿಕ ರು.1,500 ಕೋಟಿ ಹೆಚ್ಚಿನ ಆದಾಯ ಸೇರ್ಪಡೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com